ಜೀವ ಜಲವನ್ನು ಸಂರಕ್ಷಿಸಿ: ಲಲಿತಾ ದೊಡವಾಡ
ಧಾರವಾಡ 22: ಜೀವ ಜಲ ಜೀವವಿದ್ದಂತೆ ಅದನ್ನು ಸಂರಕ್ಷಿಸಿ ಎನ್ನುವ ಘೋಷಣೆಯೊಂದಿಗೆ ಜಲವು ಸಕಲ ಜೀವಿಗಳಿಗೆ ಬಹು ಮುಖ್ಯವಾಗಿದ್ದು, ಭೂಮಿಯ ಶೇಕಡಾ 75ರಷ್ಟು ನೀರು ಆವರಿಸಿದೆ. ಆದರೆ ಬಳಕೆಗೆ ಯೋಗ್ಯವಾದ ನೀರಿನ ಪ್ರಮಾಣ ಕೇವಲ ಶೇಕಡಾ2 ರಷ್ಟಿದೆ. ಈ ಪ್ರಮಾಣವು ಅಂತರ್ಜಲವನ್ನು ಅವಲಂಬಿಸಿರುವುದರಿಂದ ನೀರಿನ ಅಭಾವವಾಗುತ್ತಿದೆ. ಈ ಕೊರತೆ ಕಡಿಮೆ ಮಾಡಲು ನಾವು ಇಂದಿನಿಂದಲೇ ನೀರನ್ನು ಪೋಲು ಮಾಡದಂತೆ ಪಣ ತೊಡಬೇಕು ಎಂದು ಧಾರವಾಡ ಮಾಲಿನ್ಯ ನಿಯಂತ್ರಣಾಧಿಕಾರಿ ಲಲಿತಾ ದೊಡವಾಡ ಅವರು ಕರೆ ನೀಡಿದರು.
ಡಾ.ಡಿ.ಜಿ.ಶೆಟ್ಟಿ ಏಜ್ಯುಕೇಷನಲ್ ಸೊಸೈಟಿಯ ಆರ್.ಎಸ್.ಶೆಟ್ಟಿ ಕಾಲೇಜ ಆಫ್ ಕಾಮರ್ಸ್, ಹಾಗೂ ರುಕ್ಮೀಣಿ ಶೆಟ್ಟಿ ಮೆಮೊರಿಯಲ್ ಸುಧಾಕರ ಶೆಟ್ಟಿ ಬಿಸಿಎ ಕಾಲೇಜು ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ದಿ. 21ರಂದು ಆಚರಿಸಲಾದ ವಿಶ್ವಜಲ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಳೆ ನೀರನ್ನು ಸಮುದ್ರ ಸೇರದಂತೆ ತಡೆ ಹಿಡಿದು ಭೂಮಿಯಲ್ಲಿ ಇಂಗಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಅವಶ್ಯಕತೆಯಿದೆ ಎಂದು ಲಲಿತಾ ಮನವರಿಕೆ ಮಾಡಿದರು.
ಸಂಸ್ಥೆಯ ಅಧ್ಯಕ್ಷ ಡಾ.ಡಿ.ಜಿ.ಶೆಟ್ಟಿಯವರು ಮಾತನಾಡಿ ನೀರು ಹಾಗೂ ಸಮಯಕ್ಕೆ ಒಂದೇ ರೀತಿಯ ಪ್ರಾಧಾನ್ಯತೆಯನ್ನು ನೀಡಬೇಕು. ಎರಡು ಒಮ್ಮೆ ಪೋಲಾದರೆ ಮರಳಿ ಪಡೆಯುವುದು ಅಸಾಧ್ಯ. ನೀರನ್ನು ಸಂರಕ್ಷಿಸುವ ಕಾರ್ಯ ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು. ನಲ್ಲಿಗಳಲ್ಲಿ ನೀರು ಪೋಲಾಗುತ್ತಿರುವುದನ್ನು ನೋಡಿದರೆ ತಕ್ಷಣ ಹೋಗಿ ಪೋಲಾಗಂತೆ ನೋಡಿಕೊಳ್ಳಬೇಕು. ನೀರನ್ನು ಅವಶ್ಯಕತೆ ಇದ್ದಷ್ಟೇ ಬಳಕೆ ಮಾಡಿದರೆ ಮುಂದಿನ ಪೀಳಿಗೆಗೆ ನೀರು ದೊರಕುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಪ್ರೋ.ಎಸ್.ಎನ್.ಗುಡಿಯವರು ನಿರೂಪಿಸಿದರು. ಉಪಪ್ರಾಂಶುಪಾಲ ಡಾ.ಎಸ್.ಎಮ್.ಸಾಲಿಮಠ, ಪ್ರೋ. ರಶ್ಮಿ ಎಮ್.ಶೆಟ್ಟಿ, ಪ್ರೋ. ಗಂಗಾ ಯಲಿಗಾರ, ಪ್ರೋ. ಅನಿತಾ ಕೋರೆ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.