ಲೋಕದರ್ಶನ ವರದಿ
ಹೂವಿನಹಡಗಲಿ 18: ಬರ ನಿರ್ವಹಣೆ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಹೆಚ್ಚಿನ ಹಣ ವಸೂಲಿ,ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ, ಪಟ್ಟಣದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಸಮರ್ಪಕ ಔಷಧ ಕೊಡದೇ ರೋಗಿಗಳಿಗೆ ವಂಚನೆ,ಗುಳೆ ತಪ್ಪಿಸಲು ಸಮರ್ಪಕ ಉದ್ಯೋಗ ಸೃಷ್ಠಿ,ಹಗರನೂರು ಗ್ರಾ.ಪಂ.ಅಧ್ಯಕ್ಷರ ವಿರುದ್ಧ ಕ್ರಮ ನಾನಾ ವಿಷಯಗಳು ತಾ.ಪಂ.ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದವು. ತಾಲೂಕು ಬರಪೀಡಿತ ಎಂದು ಘೋಷಣೆಯಾಗಿದ್ದು,ಬರ ನಿವರ್ಾಹಣೆಗೆ ಸಂಬಂಧಿಸಿದ ಇಲಾಖೆ ಮತ್ತು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು ಎಂದು ತಾ.ಪಂ.ಇಒ ಯು.ಎಚ್.ಸೋಮಶೇಖರ ಹೇಳಿದರು.
50ಲಕ್ಷ ಕ್ರಿಯಾ ಯೋಜನೆ: ಬೇಸಿಗೆ, ಬರಗಾಲದಲ್ಲಿ ಸಮಯದಲ್ಲಿ ಕುಡಿಯುವ ನೀರಿನ ಕುಡಿಯುವ ನೀರಿನ ನಿರ್ವಹಣೆಗಾಗಿ 50ಲಕ್ಷ ಕ್ರಿಯಾ ಯೋಜನೆ ಸಲ್ಲಿಸಲಾಗಿದ್ದು, ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ಬಗ್ಗೆ ಮಾಹಿತಿ ನೀಡಿರಿ ಎಂದರು.ಇಟ್ಟಿಗಿಯಲ್ಲಿ ನೀರಿನ ಸಮಸ್ಯೆ ಬಗ್ಗೆ ಸದಸ್ಯ ಲೋಕಪ್ಪ ಗಮನ ಸೆಳೆದಾಗ ಕೊಳವೆ ಬಾವಿ ಹಾಕಿಸುವುದಾಗಿ ಹೇಳಿದರು.
ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಹಣ ವಸೂಲಿ: ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಹೆಚ್ಚಿನ ಹಣ ವಸೂಲಿ ಮಾಡಿದರೇ ಇತ್ತ ಸಕರ್ಾರಿ ಆಸ್ಪತ್ರೆಯ ವೈದ್ಯರು ಖಾಸಗಿ ಆಸ್ಪತ್ರೆಗಳನ್ನು ತೆರೆದು ಹಣ ವಸೂಲಿಗೆ ಮಾಡುವ ಜತೆಗೆ ಸಕರ್ಾರದಿಂದ ಸರಬರಾಜು ಆಗುವ ಔಷಧಿಗಳನ್ನು ಸಾರ್ವಜನಿಕರಿಗೆ ನೀಡದೇ ಹೊರಗಡೆ ಚೀಟೆ ಕೊಡುತ್ತಿದ್ದಾರೆಂದು ಸದಸ್ಯ ಶಿವರಾಜ್ ಸಭೆಗೆ ದೂರಿದರು.
ಪಂಚಾಯ್ತಿ ಅಧ್ಯಕ್ಷರ ವಿರುದ್ಧ ಕ್ರಮ : ಗ್ರಾಮ ವಿಕಾಸ ಯೋಜನೆಗೆ ಬಿಡುಗಡೆಯಾದ ಹಣವನ್ನು ಹಗರನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರು ಅನುಷ್ಠಾನ ಏಜೆನ್ಸಿಗೆ ವಗರ್ಾವಣೆ ಮಾಡದೇ ಅಭಿವೃದ್ದಿ ಕೆಲಸಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಈಗಾಗಲೇ ಜಿ.ಪಂ.ಸಿಇಒ ಮತ್ತು ಬರದಿಂದ ಗ್ರಾಮೀಣ ಪ್ರದೇಶದ ಜನರು ಗುಳೆ ಹೊಗದಂತೆ ತಡೆಯಲು ಪಂಚಾಯ್ತಿಗಳಿಂದ ಅವರಿಗೆ ನರೇಗಾ ಯೋಜನೆಯಡಿ ಕೆಲಸ ನೀಡಿ ಅವರಿಗೆ ನಿಗದಿತ ದಿನದಲ್ಲಿಯೇ ಕೂಲಿ ಪಾವತಿಸಲು ಕ್ರಮವಹಿಸಬೇಕು ಎಂದು ನಿದರ್ೇಶನ ನೀಡಿದರು ತಾ.ಪಂ.ಯಿಂದ ಜಾರಿ ಮಾಡಿದರೂ ಅವರು ಸ್ಪಂದಿಸಿಲ್ಲ.ಕೂಡಲೇ ಪಂಚಾಯತ್ ರಾಜ್ಯ ಅಧಿನಿಯಮ 49ರ ಅಡಿಯಲ್ಲಿ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಇಒ ಸೋಮಶೇಖರ ಹೇಳಿದರು.
30 ಋತಮಾನ ಶಾಲೆ : ಶಿಕ್ಷಣ ಇಲಾಖೆಯಲ್ಲಿ ಪ್ರತಿವರ್ಷದಂತೆ ಗುಳೇ ಹೋಗುವ ಪಾಲಕರ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದನ್ನು ತಪ್ಪಿಸಲು ತಾಲೂಕಿನಲ್ಲಿ 30ಋತಮಾನ ಶಾಲೆಗಳಲ್ಲಿ ಕಲಿಗೆ ಸಾಮಾಗ್ರಿಗಳ ಜತೆಗೆ ವಸತಿ,ಊಟ ನೀಡಲಾಗುತ್ತದೆ ಎಂದ ಅವರು ಕಳೆದ ಬಾರಿ 10ನೇತರಗತಿಯಲ್ಲಿ ನೂರಕ್ಕೆ ನೂರಷ್ಟು ಫಲಿತಾಂಶ ಪಡೆದ ವಿದ್ಯಾಥರ್ಿಗಳು,ಶಿಕ್ಷಕರಿಗೆ ದೆಹಲಿ ಪ್ರವಾಸ ಕೈಗೊಳ್ಳಲಾಗಿದೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಶಿವಪುರ ಹೇಳಿದರು.
ಹೊಳಲು ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ,ವಿಜ್ಞಾನ ವಿಭಾಗ ಇಲ್ಲದೇ ವಿದ್ಯಾಥರ್ಿಗಳಿಗೆ ತೊಂದರೆಯಾಗಿದೆ ಎಂದು ಸದಸ್ಯ ಬಸವರಾಜ ಸಭೆಗೆ ತಿಳಿಸಿದಾದ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಬಿಇಒ ಹೇಳಿದರು.ಸಭೆಯಲ್ಲಿ ಅಧ್ಯಕ್ಷೆ ಕೆ.ಶಾರದಮ್ಮ, ಉಪಾಧ್ಯಕ್ಷೆ ಪುಷ್ಪಾವತಿ,ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ,ಅಧಿಕಾರಿಗಳು ಇದ್ದರು.