ಲೋಕದರ್ಶನ ವರದಿ
ಬ್ಯಾಡಗಿ23: ಮಕ್ಕಳು ಈ ದೇಶದ ಆಧಾರಸ್ಥಂಭ, ಹೀಗಾಗಿ ಅವರಿಗೆ ಶಿಕ್ಷಣ ಸೇರಿದಂತೆ ದೇಶಭಕ್ತಿ, ಪ್ರಾಮಾಣಿಕತೆ, ನಿಷ್ಠೆ, ಕರ್ತವ್ಯ ಪ್ರಜ್ಞೆ ಅದರಲ್ಲೂ ವಿಶೇಷವಾಗಿ ಸಮಾಜಮುಖಿ ಕೆಲಸ ಕಾರ್ಯನಿರ್ವಹಿಸುವಂತೆಹ ಪ್ರಜ್ಞಾವಂತ ನಾಗರಿಕನನ್ನಾಗಿ ರೂಪಿಸುವುದು ಸಕರ್ಾರ, ಸಮಾಜ ಹಾಗೂ ಪಾಲಕರ ಜವಾಬ್ದಾರಿಯಾಗಿದೆ ಎಂದು ಸ್ಥಳೀಯ ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾಧೀಶ ಇಬ್ರಾಹಿಂ ಮುಜಾವರ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾನೂನು ಅರಿವು-ನೆರವು ಕಾರ್ಯಕ್ರಮದಡಿ ತಾಲೂಕಿನ ಮೋಟೆಬೆನ್ನೂರ ಗ್ರಾಮದ ಬಿಆರ್ಈ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಮಕ್ಕಳ ಹಕ್ಕು ರಕ್ಷಣೆಯ ಕುರಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಕ್ಷಗಟ್ಟಲೇ ಹಣವ್ಯಯಿಸಿ ಮಕ್ಕಳನ್ನು ಶ್ರೀಮಂತ ಶಾಲೆಗೆ ಕಳುಹಿಸಿ ಕೊಡಲಾಗುತ್ತಿದೆ. ಅಲ್ಲಿನ ಹಾಷ್ಟೆಲ್ ಶಿಕ್ಷಣದಿಂದ ಮಕ್ಕಳಿಗೆ ಬದುಕಿನ ಶಿಕ್ಷಣ ಸಿಗದಂತಾಗಿದೆ, ಬರುವ ದಿನಗಳಲ್ಲಿ ಇದೊಂದು ಸಾಮಾಜಿಕ ಪಿಡುಗಾಗಿ ಪರಿವರ್ತನೆಗೊಂಡರೂ ಆಶ್ಚರ್ಯಪಡಬೇಕಾಗಿಲ್ಲ ಎಂದರು.
ಮಕ್ಕಳೇ ದೇವರೆಂದು ಅಥರ್ೈಸಿಕೊಂಡಿರುವ ಪ್ರಸ್ತುತ ಸಮಾಜ, ಅವರಲ್ಲಡಗಿರುವ ದೈಹಿಕ, ಬೌದ್ಧಿಕ ಹಾಗೂ ಮಾನಸಿಕ ಶಕ್ತಿ ಸಾಮಥ್ರ್ಯಗಳನ್ನು ಅರಿಯದೇ ತಪ್ಪು ಮಾಡುತ್ತಿದೆ, ಮಕ್ಕಳಿಗೆ ಕುಟುಂಬದಲ್ಲಿ ತಮ್ಮ ಪಾತ್ರವೇನು ಜವಾಬ್ದಾರಿಗಳೇನು ಎಂಬುದರ ಕುರಿತು ಅರಿವು ಮೂಡಿಸಬೇಕಾಗಿದೆ, ಆದರೆ ಇತ್ತೀಚೆಗೆ ಕೆಲಸದ ಒತ್ತಡದಲ್ಲಿ ಸಿಲುಕಿರುವ ಪಾಲಕರಿಗೆ ಮಕ್ಕಳ ಪ್ರಶ್ನೆಗಳು ಮತ್ತು ಸಮಸ್ಯೆಗಳ ಬಗ್ಗೆ ಅರಿವು ಬರುತ್ತಿಲ್ಲ ಎಂದ ಅವರು, ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
ವಿಭಕ್ತ ಕುಟುಂಬದಲ್ಲಿ ಸಮಸ್ಯೆ: ಅವಿಭಕ್ತ ಕುಟಂಬ ವ್ಯವಸ್ಥೆಗೆ ಭಾರತವೊಂದು ಉತ್ತಮ ಉದಾಹರಣೆ, ಹೀಗಾಗಿ ಮಕ್ಕಳಿಗೆ ಬದುಕಿನ ಮೌಲ್ಯಗಳು ಕುಟುಂಬದ ವ್ಯಾಪ್ತಿಯಲ್ಲೇ ದೊರೆಯುತ್ತಿತ್ತು, ಆದರೆ ಇತ್ತೀಚೆಗೆ ಸ್ವಾಥರ್ಿತನ ಹೆಚ್ಚಾದಂತೆ, ಬೆಳೆದು ದೊಡ್ಡವರಾಗುತ್ತಲೇ ವಿಭಕ್ತ ಕುಟುಂಬಗಳಾಗಿ ವಿಭಜನೆ ಹಾದಿ ಹಿಡಿಯುತ್ತಿವೆ ಎಂದು ಖೇದ ವ್ಯಕ್ತಪಡಿಸಿದರು.
ಮನೆಯಲ್ಲಿಯೇ ಪ್ರಶ್ನಿಸಿ: ಮಕ್ಕಳ ಮೇಲಿನ ವ್ಯಾಮೋಹದಿಂದ ಬಹುತೇಕ ಪಾಲಕರು ತಮ್ಮ ಮಕ್ಕಳು ತಪ್ಪು ಮಾಡಿದರೂ ಪ್ರಶ್ನಿಸದಿರುವುದು ದುರಂತದ ವಿಷಯ, ಪ್ರತಿಯೊಂದು ಸಂದರ್ಭದಲ್ಲಿಯೂ ಅವರನ್ನು ಪ್ರಶ್ನಿಸುವ ಹೊಣೆಗಾರಿಕೆ ನಿಮ್ಮದಾಗಿರಲಿ, ಈ ನಿಟ್ಟಿನಲ್ಲಿ ಅವರಿಗಾಗಿ ಮೀಸಲಿಟ್ಟಿರುವ ಕಾನೂನುಗಳು ಅಭಾದಿತವಾಗದಂತೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥಸ್ವಾಮಿ, ನ್ಯಾಯವಾದಿಗಳ ಸಂಘದ ಕಾರ್ಯದಶರ್ಿ ಎಚ್.ಎಸ್.ಜಾಧವ, ನ್ಯಾಯವಾದಿಗಳಾದ ಎಂ.ಕೆ.ವೀರನಗೌಡ್ರ, ಆಡಳಿತಾಧಿಕಾರಿ ಸಿ.ಸಿ.ಪ್ರಭುಗೌಡ್ರ, ಪ್ರಾಚಾರ್ಯೆ ಲೀಲಾವತಿ ಬುಕ್ಕಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.