ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಪ್ರಶಸ್ತಿ ಪ್ರದಾನ

ಧಾರವಾಡ 07: ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಯಲ್ಲಿ ಇತ್ತಿಚಿಗೆ ಜರುಗಿದ ರೇಷ್ಮೆ ಕೃಷಿ ಮೇಳ ಹಾಗೂ ರೇಷ್ಮೆ ಬೆಳೆಗಾರರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಧಾರವಾಡ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಸಚಿವರಾದ ಸಾ.ರಾ. ಮಹೇಶ ಪ್ರಶಸ್ತಿ ಪ್ರದಾನ ಮಾಡಿದರು. 

    ಕುಂದಗೋಳ ತಾಲೂಕು ಸಂಶಿಯ ಚನ್ನವೀರಪ್ಪ ಬಸಪ್ಪ ಧರಣಿಯವರಿಗೆ ಮೊದಲ ಬಹುಮಾನ, ಶಿವಪ್ಪ ಮಹಾದೇವಪ್ಪ ಹೊಂಡೇದ ಅವರಿಗೆ ಎರಡನೇ ಬಹುಮಾನ, ವಿಶ್ವನಾಥ ಮೌನೇಶ ಕಮ್ಮಾರ ಅವರಿಗೆ ಮೂರನೇ ಬಹುಮಾನ ದೊರೆತಿದೆ. 

          ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ರೇಷ್ಮೆ ಇಲಾಖೆಯ ಉಪನಿದರ್ೆಶಕ ಎಸ್.ಜಿ. ದಾನಿ, ಕುಂದಗೋಳ ವಲಯ ಅಧಿಕಾರಿ ಎಂ.ಎಂ. ಗದಗಿನ ಉಪಸ್ಥಿತರಿದ್ದರು.