ಲೋಕದರ್ಶನ ವರದಿ
ಬೆಳಗಾವಿ 29: ನಗರದ ಜೈನ್ ಹೆರಿಟೇಜ್ ಸ್ಕೂಲ್ನಲ್ಲಿ ಪಠ್ಯೇತರ ಚಟುವಟಿಕೆ ಅಂಗವಾಗಿ ನಡೆದ ಫೇಸ್ಬುಕ್ನಲ್ಲಿ ಬರೆಯಿರಿ ಎಂಬ ಸ್ಪಧರ್ೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಶಾಲಾ ಸಂಭ್ರಮದ ಮುಖ್ಯಸ್ಥೆ ಕ್ಷಮಾ ಕುಲಕಣರ್ಿ ಮಾತನಾಡಿ, ಸಹ-ಪಠ್ಯಕ್ರಮದ ಅಂಗವಾಗಿ ನಡೆಯುವ ಚಟುವಟಿಕೆಗಳಲ್ಲಿ ಮಾರ್ಗದರ್ಶಕರು ಮಕ್ಕಳಲ್ಲಿನ ಸಾಮಥ್ರ್ಯ ಅನ್ವೇಷಣೆ ಮಾಡುತ್ತಾರೆ. ಅವರ ಸಾಮಥ್ರ್ಯ ಅಭಿವೃದ್ಧಿಗೊಳಿಸುತ್ತಾರೆ. ಅವರಲ್ಲಿರುವ ನ್ಯೂನ್ಯತೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದರಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಶಾಲಾ ನಿದರ್ೇಶಕಿ ಶ್ರದ್ಧಾ ಖಟವಾಟೆ, ಪ್ರಾಚಾರ್ಯ ಡಾ. ಮಂಜೀತ್ ಜೈನ್, ಮುಖ್ಯ ಆಡಳಿತಾಧಿಕಾರಿ ಅಮಿ ದೋಶಿ ಮತ್ತಿತರರು ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿದರು.