ಭಯೋತ್ಪಾದಕರು ಎಲ್ಲೇ ಅಡಗಿದ್ದರೂ ಬಿಡದೆ ಹತ್ಯೆ: ಪ್ರಧಾನಿ ಮೋದಿ ಕಠಿಣ ಎಚ್ಚರಿಕೆ

ಮುಜಾಫರ್ ಪುರ್ ಏ 30 ಭಯೋತ್ಪಾದಕರು ಎಲ್ಲೇ ಅಡಗಿದ್ದರೂ ಭದ್ರತಾ ಪಡೆಗಳು ನುಗ್ಗಿ ಹತ್ಯೆ ಮಾಡಲಿವೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.  ಭಯೋತ್ಪಾದಕರು ತಮ್ಮ ಮನೆಗಳಲ್ಲಿ ಅಡಗಿದ್ದರೂ, ಭಾರತದಲ್ಲಲ್ಲದೇ ಗಡಿಯ ಹೊರಗೆ ಅಡಗಿದ್ದರೂ ಭದ್ರತಾಪಡೆಗಳು ಹತ್ಯೆ ಮಾಡದೆ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.  ಮಂಗಳವಾರ ಇಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಿಂದ ಭಯೋತ್ಪಾದನೆಯನ್ನು ನಿಮರ್ೂಲನೆಗೊಳಿಸಲು ತಮ್ಮಸರ್ಕಾರ ಕ್ಕೆ ಮಾತ್ರ ಧೈರ್ಯ ಮತ್ತು ಇಚ್ಛಾಶಕ್ತಿ ಇದೆ. ಹಿಂದಿನ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಒಡೆದಾಳುವ ಮತ್ತು ಅಶಾಂತಿ ಉಂಟುಮಾಡುವ ಶಕ್ತಿಗಳನ್ನು ಎದುರಿಸುವ ಇಚ್ಛಾಶಕ್ತಿಯ ಕೊರತೆ ಇತ್ತು. ಪಾಕಿಸ್ತಾನದ ಪಾತ್ರ ಇದೆ ಎಂಬ ಸುಳಿವು ದೊರೆತರೆ ಇಂತಹ ಶಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಹೆದರುತ್ತಿತ್ತು ಎಂದು ಟೀಕಿಸಿದ್ದಾರೆ.  ಕಾಂಗ್ರೆಸ್ ಆಡಳಿತದಲ್ಲಿದ್ದಾಗ ದೇಶದಲ್ಲಿ ಆಗಿಂದಾಗ್ಗೆ ಸರಣಿ ಬಾಂಬ್ ಸ್ಫೋಟಗಳು ನಡೆಯುತ್ತಿದ್ದವು. ಆದರೆ, ಕಳೆದ ಐದು ವರ್ಷಗಳಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ. ಭಯೋತ್ಪಾದಕರ ಗಡಿಯಿಂದ ಹೊರಗೆ ಅಡಗಿದ್ದರೂ ನುಗ್ಗಿ ಹತ್ಯೆ ಮಾಡುವ ಗುಂಡಿಗೆ ಸಕರ್ಾರಕ್ಕಿದೆ ಎಂದು ಅವರು ಹೇಳಿದ್ದಾರೆ.