ರಮ್ಮನಹಳ್ಳಿಯ ಎನ್‌ಇಟಿ ಓರಿಯನ್ ಶಾಲೆಯಲ್ಲಿ ಬಹುಮಾನ ವಿತರಣೆ

Prize distribution at NET Orion School, Rammanahalli

ರಮ್ಮನಹಳ್ಳಿಯ ಎನ್‌ಇಟಿ ಓರಿಯನ್ ಶಾಲೆಯಲ್ಲಿ ಬಹುಮಾನ ವಿತರಣೆ

ಕೊಪ್ಪಳ 24: ಮೈಸೂರು ತಾಲೂಕಿನ ರಮ್ಮನಹಳ್ಳಿ ಗ್ರಾಮದಲ್ಲಿರುವ ಎನ್ ಈ ಟಿ ಒರಿಯನ್ ಶಾಲೆಯಲ್ಲಿ 2023-24ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ದಲ್ಲಿ ಏರಿ​‍್ಡಸಿದ  ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ರೀಡೆಯಲ್ಲಿ ಪಾಲ್ಗೊಂಡು ವಿಜೇತ ಕ್ರೀಡಾಪಟು ವಿದ್ಯಾರ್ಥಿಗಳಿಗೆ ಸೋಮವಾರ ದಂದು ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣೆ ಮಾಡಲಾಯಿತು ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆ ಮತ್ತು ಶಾಲೆಯ ಅಧ್ಯಕ್ಷರಾದ ಎಂ ತಾಹಿರ್ ಅಲಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕೊಪ್ಪಳದ ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ ಸಾಧಿಕ್ ಅಲಿ, ಬಳ್ಳಾರಿ ಜಿಲ್ಲೆ ಸಂಡೂರಿನ ಸಮಾಜ ಸೇವಕ ಕೆ ಎಂಡಿ ಇಸ್ಮಾಯಿಲ್ ಜಬಿ, ಸೇರಿದಂತೆ ಅಜೀಮಾ ಬೇಗಮ್, ಸುಮಯ್ಯ ಶಿರಿನ್ ಅಲ್ಲದೆ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಯಾಸ್ಮಿನ್ ತಾಹಿರಅಲಿ ಆಡಳಿತ ಮಂಡಳಿ ನಿರ್ದೇಶಕರಾದ ವಾಹಿದ್ ಖಾನ್, ಅಭಿಯಂತರಾದ ಯೂಸುಫ್ ಅಲಿ ಮತ್ತು ಶಾಲೆಯ ಮುಖ್ಯ ಶಿಕ್ಷಕಿ ತಬಸ್ಸುಮ್ ಸೇರಿದಂತೆ ಸಹ ಶಿಕ್ಷಕರುಗಳಾದ ರಮ್ಯ ,ಅಲ್ಫಿ ,ಅಪ್ಸರಾ ಅಜ್ಮಿ ,ರುಕ್ಸಾ ರ್ ಫಾತಿಮಾ, ಮಮ್ತಾ, ಗಂಗಾ, ಸರಸ್ವತಿ, ಸುಹಾನ ,ಫರ್ಹೀನ್ ಅನ್ನಪೂರ್ಣ ,ತಸ್ಲೀಮ್, ಆಜರಾ ಸೂಪೀಯಾ, ರುಮಾನಾ ,ದೀಪ ಹಬೀಬಾ, ಮುಜಮ್ಮಿಲ್ಲ ಅಹಮದ್, ಪ್ರಿಯಾಂಕ, ಮುಜಾಹಿದ್ ಹಜರತ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದು ಹಾಗೂ ವಿದ್ಯಾರ್ಥಿಗಳು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಹುಮಾನ ಮತ್ತು ಪ್ರಶಸ್ತಿ ಪತ್ರ ಪಡೆದುಕೊಂಡರು.