ಕಮಲಾಪುರ ಶಾಖೆಯಿಂದ ಬ್ಯಾಂಕಿನ ಆರ್ಥಿಕ ಸೌಲಭ್ಯಗಳ ಹಾಗೂ ಯೋಜನೆಗಳ ಕುರಿತು ಕಾರ್ಯಕ್ರಮ
ಹಂಪಿ 20: ನೌಕರರು ಯೋಜನಾಬದ್ಧ ಆರ್ಥಿಕ ಉಳಿತಾಯ ಶಿಸ್ತನ್ನು ರೂಢಿಸಿಕೊಳ್ಳಬೇಕು, ನಿವೃತ್ತಿಯ ನಂತರ ಬೇರೆಯವರ ಮೇಲೆ ಬದುಕಿಗಾಗಿ ಅವಲಂಬಿತರಾಗುವುದು ತಪ್ಪುತ್ತದೆ. ಪ್ರಸ್ತುತ ಕಾಲದಲ್ಲಿ ಬ್ಯಾಂಕ್‌ಗಳಿಂದ ವಿವಿಧ ಆರ್ಥಿಕ ಸಂಸ್ಥೆಗಳಿಂದ ಅನೇಕ ರೀತಿಯ ಅಂದರೆ ಮ್ಯೂಚುವಲ್ ಫಂಡ್, ಷೇರು ಖರೀದಿ, ಗೃಹ ಸಾಲ, ವಾಹನ ಸಾಲ, ವಿದ್ಯೆಗಾಗಿ ಶೈಕ್ಷಣಿಕ ಸಾಲ ಹೀಗೆ ಅನೇಕ ರೀತಿಯಿಂದ ಆರ್ಥಿಕ ಸೌಲಭ್ಯಗಳಿವೆ.
ಯೋಜನೆಗಳಿವೆ. ಬ್ಯಾಂಕಿಗೆ ಹೋಗಿ ಅಧಿಕಾರಿಗಳಿಂದ ತಿಳುವಳಿಕೆ ಪಡೆದು ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡರೆ ಸಾಲವಿಲ್ಲದೆ ಮಾದರಿಯಾಗಿ ಬದುಕಬಹುದು. ಇಂದು ಬ್ಯಾಂಕ್ ಆಫ್ ಇಂಡಿಯಾ, ಕಮಲಾಪುರ ಶಾಖೆಯಿಂದ ಕನ್ನಡ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಬ್ಯಾಂಕ್‌ನಿಂದ ಸಿಗುವ ಆರ್ಥಿಕ ಸೌಲಭ್ಯಗಳ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳ ಕಾಳಜಿಯು ಶ್ಲಾಘನೀಯವಾಗಿದೆ ಎಂದು ಮಾನ್ಯ ಕುಲಪತಿಯವರಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ತಿಳಿಸಿದರು.
ಇತ್ತೀಚಿಗೆ (ದಿನಾಂಕ 18.12.2024ರಂದು) ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಏರಿ್ಡಸಿದ್ದ ಬ್ಯಾಂಕಿನ ಆರ್ಥಿಕ ಸೌಲಭ್ಯಗಳ ಹಾಗೂ ಯೋಜನೆಗಳ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಧಕ್ಷೀಯ ಮಾತುಗಳನ್ನಾಡಿದರು.
ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಹುಬ್ಬಳ್ಳಿಯ ವಲಯ ಆಧಿಕಾರಿಗಳಾದ ಶ್ರೀ ಅಪ್ಪುರಾವ್ ಹಾಗೂ ದೀಪಕ್‌ರಾಣ, ಡ್ಯಾನಿ ಅವರು ಕನ್ನಡ ವಿಶ್ವವಿದ್ಯಾಲಯದ ಉದ್ಯೋಗಿಗಳಿಗೆ ಬ್ಯಾಂಕಿನ ಆರ್ಥಿಕ ಸೌಲಭ್ಯಗಳ ಕುರಿತು ಸುದೀರ್ಘವಾಗಿ ಮಾಹಿತಿ ಒದಗಿಸಿದರು. ಬ್ಯಾಂಕ್ ಆಫ್ ಇಂಡಿಯಾ, ಕಮಲಾಪುರ ಶಾಖೆಯ ಮ್ಯಾನೇಜರ್ ಅರುಣ್‌ಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕನ್ನಡ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಯಾದ ಡಾ.ಎ. ಶ್ರೀಧರ್ ಅವರು ಪ್ರಾಸ್ತಾವಿಕ ನುಡಿದು, ಸ್ವಾಗತಿಸಿದರು. ಡೀನರಾದ ಡಾ.ಶೈಲಜಾ ಇಂ. ಹಿರೇಮಠ, ಅಧ್ಯಯನಾಂಗದ ನಿರ್ದೇಶಕರಾದ ಡಾ.ಅಮರೇಶ ಯತಗಲ್, ಪ್ರಾಧ್ಯಾಪಕರಾದ ಡಾ.ವೆಂಕಟಗಿರಿ ದಳವಾಯಿ, ಡಾ. ಮಲ್ಲಿಕಾರ್ಜುನ ವಣೇನೂರು, ಅಧಿಕಾರಿಗಳಾದ ಡಾ.ಡಿ.ಮೀನಾಕ್ಷಿ, ಡಾ.ಎ.ವೆಂಕಟೇಶ, ಎಸ್.ಕೆ. ವಿಜಯೇಂದ್ರ ಸೇರಿದಂತೆ ಸಿಬ್ಬಂದಿಗಳೆಲ್ಲ ಉಪಸ್ಥಿತರಿದ್ದು, ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.