ಮನುಕುಲದ ಏಳ್ಗೆಗೆ ಶಾಂತಿ ಸಂದೇಶ ಸಾರಿದ ಪ್ರವಾದಿ ಮಹಮ್ಮದ್ ಪೈಗಂಬರ್: ಹಿಟ್ನಾಳ

ಲೋಕದರ್ಶನ ವರದಿ

ಕೊಪ್ಪಳ 21: ಹಜರತ್ ಮಹಮ್ಮದ್ ಪೈಗಂಬರ್ ಜನ್ಮದಿನಾಚಾರಣೆಯ ಈದ್ ಮೀಲಾದ್ ಸಂಭ್ರಮಚಾರಣೆಯಲ್ಲಿ ಪಾಲ್ಗೊಂಡು ಮುಸ್ಲಿಂ ಸಮಾಜದಿಂದ ಸನ್ಮಾನ ಸ್ವಿಕರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ ಸತ್ಯೆ ನಿಷ್ಠೆ ಅಹಿಂಸಾ ಹಾಗೂ ಶಾಂತಿ ಸಹಬಾಳ್ವೆಯ ಸಂದೇಶ ನೀಡಿದ ಪ್ರವಾದಿಯವರು ಪ್ರತಿಯೊಬ್ಬ ಮುಸಲ್ಮಾನರು ಕಡ್ಡಾಯವಾಗಿ ಐದು ಬಾರಿ ನಮಾಜು ನಿರ್ವಹಣೆ ಮಾಡಬೇಕು. ಪವಿತ್ರ ಖುರಾನಿನ ತತ್ವದಡಿಯಲ್ಲಿ ತಮ್ಮ ಜೀವನ ಸಾಗಿಸಬೇಕು ತಮ್ಮಂತೆ ಇತರರನ್ನು ಬಾವಿಸಿ ದೀನ ದಲಿತರ, ಅನಾತರನ್ನು ಗೌರವಿಸಿಬೇಕು. ಸಮಾಜದಲ್ಲಿ ಸ್ತ್ರೀಯರಿಗೆ ಉನ್ನತ ಸ್ಥಾನಮಾನವನ್ನು ಸಿಗುವಂತೆ ಯಾಗಬೇಕು. ಇತರರನ್ನು ನೋವಿಸದೆ ತಮ್ಮ ಜೀವನ ಸಾಗಿಸಿದಾಗ ಮಾತ್ರ ಮೊಕ್ಷಹೊಂದಲು ಸಾಧ್ಯವೆಂದು ಹೇಳಿದ ಪ್ರವಾದಿಯವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಮಾತನಾಡಿದ ಹಿರಿಯ ಮುಖಂಡ ಶಾಂತಣ್ಣ ಮುದುಗಲ್ ರವರು ಇಸ್ಲಾಂ ಧಮವು ಮಾನವಿಯ ಮೌಲ್ಯಗಳ ಆಧಾರದ ಧರ್ಮವಾಗಿದ್ದು, ಸರ್ವರನ್ನು ಸಮಾನವಾಗಿ ಕಂಡು ಎಲ್ಲಾ ಮನುಕೂಲ ಒಂದೇ ಎನ್ನುವ ತಿರುಳು ಸಾರುವ ಧರ್ಮವಾಗಿದೆ ಎಂದು ಹೇಳಿದರು.

ಧರ್ಮ ಗುರುಗಳಾದ ಮುಫ್ತಿ ನಜೀರ್ ಅಹೇಮದ್ ತಸ್ಕಿನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಡಿ, ಇಸುಫಿಯಾ ಮಜೀದ್ ಅಧ್ಯಕ್ಷ ಹಜ್ಜು ಖಾದ್ರಿ, ಮುಖಂಡರುಗಳಾದ ಮಹೇಂದ್ರ ಚೋಪ್ರಾ, ಬಾಷುಸಾಬ್ ಕತೀಬ್, ಅಮ್ಜದ್ ಪಟೇಲ್,ಸಾಬೀರ್ ಹುಸ್ಸೇನಿ, ನವೋದಯ ವೀರುಪಣ್ಣ, ಪ್ರಸನ್ನ ಗಡಾದ, ಬಸವರಾಜ ಬಳ್ಳೂಳ್ಳಿ, ಕಾಟನ್ ಪಾಷಾ, ಗವಿಸಿದ್ದಪ್ಪ ಮುದುಗಲ್, ರಾಜಶೇಖರ ಆಡೋರ, ಸಿದ್ದು ಮ್ಯಾಗೇರಿ, ಶಿವಕುಮಾರ ಕುಕನೂರು, ಮಕ್ಬುಲ್ ಸಾಬ್ ಮನಿಯಾರ್, ಇಕ್ಬಾಲ್ ಸಿದ್ದಕಿ, ವೀರುಪಾಕ್ಷಪ್ಪ ಮೋರನಾಳ, ಯಂಕನಗೌಡ್ರು ಹೊರತ್ಟನಾಳ, ನಾಗರಾಜ ಬಳ್ಳಾರಿ, ಅಜೀಮ್ ಅತ್ತಾರ, ಅಜೀಮ್ ನಾಸ್ವಾಲೆ, ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.