ಮಹಾನಗರಪಾಲಿಕೆಯ ಆವರಣದಲ್ಲಿ ನಗರದ ಜ್ವಲಂತ ಸಮಸ್ಯೆಗಳ ವಿರುದ್ಧ ಪ್ರತಿಭಟನೆ

Protest against the city's burning issues at the Metropolitan Municipality premises

ಮಹಾನಗರಪಾಲಿಕೆಯ ಆವರಣದಲ್ಲಿ ನಗರದ ಜ್ವಲಂತ ಸಮಸ್ಯೆಗಳ ವಿರುದ್ಧ ಪ್ರತಿಭಟನೆ

ಬಳ್ಳಾರಿ 10 ; ಇಂದು ಬಳ್ಳಾರಿ ನಾಗರಿಕ ಹೋರಾಟ ಸಮಿತಿಯಿಂದ ಮಹಾನಗರಪಾಲಿಕೆಯ ಆವರಣದಲ್ಲಿ ನಗರದ ಜ್ವಲಂತ ಸಮಸ್ಯೆಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಶುದ್ಧ ಕುಡಿಯುವ ನೀರು ಒದಗಿಸಬೇಕು, ವಡ್ಡರಬಂಡೆಯ ರಾಜಕಾಲುವೆ ತುರ್ತಾಗಿ ದುರಸ್ತಿಗೊಳಿಸಬೇಕು, ಬೀದಿ ನಾಯಿ ಬಿಡಾಡಿ ದನಗಳ ಹಾವಳಿ ನಿಯಂತ್ರಿಸಬೇಕು, ಹಾಳಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು, ಮುಂತಾದ ಬೇಡಿಕೆಗಳಿಗಾಗಿ ಪ್ರತಿಭಟಿಸಲಾಯಿತು. 

ಈ ಸಂದರ್ಭದಲ್ಲಿ ಬಿಎನ್‌ಹೆಚ್‌ಎಸ್ ಸಂಚಾಲಕರಾದ ಆರ್‌.ಸೋಮಶೇಖರ ಗೌಡ ಮಾತನಾಡತ್ತಾ “ಬಳ್ಳಾರಿ ನಗರವು ಧೂಳುಮಯವಾಗಿದೆ, ಸೊಳ್ಳೆಗಳ ತಾಣವಾಗಿದೆ, ರಸ್ತೆಗಳಲ್ಲಿ ಬೀದಿ ನಾಯಿಗಳು, ಬಿಡಾಡಿ ದನಗಳಿಂದ ಭದ್ರತೆ ಇಲ್ಲದಾಗಿದೆ. ಬಹುತೇಕ ರಸ್ತೆಗಳಲ್ಲಿ ರಸ್ತೆ ಗಂಡಿಗಳು, ಅವೈಜ್ಞಾನಿಕ ವೇಗ ತಡೆಗಳು, ನಗರಾದ್ಯಂತ ಸದಾ ತಿರುಗುವ ಭಾರೀ ವಾಹನಗಳು, ಚರಂಡಿ ನೀರು ಮಿಶ್ರಿತ ಕುಡಿಯುವ ನೀರು, ವಾಹನಗಳಿಗೆ ಪಾರ್ಕಿಂಗ್ ಸಮಸ್ಯೆಗಳು, ಆದ್ಯತೆ ರಹಿತ ಕಾಮಗಾರಿಗಳು ಇಂತಹ ಅನೇಕ ಸಮಸ್ಯೆಗಳು ಜನರನ್ನು ಅತೀವ ಸಂಕಷ್ಟಕ್ಕೆ ತಳ್ಳಿವೆ. ಈಗಾಗಲೇ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯಿಂದ ಜಿಲ್ಲಾಡಳಿತಕ್ಕೆ, ಮಹಾನಗರ ಪಾಲಿಕೆಗೆ, ಬಳ್ಳಾರಿ ನಾಗರಿಕರ ಬೇಡಿಕೆಗಳನ್ನು ಪಟ್ಟಿ ಮಾಡಿ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ ಇದಕ್ಕೆ ಸಂಬಂಧಿಸಿದ ಪಾಲಿಕೆಯಿಂದ ಸೂಕ್ತ ಕ್ರಮಗಳೇ ಇಲ್ಲವಾಗಿದೆ. ಇದು ಮಹಾನಗರಪಾಲಿಕೆಯ ದಿವ್ಯ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿದೆ. ಈ ಹಿನ್ನಲೆಯಲ್ಲಿ ಜನರು ಬಡಾವಣೆ ಸಮಿತಿಗಳನ್ನು ರಚಿಸಿಕೊಂಡು, ನಿರಂತರವಾಗಿ ಹೋರಾಟಗಳನ್ನು ರೂಪಿಸಬೇಕು. ಆಗ ಮಾತ್ರ ಮಹಾನಗರಪಾಲಿಕೆ ಗಾಢ ನಿದ್ರೆಯಿಂದ ಎಚ್ಚರಗೊಳ್ಳುತ್ತದೆ” ಎಂದರು. 

ಸಲಹೆಗಾರರು, ನಿವೃತ್ತ ಉಪನ್ಯಾಸಕರು ನರಸಣ್ಣ ಅವರು ಮಾತನಾಡಿದರು. ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಸದಸ್ಯರಾದ ಡಾ.ಪ್ರಮೋದ್ ಅವರು ವಹಿಸಿದ್ದರು. ಸಲಹೆಗಾರರು, ನಿವೃತ್ತ ಮುಖ್ಯ ಇಂಜಿನಿಯರ್ ಉದ್ದಿಹಾಳ್, ಶ್ಯಾಂಸುಂದರ್, ನಾಗರತ್ನ, ಉಮಾಮಹೇಶ್, ಅಂತೋನಿ, ಉಮೇಶ್, ವಿದ್ಯಾ, ಸುರೇಶ್, ಈಶ್ವರಿ, ಶಾಂತಿ ಮುಂತಾದವರು ಉಪಸ್ಥಿತರಿದ್ದರು. 

ಮಹಾನಗರಪಾಲಿಕೆಯ ಆಯುಕ್ತರು ಮನವಿ ಸ್ವೀಕರಿಸಿ, ಸಮಸ್ಯೆಗಳ ಪರಿಹಾರಕ್ಕೆ ನಿರ್ದಿಷ್ಟ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. 

-: ಬೇಡಿಕೆಗಳು :- 

ಬೇಸಿಗೆ ಕಾಲಕ್ಕೆ ತಕ್ಕಂತೆ ಸಮರ​‍್ಕ ಶುದ್ಧ ಕುಡಿಯುವ ನೀರು ಪೂರೈಸಿ. ವಿದ್ಯುತ್ ಕಡಿತದಿಂದ ವಿಳಂಬವಾಗದಂತೆ ಮಾಡಲು ಎಕ್ಸ್‌ಪ್ರೆಸ್ ಲೈನ್ ಒದಗಿಸಿ. 

ಬೀದಿ ನಾಯಿ, ಬಿಡಾಡಿ ದನಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಿ. 

ವಡ್ಡರಬಂಡ ಹತ್ತಿರ ರಾಜಕಾಲುವೆ ಸೇತುವೆಯನ್ನು ತುರ್ತಾಗಿ ನಿರ್ಮಿಸಿ. 

ರಾಧಿಕಾ ಥಿಯೇಟರ್ ಎದುರಗುಡೆ, ರಸ್ತೆ ಹಳೆ ಸಂಗಮ್ ಥಿಯೇಟರ್ ಮುಂದಿನ ರಸ್ತೆಗಳನ್ನು ದುರಸ್ತಿ ಮಾಡಿ. 

ನಗರವ್ಯಾಪಿ ಎಲ್ಲಾ ರಸ್ತೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಕ್ರಮಕೈಗೊಳ್ಳಿ, ನೀರಿನ ಪೈಪ್ ಕನೆಕ್ಷೆನ್ ಹಾಗೂ ಇತರೆ ಕೆಲಸಗಳಿಗೆ ಅಗೆಯಲಾದ ರಸ್ತೆಗಳನ್ನು ದುರಸ್ತಿ ಮಾಡಿ. ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಿ. 

ಅವೈಜ್ಞಾನಿಕ ವೇಗ ತಡೆಗಳನ್ನು ತೆಗೆದುಹಾಕಿ, ವೈಜ್ಞಾನಿಕವಾಗಿ ವೇಗ ತಡೆಗಳನ್ನು ನಿರ್ಮಿಸಬೇಕು7.ಕೆಡವಲಾದ ಸಣ್ಣ ಮಾರುಕಟ್ಟೆ ಸ್ಥಳದಲ್ಲಿ ಮಾರುಕಟ್ಟೆ ಜೊತೆಗೆ ಕೆಳ ಮಹಡಿಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಿರಿ. 

8.ಸತ್ಯನಾರಾಯಣಪೇಟೆ ಕೆಳಸೇತುವೆಯಲ್ಲಿ ನೀರು ನಿಲ್ಲದಂತೆ ಮಾಡಲು ಸೂಕ್ತ ಕ್ರಮಕೈಗೊಳ್ಳಿ.9.ನಗರದ ಮನಿಯಾರ್ ಲೈನ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ವ್ಯವಸ್ಥಿತಗೊಳಿಸಿ. 

10.ಕಪ್ಪಗಲ್ಲು ರಸ್ತೆ ಬಸ್ ನಿಲ್ದಾಣಗಳನ್ನು ದುರಸ್ತಿಗೊಳಿಸಿ, ಸೂಕ್ತ ನಿರ್ವಹಣೆ ಮಾಡಿ. 

11.ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಿ, ಯಾವುದೇ ಕಾಮಗಾರಿ ನಡೆಯುವ ಸ್ಥಳದಲ್ಲಿ, ಇಲಾಖೆ, ಗುತ್ತಿಗೆದಾರರ ಹೆಸರು, ಅಂದಾಜು ವೆಚ್ಚ ಹಾಗೂ ಕಾಮಗಾರಿಗೆ ನಿಗದಿತ ಅವಧಿ ಸೂಚಿಸುವ, ಎಲ್ಲರಿಗೂ ಕಾಣುವಂತ ಸ್ಥಳದಲ್ಲಿ ಸೂಚನಾ ಫಲಕವನ್ನು ಹಾಕಿ. 

12.ರಂಗಮಂದಿರ ಎದುರುಗಡೆ ಇರುವ ಉದ್ಯಾನವನವನ್ನು ದುರಸ್ತಿ ಗೊಳಿಸಿ, ಸೂಕ್ತ ನಿರ್ವಹಣೆ ಮಾಡಿ. 

13.ನಗರದಲ್ಲಿ ಹದಗೆಟ್ಟಿರುವ ಟ್ರಾಫಿಕ್ ನಿರ್ವಹಣೆಯನ್ನು ಸರಿಪಡಿಸಲು ಸೂಕ್ತ ಕ್ರಮ. 

14.ಸಂತ ಮೇರಿ ಶಾಲೆಯ (ಸಂತ ಫಿಲೋಮೆನಾ ಬದಿಯಲ್ಲಿ-ಫುಡ್ ಕೋರ್ಟ್‌ ರಸ್ತೆ) ಮುಂಭಾಗದ ಸಿಸಿ ರಸ್ತೆಯಲ್ಲಿ ವೇಗದಿಂದ ಚಲಿಸುವ ವಾಹನಗಳಿಗೆ ಕಡಿವಾಣ ಹಾಕಲು, ವೈಜ್ಞಾನಿಕ ವೇಗ ತಡೆಗಳನ್ನು ನಿರ್ಮಿಸಿ.15. ನಗರದಲ್ಲಿ ಪ್ರಮುಖ ವೃತ್ತಗಳನ್ನು ಅನಾವಶ್ಯಕವಾಗಿ ಹೊಡೆದುಹಾಕಿ ಮತ್ತೆ ದುಂದುವೆಚ್ಚ ಮಾಡಿ ಮರುನಿರ್ಮಿಸುವುದನ್ನು ಬಿಟ್ಟು, ಜನರ ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ತೆಗೆದುಕೊಳ್ಳಿ.