ಪ್ರೊ. ಯರವಿನತೆಲಿಮಠರಿಗೆ ಜ.ಚ.ನಿ ಪ್ರಶಸ್ತಿ

Prof. J. Ch. Ni Award for Yaravinathelimatha

ಪ್ರೊ. ಯರವಿನತೆಲಿಮಠರಿಗೆ ಜ.ಚ.ನಿ ಪ್ರಶಸ್ತಿ 

ಧಾರವಾಡ,27:  ನಾಡಿನ ಖ್ಯಾತ ವಿದ್ವಾಂಸರು ಹೆಸರಾಂತ ಇಂಗ್ಲೀಷ ಪ್ರಾಧ್ಯಾಪಕರು ಮತ್ತು ಶ್ರೇಷ್ಠ ಅನುವಾದಕರಾದ ಪ್ರೊ. ಚಂದ್ರಶೇಖರ ಆರ್‌. ಯರವಿನತೆಲಿಮಠ ಅವರು ನಾಡಿನ ಪ್ರತಿಷ್ಠಿತ ಜ.ಚ.ನಿ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಧರ್ಮ, ಶಿಕ್ಷಣ, ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಶ್ರೀ ಶರಣಬಸವೇಶ್ವರ ಸುಕ್ಷೇತ್ರರಾಜೂರಿನ ಶ್ರೀ ಜ.ಚ.ನಿ ಪ್ರತಿಷ್ಠಾನವು ನೀಡುವ ಪ್ರಸಕ್ತ ವರ್ಷದ ಶ್ರೀ. ಜ.ಚ.ನಿ ರಾಷ್ಟ್ರೀಯ ಪ್ರಶಸ್ತಿಯನ್ನು ಧಾರವಾಡದ ಹಿರಿಯ ವಿದ್ವಾಂಸರಾದ ಡಾ. ಸಿ.ಆರ್‌.ಯರವಿನತೆಲಿಮಠರಿಗೆ ಫೆಬ್ರುವರಿ 04 ರಂದು ನಡೆಯಲಿರುವ ಶರಣಬಸವೇಶ್ವರ ಜಾತ್ರಾ ಮಹೋತ್ಸವದಂದು ಶ್ರೀಮಠದಲ್ಲಿ ಪ್ರದಾನ ಮಾಡಲಾಗುವುದೆಂದು ಪ್ರತಿಷ್ಠಾನದ ಕಾರ್ಯದರ್ಶಿ ವೀರಣ್ಣ ಹಳ್ಳಿಗುಡಿ ತಿಳಿಸಿದ್ದಾರೆ. ಪ್ರಶಸ್ತಿಯು ರೂ. 11 ಸಾವಿರ ನಗದು ಮತ್ತು ಸ್ಮರಣಿಕೆಯನ್ನು  ಹೊಂದಿರುತ್ತದೆ. 

ಧಾರವಾಡದ ನಿರ್ಮಲ ನಗರದಲ್ಲಿರುವ ಪ್ರೊ.ಯರವಿನತೆಲಿಮಠರ ಚೈತ್ರನಿವಾಸಕ್ಕೆ ಇಂದು ಪ್ರತಿಷ್ಠಾನದ ಪದಾಧಿಕಾರಿಗಳೊಂದಿಗೆ ಆಗಮಿಸಿದ ಶ್ರೀಯುತರು ಪ್ರಶಸ್ತಿಗೆ ಪಾತ್ರರಾದ ಪ್ರೊ.ಯರವಿನತೆಲಿಮಠರಿಗೆ ಸನ್ಮಾನಿಸಿ ಆಹ್ವಾನ ನೀಡಿದರು. ಹಿರಿಯ ವಿಶ್ರಾಂತ ಪ್ರಾಚಾರ್ಯರಾದ ಪ್ರೊ. ಸಿ.ಎಸ್‌. ಹೊಸಮಠ, ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಷ್ಠನ ಅಧ್ಯಕ್ಷ ಡಾ.ಡಿ.ಎಂ. ಹಿರೇಮಠ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾಘಟಕದ ಅಧ್ಯಕ್ಷ ಡಾ.ಸಂಗಮನಾಥ ಲೋಕಾಪೂರ, ಪ್ರತಿಷ್ಠಾನದ ಪದಾಧಿಕಾರಿಗಳಾದ ನಬಿ ಯಲಬುರ್ಗಿ, ಶರಣಪ್ಪ ಅರಿಕೇರಿ, ಶರಣಪ್ಪ ಸೋಂಪೂರ ಹಾಗೂ ಡಾಽಽ ಮಲ್ಲಪ್ಪ ಮೂಗನೂರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.