ಲೋಕದರ್ಶನ ವರದಿ
ಗದಗ 27: ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಒಬ್ಬ ವ್ಯಕ್ತಿ ಯೋಗ್ಯ ವಿಧ್ಯಾಭ್ಯಾಸಕ್ಕೆ ತಕ್ಕಂತೆ ಯೋಗ್ಯ ಕೆಲಸ ಪಡೆಯಬೇಕೆಂದರೆ ಹರಸಾಹಸ ಪಟ್ಟರೂ ಸೂಕ್ತ ಕೆಲಸ ಸಿಗುವದಿಲ್ಲ. ಎಷ್ಟೋ ವಿಧ್ಯಾವಂತರು ಸೂಕ್ತ ಉದ್ಯೋಗಾವಕಾಶಗಳು ಸಿಗದೇ ನಿರುದ್ಯೋಗಿಗಳಾಗಿ ಕಾಲಹರಣ ಮಾಡಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರುದ್ಯೋಗಿ ತನ್ನದೇ ಆದ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಸರಕಾರದಿಂದ ಸಿಗುವ ಇಂತಹ ಉದ್ಯಮಶೀಲತಾ ತರಬೇತಿಗಳನ್ನು ಪಡೆದು ಸಧೃಢ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಹೆಚ್ಕೆ ಪಾಟೀಲ ಕರೆ ನೀಡಿದರು.
ಅವರು ಹುಲಕೋಟಿ ರೂರಲ್ ಇಂಜಿನೀಯರಿಂಗ ಕಾಲೇಜಿನ ಸಭಾಂಗಣದಲ್ಲಿ ಕನರ್ಾಟಕ ಸಕರ್ಾರದ ಕೈಮಗ್ಗ ಮತ್ತು ಜವಳಿ ಇಲಾಖೆ, ಜವಳಿ ಹಾಗೂ ರೂರಲ್ ಇಂಜಿನೀಯರಿಂಗ ಕಾಲೇಜು ಜವಳಿ ತಂತ್ರಜ್ಞಾನ ವಿಭಾಗದ ಸಹಯೋಗದಲ್ಲಿ ನೂತನ ಜವಳಿ ನೀತಿ ಯೋಜನೆಯಡಿ ನಡೆಯುತ್ತಿರುವ 2 ದಿನಗಳ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಕೈಮಗ್ಗ ಮತ್ತು ಜವಳಿ ಇಲಾಖೆ ಈ 2 ದಿನಗಳ ತರಬೇತಿಯಲ್ಲಿ ಎಮ್ಎಸ್ಎಮ್ಇ ಮತ್ತು ವಿವಿಧ ಯೋಜನೆಗಳಿಗೆ ಯೋಜನಾ ವರದಿ ತಯಾರಿಸುವುದು, ಜವಳಿ ಘಟಕಗಳಿಗೆ ಸಂಭಂಧಿಸಿದಂತೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಯೋಜನೆಗಳ ಮಾಹಿತಿ, ತರಬೇತಿ ಸಮಯದಲ್ಲಿ ಕಾರ್ಯನಿರತ ಜವಳಿ ಘಟಕಗಳಿಗೆ ಪರಿವೀಕ್ಷಣಾ ಪ್ರವಾಸದೊಂದಿಗೆ ಭೇಟಿ ಮಾಡಿ ಮಾಹಿತಿ, ಸ್ವಂತ ಜವಳಿ ಉದ್ಯಮಗಳನ್ನು ಹೇಗೆ ಸ್ಥಾಪಿಸುವುದು, ಸ್ಥಳೀಯವಾಗಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಹೇಗೆ ದೊರಕಿಸಿಕೊಡುವುದು ಎಂಬುದನ್ನು ಈ ತರಬೇತಿಯಲ್ಲಿ ತಿಳಿದು ಮುಂದಿನ ಭವಿಷ್ಯ ರೂಪಿಸಿಕೊಂಡು ಉತ್ತಮ ಉದ್ಯೋಗಾವಕಾಶಗಳನ್ನು ಹೊಂದಬೇಕು ಎಂದು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಪಿ ಬಳಿಗಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಮಂಜುನಾಥ ಚವ್ಹಾಣ, ಕನರ್ಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯ ಪ್ರಾಂಶುಪಾಲ ಹಾಗೂ ಜಂಟಿ ನಿದರ್ೇಶಕ ಎಚ್. ಎಸ್ ಸೋಮನಗೌಡ್ರ, ರೂರಲ್ ಇಂಜಿನೀಯರಿಂಗ್ ಕಾಲೇಜಿನ ಪ್ರಾಂಶುಪಾಲ ವಿ.ಎಮ್ ಪಾಟೀಲ, ರೂರಲ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಎಲ್. ಎಚ್ ಕಾಲವಾಡ, ಜವಳಿ ವಿಭಾಗದ ರೂರಲ್ ಇಂಜಿನೀಯರಿಂಗ ಕಾಲೇಜಿನ ಮುಖ್ಯಸ್ಥ ಎಲ್.ಆರ್ ಸೋಮನಗೌಡ್ರ, ಪ್ರೋ. ನಾಡಗೌಡ್ರ, ಪ್ರೋ. ನಿಡಗುಂದಿ ಇನ್ನೂ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಎಲ್. ಆರ್ ಸೋಮನಗೌಡ್ರ, ನಿರೂಪಣೆಯನ್ನು ಎನ್.ಎಸ್ ಬೊಮ್ಮಣ್ಣಿ ಹಾಗೂ ಪ್ರಾರ್ಥನೆಯನ್ನು ಕುಮಾರ ಕಿರಣ ಪಾಟೀಲ ನೆರವೇರಿಸಿದರು.