ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಧಾರವಾಡ 30: ನಗರದ ಸಿವಿರಾಮನ್ ಕಾಲೇಜ್‌ನಲ್ಲಿ ಗಣರಾಜ್ಯೋತ್ಸವ ಮತ್ತು ವಿಜ್ಞಾನ ದಿನಾಚರಣೆ ಅಂಗವಾಗಿ ಸಿವಿರಾಮನ್ ಅವಾರ್ಡ್ ಹಾಗೂ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸಮಾರಂಭ ಜರುಗಿತು.
ಜಿಲ್ಲೆಯ ಎಲ್ಲ ಶಾಲಾ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾನ್ವೇಷಣೆ ಪರೀಕ್ಷೆಯನ್ನು ನಡೆಸುತ್ತಾ ಬಂದಿದ್ದು, ಅದರಂತೆ ಈ ವರ್ಷವೂ ಪರೀಕ್ಷೆಯನ್ನು ನಡೆಸಲಾಯಿತು. ಪರೀಕ್ಷೆಯಲ್ಲಿ ಸುತ್ತಮುತ್ತಲಿನ ಗ್ರಾಮೀಣ, ಶಹರ ಪ್ರದೇಶದ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮ ಮಕ್ಕಳು ಸಾಕಷ್ಟು ಸಂಖ್ಯಯಲ್ಲಿ ಭಾಗವಹಿಸಿದ್ದರು. ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ಈ ತರಹದ ಪರೀಕ್ಷೆಗಳು ಅವರ ಮುಂದಿನ ಶಿಕ್ಷಣಕ್ಕೆ ದಾರೀದೀಪವಾಗಿದೆ ಎಂದು ಸಿ.ವಿ.ರಾಮನ್ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಸಂಸ್ಥಾಪಕರಾದ ಗೀರೀಶ ಹಾದಿಮನಿ ಅವರು ಹೇಳಿದರು.ಧಾರಡಾಡದ ಓಂ ಇಂಗ್ಲೀಷ್ ಮಿಡಿಯಂ ಹೈಸ್ಕೂಲ ವಿದ್ಯಾರ್ಥಿನಿ ವೈಷ್ಣವಿ ರಾಹುತ್ ಪ್ರಥಮ ಸ್ಥಾನ ಪಡೆದು ಸಿ.ವಿ.ರಾಮನ್ ಅವಾರ್ಡ್ ಜೊತೆ ನಗದು ಬಹುಮಾನ, ಮತ್ತು ನಸ್ಕಾಲರ್‌ಶಿಪ್ ಪಡೆದುಕೊಂಡಳು.
ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಮಹಾದೇವಿ ಹುಣಸಿಕಟ್ಟಿ ಚಿಕ್ಕಬೆಳ್ಳಿಕಟ್ಟಿ ದ್ವೀತಿಯ ಸ್ಥಾನ ಸಿ.ವಿ.ರಾಮನ್ ಅವಾರ್ಡ್‌ಜೊತೆ ನಗದು ಬಹುಮಾನ, ಮತ್ತು ಸ್ಕಾಲರ್‌ಶಿಪ್ ಪಡೆದುಕೊಂಡಳು.
ಧಾರವಾಡದ ಸರ್ಕಾರಿ ಆದರ್ಶ ವಿದ್ಯಾಲಯ ವಿದ್ಯಾರ್ಥಿ ಚೇತನ ಅಂಗಡಿ ತೃತೀಯ ಸ್ಥಾನ ಪಡೆದಿದ್ದಾನೆ. ಇದೇ ಶಾಲೆಯ ವಿದ್ಯಾರ್ಥಿ ಪ್ರೀತಂ ಸೊಗರದ 4ನೇ ಸ್ಥಾನವನ್ನು ಪಡೆದಿದ್ದಾನೆ. ಜಿಎಚ್‌ಎಸ್ ಏರಿಕೊಪ್ಪ ಶಾಲೆಯ ವಿದ್ಯಾರ್ಥಿನಿ ಬಸ್ಸವ್ವ ಅಂಗಡಿ 5ನೇ ಸ್ಥಾನ ಪಡೆದಿದ್ದಾಳೆ. ಸುಪ್ರಿತ ಚವಾಣ ಜೆಎಸ್‌ಎಸ್ ಸ್ಕೂಲ ಧಾರವಾಡ ಸೌಭಾಗ್ಯ ಪಾಟೀಲ, ಜಿಎಚ್‌ಎಸ್ ಏರಿಕೊಪ್ಪ ಶಾಲೆಯ ಉಮಾಶ್ರೀ ಬಣಗಾರ, ಹರ್ಷಿತ ಕೌಶಲಿ, ಕಾವ್ಯಾ ಅಮ್ಮಿನಭಾವಿ, ಬಸವರೆಡ್ಡಿ ಸ್ಕೂಲ ಈ ಎಲ್ಲ ಟಾಪ್ ಟೆನ್ ವಿದ್ಯಾರ್ಥಿಗಳಿಗೆ ಸಿ.ವಿ.ರಾಮನ್ ಅವಾರ್ಡ್ ಪಾರಿತೋಷಕ ಮೊತ್ತ ಹಾಗೂ ಸ್ಕಾಲರ್‌ಶಿಪ್ ಪ್ರದಾನ ಮಾಡಲಾಯಿತು.
ಉಳಿದ ಟಾಪ್ 20 , 30 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ನ್ನು ಕಾಲೇಜಿನ ಆಡಳಿತಗಾರರಾದ ದುಂಡಯ್ಯ ಹಿರೇಮಠ ಅವರು ಪ್ರದಾನ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಬಿರಾದಾರ ಅವರು ಮಾತನಾಡಿದರು. ಸಂಸ್ತೆಯ ಅಧ್ಯಕ್ಷರಾದ ವಿ. ಎಸ್ ಹೆಗಡೆ ಹಾಗೂ ಕಾಲೇಜಿನ ಪ್ರಾಚಾರ್ಯ ರಾದ ಅನುರಾಧಾ ಆರಾಧ್ಯಮಠ, ಉಪನ್ಯಾಸಕರಾದ ಮಾರುತಿ ಕದಂ, ಬಸವರಾಜ ಗಬ್ಬಿಗೋಳ, ಪ್ರಸಾದ ಪೂಜಾರ ಸುಧಾ ಕಬ್ಬೂರ ಪೂಜಾ ಸಂಗಮೇಶ ಅಕ್ಷತಾ, ಮಮತಾ, ವಿಜಯಲಕ್ಷ್ಮೀ ಉಪಸ್ಥಿತರಿದ್ದರು.