ಭುವನೇಶ್ವರ, ಮೇ 6ಫೋನಿ ಚಂಡಮಾರುತದಿಂದ ತೀವ್ರವಾಗಿ ನಲುಗಿರುವ ಒಡಿಶಾದ ಕರಾವಳಿಯ ಜಿಲ್ಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದರು.
ಪುರಿ, ಖರ್ದಾ ಕಟಕ್, ಜಗತ್ ಸಿಂಗ್ ಪುರ್, ಜಗ್ಪುರ್, ಕೇಂದ್ರಪಾರಾ, ಭದ್ರಕ್ ಹಾಗೂ ಬಾಲಸೂರ್ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಪರಾಮಶರ್ಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ , ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪ್ರಧಾನಿ ಅವರೊಂದಿಗಿದ್ದರು. ಪ್ರಧಾನಿ ಮೋದಿ, ಸಂತ್ರಸ್ತ ಪ್ರದೇಶಗಳಲ್ಲಿ ಕೈಗೊಳ್ಳಲಾಗಿರುವ ಪರಿಹಾರ ಹಾಗೂ ಪುನಃಸ್ಥಾಪನಾ ಕಾರ್ಯಗಳ ಕುರಿತು ರಾಜ್ಯ ಸಕರ್ಾರದ ಅಧಿಕಾರಿಗಳೊಂದಿಗೆ ಪರಾಮರ್ಶೆ ನಡೆಸಿದರು.
ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ನಿನ್ನೆ ಒಡಿಶಾ ರಾಜ್ಯಪಾಲ ಗಣೇಶಿ ಲಾಲ್ ಹಾಗೂ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಮಾಹಿತಿ ಪಡೆದು, ಕೇಂದ್ರ ಸಕರ್ಾರ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಒಡಿಶಾ ಕರಾವಳಿಯಲ್ಲಿ ಬೀಸಿದ ಭಯಾನಕ ಫೋನಿ ಚಂಡಮಾರುತದಿಂದ ಮೃತಪಟ್ಟವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಪುರಿಯಲ್ಲಿ ಹೆಚ್ಚಿನ ಸಾವು ನೋವು ಸಂಭವಿಸಿದ್ದು, ನಂತರ ಮಯೂರಗಂಜ್ ಹಾಗೂ ಖುದ್ರ ಜಿಲ್ಲೆಗಳಲ್ಲಿ ಸಾವುಗಳು ಸಂಭವಿಸಿವೆ. ಭುವನೇಶ್ವರ ಪುರಸಭೆ ನಗರದ ಸಂತ್ರಸ್ತರಿಗೆ ಇಂದು ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿದೆ. ರಾಜ್ಯ ಸರ್ಕಾರ ಪ್ರಕಟಿಸಿರುವ ಯೋಜನೆಯಂತೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರತಿ ಸಂತ್ರಸ್ತ ಕುಟುಂಬಕ್ಕೆ 50 ಕೆಜಿ ಅಕ್ಕಿ, 2000 ರೂ. ಹಣಕಾಸು ನೆರವು, ಪಾಲಿಥೀನ್ ಶೀಟುಗಳನ್ನು ಖರೀದಿಸಲು 500 ರೂಪಾಯಿ ಒದಗಿಸಲು ನಿರ್ಧರಿಸಲಿದೆ. ಕೇಂದ್ರ ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ನೇತೃತ್ವದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ ಶನಿವಾರ, ಭಾನುವಾರ ಚಂಡಮಾರುತ ಸಂತ್ರಸ್ತ ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಕೈಗೊಂಡಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯ ರಣೆಗಳನ್ನು ಪರಾಮರ್ಶಿಸಿತು