ರಾಜ್ಯ ಮಟ್ಟದ ಅಂತರ ಕಾಲೇಜುರಂಗ ಸ್ಪರ್ಧೆಯಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಹುಮಾನ
ಕೊಪ್ಪಳ 03: ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಫೆ.18 ರಿಂದ 28 ರವರೆಗೆ ನಡೆದ ಸೌರಭ-2025 ರಾಜ್ಯ ಮಟ್ಟದ ಅಂತರ ಕಾಲೇಜುರಂಗ ಸ್ಪರ್ಧೆಯಲ್ಲಿ ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಬಿ.ಎಸ್ಸಿ 6ನೇ ಸೆಮಿಸ್ಟರ್‌ನ ವಿದ್ಯಾರ್ಥಿ ಕು. ಭರತಕುಮಾರಎ.ಜಿಇವರು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕು. ಹನುಮೇಶ ಜಗ್ಗಲ ಇವರು ದ್ವಿತೀಯ ಸ್ಥಾನ ಮತ್ತು ಬಿ.ಎಸ್ಸಿ. 2ನೇ ಸೆಮಿಸ್ಟರ್‌ನ ವಿದ್ಯಾರ್ಥಿನಿ ಕು. ಮಧು ಕೆ ಇವರು ಸುಗಮ ಸಂಗೀತಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಸದರಿ ವಿದ್ಯಾರ್ಥಿಗಳಿಗೆ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಕಾರ್ಯದರ್ಶಿಗಳಾದ ಡಾ. ಆರ್.ಮರೇಗೌಡ, ಸದಸ್ಯರಾದ ಸಂಜಯ ಕೊತಬಾಳ, ವಿರೇಶ ಮತ್ತು, ಮಹಾವಿದ್ಯಾಲಯದ ಪ್ರಾಚಾರ್ಯರಾದಡಾ. ಚನ್ನಬಸವ ಮತ್ತು ಸಾಂಸ್ಕೃತಿಕ ವಿಭಾಗದ ಸಂಯೋಜಕರಾದಡಾ. ಮಂಜುನಾಥ ಗಾಳಿ ಹಾಗೂ ಮಹಾವಿದ್ಯಾಲಯದಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.