ಜನಪರ ಯೋಜನೆಗಳೇ ಕಾಂಗ್ರೆಸ್ ಸರಕಾರದ ಮೂಲ ಮಂತ್ರವಾಗಿದೆ

Pro-people schemes are the basic mantra of the Congress government

 ಜನಪರ  ಯೋಜನೆಗಳೇ ಕಾಂಗ್ರೆಸ್ ಸರಕಾರದ ಮೂಲ ಮಂತ್ರವಾಗಿದೆ  

ರಾಣಿಬೆನ್ನೂರ 13:  ಜನಪರ  ಯೋಜನೆಗಳೇ ಕಾಂಗ್ರೆಸ್ ಸರಕಾರದ ಮೂಲ ಮಂತ್ರವಾಗಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.  ತಾಲೂಕಿನ ಖಂಡೇರಾಯನಹಳ್ಳಿ ಗ್ರಾಮದಲ್ಲಿ ಸಿ.ಸಿ ರಸ್ತೆ ಹಾಗೂ ಸಿ.ಸಿ ಗಟಾರ ಕಾಮಗಾರಿಗಳ ನಿರ್ಮಾಣಕ್ಕೆ  ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರ ನುಡಿದಂತೆ ನಡೆದಿದೆ. ಹಿಂದುಳಿದವರು. ದೀನದಲಿತರು. ಬಡವರ ಏಳಿಗೆ ಬಯಸಿ ತಾಂಡಾಗಳ ಅಭಿವೃದ್ಧಿಗೆ ಹೊತ್ತು ನೀಡಲಾಗಿದೆ. ಪ್ರತಿ ಗ್ರಾಮಕ್ಕೆ ಕುಡಿಯುವ ನೀರು. ಗಟಾರ. ರಸ್ತೆ, ವಿದ್ಯುತ್ ಸೇರಿದಂತೆ   ಮೂಲ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಭೂ ಸೇನಾ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಸಿದ್ದೇಶ್ವರ ವಿ.ಎ, ಸಹಾಯಕ ಇಂಜಿನಿಯರ್ ವಿಕಾಸ್ ರೆಡ್ಡಿ. ಪುಟ್ಟಪ್ಪ ಮರಿಯಮ್ಮನವರ. ತಿರುಪತಿ ಅಜ್ಜನವರ. ಡಾಕೇಶ ಲಮಾಣಿ. ಓಬೇಶ್ ಲಮಾಣಿ. ಆನಂದಪ್ಪ ಲಮಾಣಿ. ಶಿವಪ್ಪ ಲಮಾಣಿ. ಮಲ್ಲೇಶಪ್ಪ ಲಮಾಣಿ. ಉಮಾ ಲಮಾಣಿ. ನೇತ್ರಾವತಿ ಲಮಾಣಿ. ಸುಭಾಷ್ ಕೊಡ್ಲೆರ್,ಗುಡ್ಡಪ್ಪ ಹೆಡಿಯಾಲ  ಸೇರಿದಂತೆ ಮತ್ತಿತರರು ಇದ್ದರು. ಫೊಟೊ:13ಆರ್‌ಎನ್‌ಆರ್02ರಾಣಿಬೆನ್ನೂರ: ತಾಲೂಕಿನ ಖಂಡೇರಾಯನಹಳ್ಳಿ ಗ್ರಾಮದಲ್ಲಿ ಸಿ.ಸಿ ರಸ್ತೆ ಹಾಗೂ ಸಿ.ಸಿ ಗಟಾರ ಕಾಮಗಾರಿಗಳ ನಿರ್ಮಾಣಕ್ಕೆ ಶಾಸಕ ಪ್ರಕಾಶ್ ಕೋಳಿವಾಡ ಭೂಮಿ ಪೂಜೆ ನೆರವೇರಿಸಿದರು.