ಕರಾಟೆ ಸ್ಪರ್ಧೆಯಲ್ಲಿ ವಿಜೇತ ಕ್ರೀಡಾಪಟುಗೆ ಬಹುಮಾನ ವಿತರಣೆ
ಕೊಪ್ಪಳ 21: ವಿಜಯನಗರ ಓಪನ್ ಎರಡನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಪ್ಪಳದ ಸಾಯಿ ಬುಡೋ ಕಾನ್ ಕರಾಟೆ ಕ್ಲಬ್ ನ ಕ್ರೀಡಾಪಟು ಗುಲಾಮ್ ಹುಸೇನ್ ಮುಲ್ಲಾ ರವರು ಸ್ಪರ್ಧೆ ಮಾಡಿ ಎರಡನೆಯ ಬಹುಮಾನ ಪಡೆದುಕೊಂಡಿದ್ದಾರೆ. ಅವರಿಗೆ ಸಾಯಿ ಬೋಡೋ ಕಾನ್ ಕರಾಟೆ ಕ್ಲಬ್ ನಲ್ಲಿ ಮುಖ್ಯಸ್ಥ ಶ್ರೀಕಾಂತ ಕಲಾಲ್ ಹಾಗೂ ಮೌಲಾ ಹುಸೇನ್ ಮುಂಡರಗಿ ರವರು ಗೌರವದಿಂದ ಬಹುಮಾನ ವಿತರಣೆ ಮಾಡಿ ಅಭಿನಂದಿಸಿದರು. ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಸ್ಪರ್ಧೆ ಮಾಡಿ ವಿಜೇತರಾಗಿ ನಮ್ಮ ಕೊಪ್ಪಳದ ಕ್ಲಬ್ ಗೆ ಕೀರ್ತಿ ತರುವಲ್ಲಿ ಯಶಸ್ವಿಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಶುಭಕೋರಿದ್ದಾರೆ.