ಕೊಪ್ಪಳ 27: ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ತೊರೆದು ಹೋದ ನವಜಾತ ಶಿಶುವನ್ನು ರಕ್ಷಿಸಿ, ಮಹಿಳಾ ಕಲ್ಯಾಣ ಸಮಿತಿಗೆ ಹಾಜರಪಡಿಸಿದೆ.
ದಿ. 23ರಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಯಲಬುಗರ್ಾರವರ ಕಛೇರಿಗೆ ಬಂದ ಮಾಹಿತಿಯ ಪ್ರಕಾರ ಜ. 21 ಯಾರೋ ಅಪರಿಚಿತರು ನವಜಾತ ಗಂಡು ಶಿಶುವನ್ನು ಯಲಬುಗರ್ಾ ತಾಲೂಕಿನ ವೀರಾಪುರ ಗ್ರಾಮದ ಹೋಲದ ಜಾಲಿ ಗಿಡದ ಮುಳ್ಳುಕಂಟಿಯ ಹತ್ತಿರ ತೂರೆದು ಹೋಗಿದ್ದು, ಅದೇ ಗ್ರಾಮದ ಜಯಮ್ಮ ಯಮನೂರಪ್ಪ ಎಂಬುವವರು ಬಹಿದಸರ್ೆಗೆಂದು ತೆರಳಿದಾಗ ಮಗು ಅಳುವ ಶಬ್ದವನ್ನು ಆಲಿಸಿ ಮಗುವನ್ನು ವಶಕ್ಕೆ ಪಡೆದು ಶುಚಿಗೊಳಿಸಿ ಸಲಹುತ್ತಿದಾರೆಂಬ ಮಾಹಿತಿ ಮೇಲೆ ಯಲಬುಗರ್ಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಕಛೇರಿಯ ಅಂಗನವಾಡಿ ಮೇಲ್ವಿಚಾರಕಿಯರಾದ ರಾಧಿಕಾ ಪವಾರ, ಜಯಮ್ಮ ಯಮನೂರಪ್ಪ ಹಾಗೂ ವೀರಾಪುರ ಗ್ರಾಮಸ್ಥರಿಗೆ ತೊರೆದು ಹೋದ, ಸಿಕ್ಕ ಮಕ್ಕಳನ್ನು ಸಾಕುವದು/ದತ್ತು ಪಡೆಯವದು ಕಾನೂನುಬಾಹಿರ ಕೃತ್ಯ ಎಂದು ತಿಳಿಸಿ, ಅವರುಗಳ ಮನವೋಲಿಸಿ ನವಜಾತ ಶಿಶುವನ್ನು ವಶಕ್ಕೆ ಪಡೆದು, ಮಗುವಿನ ಮೇಲಾದ ತೆರಚು ಗಾಯಗಳನ್ನು ಗಮನಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯ ಎಸ್.ಎನ್.ಸಿ.ಯು ಘಟಕಕ್ಕೆ ದಾಖಲಿಸಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿಯನ್ನು ನೀಡಿರುತ್ತಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು(ಅಸಾಂಸ್ಥೀಕ) ಪ್ರಶಾಂತ ರೆಡ್ಡಿರವರು ಮಗುವನ್ನು ವಶಕ್ಕೆಪಡೆದು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿಯನ್ನು ನೀಡಿ, ಹೆಚ್ಚಿನ ಚಿಕಿತ್ಸೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಭಾರತೀಯ ದಂಡ ಸಂಹಿತೆ ಕಲಂ 317ರಡಿಯಲ್ಲಿ ಯಾವುದೇ ಶಿಶು ಅಥವಾ ಮಗುವನ್ನು ಅದರ ಪಾಲನೆ ಮತ್ತು ಪೋಷಣೆ ಹೊಣೆಯಲ್ಲಿರುವ ಯಾರೇ ವ್ಯಕ್ತಿ ತೂರೆದು ಹೋಗುವದು ಶಿಕ್ಷಾರ್ಹ ಅಪರಾಧ ಎಂದು ಇದಕ್ಕೆ 7 ವರ್ಷದ ಕಠಿಣ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಿದೆ. ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರ ಕಲಂ 80 ರಡಿಯಲ್ಲಿ ಅಕ್ರಮವಾಗಿ ಮಗುವನ್ನು ಸಾಕುವದು/ ದತ್ತು ಪಡೆಯುವದು ಕಾನೂನುಬಾಹಿರ ಕೃತ್ಯವಾಗಿದ್ದು, ಈ ಕೃತ್ಯಕ್ಕೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ. 1 ಲಕ್ಷ ರೂಪಾಯಿ ದಂಡವನ್ನು ವಿಧಿಸಬಹುದಾಗಿದೆ.
ಆದ್ದರಿಂದ ಯಾವುದೇ ಕಾರಣದಿಂದ ಜನಿಸಿದ ಮಗುವನ್ನು ತಂದೆ ತಾಯಿ ಅಥವಾ ಪೋಷಕರು ಶಿಶು ಅಥವಾ ಮಗುವನ್ನು ಎಲ್ಲಿಂದರಲ್ಲಿ ತೂರೆದು ಹೋಗಿ ಶಿಕ್ಷೆಗೆ ಗುರಿಯಾಗದೇ, ಈ ರೀತಿಯಲ್ಲಿ ದೂರೆತ ಮಗುವನ್ನು ದತ್ತು ಪಡೆಯವದಾಗಿ ಅಕ್ರಮವಾಗಿ ಸಾಕಿ ಶಿಕ್ಷೆಗೆ ಗುರಿಯಾಗದೇ, ಅತಂಹ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಪಡಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು (ಅಸಾಂಸ್ಥೀಕ) ಪ್ರಶಾಂತ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.