ಜನಪರ ಬಜೆಟ್ ಸರ್ವರಿಗೂ ಸಮಪಾಲು : ಪಠಾಣ

Pro-people budget is equal for all: Pathana

ಜನಪರ ಬಜೆಟ್ ಸರ್ವರಿಗೂ ಸಮಪಾಲು : ಪಠಾಣ

ಶಿಗ್ಗಾವಿ 08: ಸವಣೂರ ತಾಲೂಕಿನ 135 ವರ್ಷಗಳ ಹಳೆಯ ಸರಕಾರಿ ಆಸ್ಪತ್ರೆಯ ನಿರ್ಮಾಣಕ್ಕೆ 45 ಕೋಟಿ ಹಣವನ್ನು ಮುಂಗಡ ಪತ್ರದಲ್ಲಿ ಅನುಧಾನ ಮೀಸಲಿಟ್ಟಿದ್ದು ಶಿಗ್ಗಾವಿ- ಸವಣೂರ ವಿಧಾನಸಭಾ ಕ್ಷೇತ್ರದ ಪರವಾಗಿ ಸಿ.ಎಂ ಸಿದ್ದರಾಮಯ್ಯ, ಡಿ.ಸಿ.ಎಂ ಡಿ.ಕೆ.ಶಿವಕುಮಾರ, ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರಿಗೆ ಶಾಸಕ ಯಾಸೀರಖಾನ ಪಠಾಣ ಧನ್ಯವಾದಗಳನ್ನು ಅರ​‍್ಿಸಿದ್ದಾರೆ. ವರದಿಗಾರರೊಂದಿಗೆ ಮಾತನಾಡಿದ ಅವರು ಆಶಾಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕರಿಗೆ ಗೌರವ ಧನ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಕುಸ್ತಿ ಪಟುಗಳಿಗೆ ಮಾಶಾಸನ ಹೆಚ್ಚಿಗೆ ಮಾಡಲಾಗಿ, ರೈತರ, ಕಾರ್ಮಿಕರ, ಸರ್ವ ಸಮುದಾಯದ ಹಿತ ಕಾಪಾಡುವ ಸಲುವಾಗಿ ಒಳ್ಳೆಯ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ, ಬಸವಣ್ಣವರ ನಾಣ್ಣುಡಿಯಂತೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬಂತೆ ಸಿ.ಎಂ ಸಿದ್ದರಾಮಯ್ಯನವರ ಐತಿಹಾಸಿಕ ದಾಖಲೆಯ ಬಜೆಟ್‌ ಎಂದಿದ್ದಾರೆ.