ವೃತ್ತಿಪರತೆ- ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ - ಸಂದೀಪ ಪಿಲಂಕರ
ಬೆಳಗಾವಿ. 1: ಉದಯೋನ್ಮುಕ ನಿರ್ವಹಣಾ ವೃತ್ತಿಪರರಿಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ಮತ್ತು ಕಠಿಣ ಪರಿಶ್ರಮದೊಂದಿಗೆ ಕಾರ್ಯ ನಿರ್ವಹಿಸಿದ್ದಲ್ಲಿ ಯಶಸ್ಸು ಸಾಧ್ಯ ಎಂದು ಏಕಸ್ ಸಂಸ್ಥೆಯ ಮಾನವ ಸಂಪನ್ಮೂಲ ಮತ್ತು ಕಾರ್ಯಾಚರಣೆ ವಿಭಾಗದ ಹಿರಿಯ ವ್ಯವಸ್ಥಾಪಕ ಸಂದೀಪ ಪಿಲಂಕರ ಅವರು ಅಭಿಪ್ರಾಯಪಟ್ಟರು.
ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯ ಗ್ಲೋಬಲ್ ಬಿಜಿನೆಸ್ ಸ್ಕೂಲ ಮಹಾವಿದ್ಯಾಲಯದ 2022 -24 ನೇ ಸಾಲಿನ ಬ್ಯಾಚನ್ ಎಂ.ಬಿ.ಎ.ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವಾಗ ಸವಾಲುಗಳನ್ನು ಸಕಾರಾತ್ಮವಾಗಿ ಸ್ವೀಕರಿಸುವ ಎದೆಗಾರಿಕೆ ಹೊಂದಬೇಕು.ತಮ್ಮಲ್ಲಿನ ಸಾಮರ್ಥ್ಯದ ಜೊತೆಗೆ ತಂಡದೊಂದಿಗೆ ಬೆರೆತು ಕೆಲಸ ಮಾಡಬೇಕು.ಈ ಕೆಲಸ ಕಾರ್ಯಗಳನ್ನು ಮಾಡುವಾಗ ತಪ್ಪುಗಳು ಆಗುವುದು ಸಹಜ.ಈ ತಪ್ಪುಗಳಿಂದ ಕುಗ್ಗದೆ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕೆಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಬ್ಲೂ ಚಿಫ್ ಪ್ರೈ.ಲಿ.ವ್ಯವಸ್ಥಾಪಕ ಪಾಲುದಾರ ಶಶಾಂಕ ಲೆಂಗಡೆ ಅವರು ಮಾತನಾಡಿ, ಸ್ನಾತಕೋತ್ತರ ಪದವಿ ನಂತರ ಜೀವನದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಕೌಶಲ್ಯಗಳನ್ನು ಕಲಿಯುವುದು ಮತ್ತು ಕೌಶಲ್ಯ ಹೆಚ್ಚಿಸುವುದು ಹೆಚ್ಚಿನ ಅವಶ್ಯಕತೆಯಾಗಿರುತ್ತದೆ ಎಂದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೆ.ಬಿ4ಎಚ್ ಸ್ಟೀಲ ಬಾರ್ಸ ್ಘ ವೈರ‌್ಸ ಸಂಸ್ಥೆಯ ಪಾಲುದಾರ ಮತ್ತು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಶರದ ಬಾಳಿಕಾಯಿ ಅವರು ಮಾತನಾಡಿ, ಕಾರ್ೋರೇಟ ಕೆಲಸ ಹೊಸ ಸಂಸ್ಸೃತಿಯನ್ನು ಹೊಂದಿರುತ್ತದೆ. ಕೆಲಸ ಮಾಡುವ ತಂಡದೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದುವ ಮೂಲಕ ಯಶಸ್ವಿ ಉದ್ಯಮಿಯಾಗಬಹುದು ಎಂದರು.
ಸಮಾರಂಭದಲ್ಲಿ ಡಾ. ಪದ್ಮಪ್ರೀಯಾ ಕತಗಲ್ ಅವರು ಮಹಾವಿದ್ಯಾಲಯದ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ಡಾ. ಪ್ರಸಾದ ದಡ್ಡಿಕರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಶ್ರವಣ ನಾಯಕ ಅವರಿಗೆ 2022-24 ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ನೀಡಲಾಯಿತು.ಜುಬೇರ ಅಂಕಲಗಿ ಅತ್ಯುತ್ತಮ ಗ್ರಂಥಾಲಯ ಬಳಕೆದಾರ ಪ್ರಶಸ್ತಿ ನೀಡಲಾಯಿತು.ಈ ಸಮಾರಂಭದಲ್ಲಿ ಭರತೇಶ ಶೀಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಪ್ರಾಧ್ಯಾಪಕರು, ಸಿಬಂದಿ ವರ್ಗದವರು ಉಪಸ್ಥಿತರಿದ್ದರು.