ಧಾರವಾಡ 06: ಇಲ್ಲಿನ ಕೇಂದ್ರ ಕಾರಾಗೃಹದ ಗಾಂಧೀ ಭವನದಲ್ಲಿ ವಿಚಾರಣಾ ಬಂಧಿಗಳಿಗಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿಯ ಆಶ್ರಯದಲ್ಲಿ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಮಾಚರ್್ 5 ರಂದು ಏರ್ಪಡಿಸಲಾಗಿತ್ತು.
ಸಂಸ್ಥೆಯ ಅಧೀಕ್ಷಕರಾದ ಡಾ.ಅನಿತ.ಆರ್. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮತದಾನವು ಭಾರತದ ಪ್ರಜೆಗಳಾದ ನಮ್ಮೆಲ್ಲರ ಮೂಲಭೂತ ಹಕ್ಕಾಗಿದೆ. ವಿದ್ಯುನ್ಮಾನ ಮತ ಯಂತ್ರಗಳ ಸರಿಯಾದ ಬಳಕೆಯನ್ನು ತಿಳಿದುಕೊಂಡು ಮತದಾನದ ಮಹತ್ವವನ್ನು ಅರಿತು ಪ್ರತಿಯೊಬ್ಬರು ಮತ ಚಲಾಯಿಸಿ ಭವ್ಯ ಭಾರತ ನಿಮರ್ಾಣಕ್ಕೆ ಕಾರಣರಾಗಬೇಕೆಂದರು.
ಚುನಾವಣಾ ವಲಯ ಅಧಿಕಾರಿಗಳಾದ ಮಂಜುನಾಥ ಟಗರಗಂಟಿ, ಎಂ.ಎನ್ ನಧಾಫ್ ಅವರು ಪ್ರಾತ್ಯಕ್ಷಿಕೆಯ ಮೂಲಕ ಮತದಾನ ಯಂತ್ರ, ಅದರ ಬಳಕೆಯ ಬಗ್ಗೆ ವಿಚಾರಣಾಧೀನ ಬಂದಿಗಳಿಗೆ ಅರಿವು ಮೂಡಿಸಿದರು.