ಕೃಷಿಯ ಆಧಾರ ಮಣ್ಣಿನ ಫಲವತ್ತತೆ ರಕ್ಷಿಸಿ: ಐಹೊಳೆ

ಕಾಗವಾಡ 05: ಮಣ್ಣು ಕೃಷಿಯ ಆಧಾರ. ಮಣ್ಣು ಫಲವತ್ತಾಗಿದ್ದಲ್ಲಿ ಕೃಷಿ ಸದೃಢ, ಮಣ್ಣಿನ ಫಲವತ್ತತೆ ವೃದ್ಧಿಸಿ ಹೆಚ್ಚು ಉತ್ಪಾದನೆ ಸಾಧಿಸಿ, ಮಣ್ಣಿನ ಆರೋಗ್ಯವನ್ನು ಕಾಪಾಡೋಣ. ಮಣ್ಣು ಆರೋಗ್ಯಜೀವಿ, ಭೂಮಿಯ ಆರೋಗ್ಯವನ್ನು ಕಾಪಾಡುವ ಜತೆಗೆ ಪೋಷಕಾಂಶದ ಕೊರತೆಯನ್ನು ನೀಗಿಸಿ, ಉತ್ತಮ ಇಳುವರಿಯನ್ನು ನೀಡಲು ರಾಜ್ಯ ಸರಕಾರ ಹಮ್ಮಿಕೊಂಡ ಯೋಜನೆಗೆ "ಮಣ್ಣು ಆರೋಗ್ಯ ಅಭಿಯಾನ" ಕಾರ್ಯಕ್ರಮಕ್ಕೆ ರೈತರು ಸಹಕರಿಸಿರಿ ಎಂದು ಬೆಳಗಾವಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಆಶಾತಾಯಿ ಐಹೊಳೆ ಕರೆ ನೀಡಿದರು. 

ಬುಧವಾರ ದಿ. 5ರಂದು ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಕನರ್ಾಟಕ ಸರಕಾರದ "ವಿಶ್ವ ಮಣ್ಣು ಆರೋಗ್ಯ ದಿನಾಚರಣೆ" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಚಿಕ್ಕೋಡಿ ಜಿಲ್ಲೆಯ ಉಪಕೃಷಿ ನಿದರ್ೇಶಕ ಎಚ್.ಡಿ.ಕೋಳೆಕರ್ ಇವರು ಮಾತನಾಡುವಾಗ, ವಿಶ್ವದ ಥೈಲ್ಯಾಂಡ್ ದೇಶದಲ್ಲಿಯ ಕಿಂಗ್ 'ಮಿನಿಒರ್ ರಾಜಾ ವಿಜ್ಞಾನಿಯಾಗಿದ್ದರು. ಅವರು ಮಣ್ಣಿನ ಮೇಲೆ ಅನೇಕ ಪ್ರಯೋಗಗಳನ್ನು ಮಾಡಿದ್ದರು. ಫಲವತ್ತವಾದ ಬೆಳೆ ಬೆಳೆಯುವುದು, ಅವರ ಹವ್ಯಾಸವಾಗಿತ್ತು. ಅವರ 5 ಡಿಸೆಂಬರ್ ಹುಟ್ಟು ಹಬ್ಬದ ದಿನದಂದು ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಮಣ್ಣಿನ ಅವಶ್ಯಕ ಗುಣ ತಿಳಿಯದೆ ಅಗತ್ಯವಿಲ್ಲದ ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಹದೆಗೆಡುತ್ತಿದೆ. ಮಣ್ಣಿನ ಗುಣ ಲಕ್ಷಣಗಳು ತಿಳಿದು ಅದಕ್ಕೆ ಅನು ಗುಣವಾಗಿ ಬೆಳೆ ಪೋಷಕಾಂಶಗಳನ್ನು ನಿರ್ಧರಿಸುವುದರಿಂದ ಇಳುವರಿ ಮತ್ತು ಆದಾಯವನ್ನು ಹೆಚ್ಚಿಸಲು ಸಾಧ್ಯವಿದೆ. ಮಣ್ಣಿನ ಆರೋಗ್ಯದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಲು ಮುಂದಾಗಿದೆ. ಇದರ ಸದುಪಯೋಗ ಎಲ್ಲ ರೈತರು ಪಡೆದುಕೊಳ್ಳಬೇಕೆಂದು ಮಣ್ಣು ವಿಶೇಷ ತಜ್ಞ ಸಂಕೇಶ್ವರ ಕೃಷಿ ಸಂಶೋಧನ ಕೇಂದ್ರದ ಡಾ. ಎಸ್.ಎಸ್.ನುಲಿ, ಅರಭಾವಿ ಕೃಷಿ ವಿಶ್ವ ವಿದ್ಯಾಲಯದ ಡೀನ ಡಾ. ನಾಗೇಶ ನಾಯಿಕ, ಡಾ.ಸೈಯದ್ ಮುಲ್ಲಾ, ಡಾ.ಸತೀಶ ಪಾಟೀಲ, ಡಾ.ಎಚ್.ಪಿ.ಹಾದಿಮನಿ, ಡಾ. ಆಯ್.ಬಿ.ಬಿರಾದಾರ ಇವರು ಮಣ್ಣಿನ ಪರೀಕ್ಷೆ, ಕಬ್ಬು ಬೆಳೆ, ತರಕಾರಿ ಬೆಳೆ ಬೆಳೆಯಲು ಹಳೆಯ ಪರಂಪರೆ ಕೃಷಿ ಪದ್ಧತಿ ತೊಲಗಲಿ ಹನಿ ನೀರಾವರಿ ಯೋಜನೆ ಬಳಿಸಿ, ಯಾವ ರೀತಿ ಒಳ್ಳೆಯ ಬೆಳೆ ಬೆಳೆಯುವುದು ಎಂಬ ಬಗ್ಗೆ ಮಾಹಿತಿ ರೈತರಿಗೆ ನೀಡಿದರು.

ಅಥಣಿ ತಾಲೂಕಾ ಸಹಾಯಕ ಕೃಷಿ ನಿದರ್ೇಶಕಿ ಜಿ.ಐ.ಹಿರೇಮಠ ಇವರು ತಾಲೂಕಾ ಮಟ್ಟದ ಸಮಾರಂಭದಲ್ಲಿ ಪಾಲ್ಗೊಂಡ ರೈತರನ್ನು ಅಭಿನಂದಿಸಿ, ಮಣ್ಣು ಪರೀಕ್ಷೆ ಮಾಡಿದ ಪತ್ರವನ್ನು ರೈತರಿಗೆ ಅತಿಥಿಗಳಿಂದ ವಿತರಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಇಕಬಾಲ ಕನವಾಡೆ ಅಧ್ಯಕ್ಷತೆ ವಹಿಸಿದರು. ಗ್ರಾಪಂ. ಉಪಾಧ್ಯಕ್ಷೆ ಸುನಂದಾ ನಾಂದಣಿ, ಪಿಡಿಒ ಗೋಪಾಲ ಮಾಳಿ, ಸದಸ್ಯರಾದ ರಾಮಗೌಡಾ ಪಾಟೀಲ, ಕಾಡಗೌಡಾ ಪಾಟೀಲ, ಭಾವುಸಾಹೇಬ ಕಾಗವಾಡೆ, ಪಂಡಿತ ವಡ್ಡರ್, ವಿದ್ಯಾಧರ ಕಾಂಬಳೆ, ಮಿನಾಕ್ಷಿ ಕುಂಬಾರ, ಅನೀತಾ ಕಾಂಬಳೆ, ಸುಶ್ಮಾ ಸುತಾರ್, ರಶ್ಮಿ ಅಕಿವಾಟೆ, ಅರ್ಚನಾ ಕಾಟಕರ್, ಕಾರ್ಯದಶರ್ಿ ಶಿವಾನಿ ಜಾಧವ್, ಎಸ್.ಡಿ.ಎ. ಭೀಮಾಶಂಕರ ಧಂದರಗಿ, ಅರಭಾವಿ ಕೃಷಿ ವಿಶ್ವ ವಿದ್ಯಾಲಯದ ಅಧ್ಯಯನ ವಿದ್ಯಾಥರ್ಿಗಳು, ಪ್ರಾಧ್ಯಾಪಕರು, ರೈತರು ಪಾಲ್ಗೊಂಡಿದ್ದರು.