ಪ್ರೊ. ಬಸವನಾಳರ ಸೇವೆ ಇಂದಿಗೂ ಅವಿಸ್ಮರಣೀಯ: ಪಟ್ಟಣ

ಾರವಾಡ: ಪ್ರಾಥಮಿಕ ಶಿಕ್ಷಣವನ್ನು ಸಂಪೂರ್ಣವಾಗಿ ತೆಲಗು ಮಾಧ್ಯಮದಲ್ಲಿ ಓದಿದ್ದ ಪ್ರೊ. ಶಿ. ಶಿ. ಬಸವನಾಳರಿಗೆ ಕನ್ನಡ ಸಾರಸ್ವತ ಲೋಕದ ಸಾಧನೆಗೆ ಅದು ಅಡಚಣೆ ಎನ್ನಿಸಲಿಲ್ಲ. ತಮ್ಮ ತಂದೆಯವರ ಮೂಲಕ ಕನ್ನಡ-ಸಂಸ್ಕೃತ ಭಾಷೆಯನ್ನು ಉತ್ಕೃಷ್ಟ ಮಟ್ಟದಲ್ಲಿ ಆಳವಾಗಿ ಮನೆಯಲ್ಲಿಯೇ ಕಲಿತ ಮಹಾನ್ ಸಾಧಕ ಪ್ರೊ. ಶಿ. ಶಿ. ಬಸವನಾಳರು ಎಂದು ಪುಣೆಯ ಬಸವ ಇಂಟರ್ನ್ಯಾಶನಲ್ ಅಂಡರಸ್ಟ್ಯಾಂಡಿಂಗ್ & ರಿಸಚರ್್ ಸೆಂಟರ ಚೇರಮನ್ನರು ಮತ್ತು ಬೋಧೆಗಾಂವ ಬಿ. ಫಾರ್ಮಸಿ ಮಹಾವಿದ್ಯಾಲಯ ಪ್ರಾಚಾರ್ಯರು ಹಾಗೂ ಖ್ಯಾತ ಲೇಖಕ ಡಾ. ಶಶಿಕಾಂತ ಪಟ್ಟಣ ಅಭಿಪ್ರಾಯಪಟ್ಟರು.

ಕನರ್ಾಟಕ ವಿದ್ಯಾವರ್ಧಕ ಸಂಘವು, ಪ್ರೊ. ಶಿ. ಶಿ. ಬಸವನಾಳ ದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ,  ಅವರು 'ಪ್ರೊ. ಶಿ. ಶಿ. ಬಸವನಾಳರ ಬದುಕು-ಬರಹ' ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತಿದ್ದರು.

ವೈಯಕ್ತಿಕ ಜೀವನದಲ್ಲಿ ಆದ ನಷ್ಟಗಳನ್ನು ಲೆಕ್ಕಿಸದೆ, ಎದೆಗುಂದದೆ, ಸಮಾಜ ಕಟ್ಟುವ ಕಾಯಕದಲ್ಲಿ ಧೈರ್ಯದಿಂದ ಮುನ್ನುಗ್ಗಿದವರು ಪ್ರೊ. ಬಸವನಾಳರು. ಅವರು ಮಾಡಿದ ಸೇವೆ ಇಂದಿಗೂ ಅವಿಸ್ಮರಣೀಯ, ಗದ್ಯರೂಪದಲ್ಲಿದ್ದ ವಚನಗಳಿಗೆ ಕಾವ್ಯರೂಪ ನೀಡಿ ವಚನಗಳನ್ನು ಪರಿಷ್ಕರಿಸಿದ ಇವರ ಘನಕಾರ್ಯ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿಯುವಂತಹದ್ದು. ಬಸವಣ್ಣನವರನ್ನು ಆಳವಾಗಿ ಅಧ್ಯಯನ ಮಾಡಿದ ಪ್ರೊ. ಶಿ. ಶಿ. ಬಸವನಾಳರು, ಬಸವಣ್ಣವರನ್ನು ಪ್ರಗತಿಪರ, ವೈಚಾರಿಕ, ಸಮಾಜಮುಖಿ ಚಿಂತಕ ಎಂದು ವ್ಯಾಖ್ಯಾನಿಸಿದ್ದಾರೆ. ವಿದ್ಯಾಸಂಸ್ಥೆಗಳನ್ನು ಕಟ್ಟಬೇಕೆಂಬ ಉದ್ದೇಶದಿಂದ ಸರಕಾರದ ಸೇವೆಗೆ ಸೇರದೆ ಬಸವನಾಳರು ಮಾಡಿದ ತ್ಯಾಗದ ಫಲವೇ ಬೆಳಗಾವಿಯ ಲಿಂಗರಾಜ ಕಾಲೇಜು, ಕೆ.ಎಲ್.ಇ. ಸಂಸ್ಥೆ ಹಾಗೂ ಕನರ್ಾಟಕ ವಿಶ್ವವಿದ್ಯಾಲಯ ಎಂಬುದು ಬಸವನಾಳರ ಜೀವನ ಚರಿತ್ರೆ ಓದಿದಾಗ ತಿಳಿದುಬರುವುದು. ಬಸವನಾಳರ ಸೇವೆಯನ್ನು ನಾವು ಕಿಂಚಿತ್ ಆದರೂ ಮಾಡಬೇಕೆಂದಾದರೆ, ಬಸವನಾಳರ ಅಪ್ರಕಟಿತ ಕೃತಿಗಳನ್ನು ಕೂಡಲೆ ಪ್ರಕಟಗೊಳಿಸುವುದು ಅವಶ್ಯ, ಬಸವನಾಳರ ಹೆಸರಿನಲ್ಲಿ ಟ್ರಸ್ಟ್ ರಚಿಸಿ, ಅವರು ಮಾಡಿದ ಕಾರ್ಯವನ್ನು ಮುಂದುವರೆಸಬೇಕಾದುದು ಸರಕಾರ ಮತ್ತು ಸಮಾಜದ ಕರ್ತವ್ಯ ಎಂದರು.

ಅಧ್ಯಕ್ಷತೆ ವಹಿಸಿದ ಧಾರವಾಡ ಕ.ವಿ.ವಿ. ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಖ್ಯಾತ ಸಿತಾರ ವಾದಕರಾದ ಡಾ. ಮಲ್ಲಿಕಾಜರ್ುನ ತರ್ಲಗಟ್ಟಿ ಮಾತನಾಡಿ, ಬಸವನಾಳರು ಮಹಾನ್ ಕಲಾ ಆರಾಧಕರಾಗಿದ್ದರು, ಧಾರವಾಡವನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡಿದ್ದರು, ಖ್ಯಾತ ಹಿಂದುಸ್ಥಾನಿ ಗಾಯಕರಾದ ಡಾ. ಮಲ್ಲಿಕಾಜರ್ುನ ಮನ್ಸೂರ ಅವರಿಗೆ ವಚನಗಳನ್ನು  ಹಾಡಬಹುದು ಎಂದು ಮನವರಿಕೆ ಮಾಡಿಕೊಟ್ಟ ಬಸವನಾಳರು ಡಾ. ಮಲ್ಲಿಕಾಜರ್ುನ ಮನ್ಸೂರರು ವಚನ ಹಾಡುವಂತೆ ಮಾಡಿರುವುದನ್ನು  ಕನ್ನಡ ಜನತೆ ಮರೆಯಲು ಅಸಾಧ್ಯ ಎಂದರು. 

ದತ್ತಿ ದಾನಿಗಳ ಪರವಾಗಿ ಮಾತನಾಡಿದ, ಖ್ಯಾತ ಸಂಗೀತಗಾರ ಡಾ. ಮೃತ್ಯುಂಜಯ ಶೆಟ್ಟರ, ಪ್ರೊ. ಶಿ. ಶಿ. ಬಸವನಾಳರು ಮಾಡಿದ ವಚನ ಪರಿಷ್ಕರಣೆ ಕಾರ್ಯ ಇಂದಿನ ವಚನಸಾಹಿತ್ಯ ಸಂಶೋಧಕರಿಗೆ ಮಾರ್ಗದರ್ಶಕವಾಗಿದೆ, ಹೊಸ ಸಂಶೋಧಕರು ಪ್ರೊ. ಶಿ. ಶಿ. ಬಸವನಾಳರು ಅಕಾಲಿಕವಾಗಿ ನಮ್ಮನ್ನಗಲಿ ಅಚಾನಕ್ಕಾಗಿ ನಿಲ್ಲಿಸಿದ ವಚನ ಪರಿಷ್ಕರಣೆ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕೆಂದು  ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೊ. ಶಿ,. ಶಿ,. ಬಸವನಾಳರ  ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿ ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ ಹಾಗೂ ಪ್ರೊ. ಮೊನಾಲಿಸ ಅಕ್ಕಿಹಾಳ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಕೋಶಾಧ್ಯಕ್ಷ ಕೃಷ್ಣ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ನಿಂಗಣ್ಣ ಕುಂಟಿ ನಿರೂಪಿಸಿರು. ಸಹಕಾರ್ಯದಶರ್ಿ ಸದಾನಂದ ಶಿವಳ್ಳಿ ವಂದಿಸಿದರು. 

ಡಾ. ಸಿ. ಎಂ. ಕುಂದಗೋಳ, ಪ್ರಿ. ವ್ಹಿ. ವ್ಹಿ. ಹೆಬ್ಬಳ್ಳಿ, ವಾಯ್. ಸಿ. ಬಿಜಾಪುರ, ಈಶ್ವರ ಬಾಳಗಿ, ಮಹದೇವ ಹೊರಟ್ಟಿ, ಡಾ. ಲೋಹಿತ ನಾಯ್ಕರ, ಮಹೇಶ ಕುಲಕಣರ್ಿ, ಕೆ. ಎಂ. ಕೊಪ್ಪದ, ಉಮೇಶ ಕಟಗಿ, ಶಿವಶರಣ ಕಲಬಶೆಟ್ಟರ, ಡಾ. ಶ್ರೀಧರ ಕುಲಕಣರ್ಿ, ಮಾರ್ಕಂಡೇಯ ದೊಡಮನಿ, ರಾಘವೇಂದ್ರ ಕುಂದಗೋಳ, ಪ್ರಭು ಹಂಚಿನಾಳ ಹಾಗೂ ಪ್ರೊ. ಬಸವನಾಳ ಪರಿವಾರದವರು, ಅಭಿಮಾನಿಗಳು, ಹಲವಾರು ಗಣ್ಯರು ಮತ್ತಿತರರು ಪಾಲ್ಗೊಂಡಿದ್ದರು.