ಲೋಕದರ್ಶನ ವರದಿ
ಶಿರಹಟ್ಟಿ 19: ಈ ಹಿಂದೆ ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ಯೋಜನೆಯು ಸಣ್ಣ ಹಾಗೂ ಅತೀ ಸಣ್ಣ ರೈತರಿಗಷ್ಟೇ ಸಿಮೀತವಾಗಿತ್ತು, ಆದರೆ ಇದೀಗ ಎಲ್ಲ ವರ್ಗದ ರೈತರಿಗೂ ಸಹ ಅನ್ವಯವಾಗಲಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಯೋಜನಾ ನಿದರ್ೆಶಕ ಟಿ.ದಿನೇಶ ಹೇಳಿದರು.
ಅವರು ತಹಶೀಲ್ದಾರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಾ, ಈ ಯೋಜನೆಯಡಿ ರೈತರಿಗೆ ವರ್ಷಕ್ಕೆ 6ಸಾವಿರ ರೂಪಾಯಿಗಳನ್ನು 3 ಕಂತುಗಳಲ್ಲಿ ಫಲಾನುಭಗಳ ಬ್ಯಾಂಕ್ ಖಾತೆಗೆ ಸಹಾಯಧನ ಜಮಾ ಆಗುತ್ತಿತ್ತು, ಇದೀಗ ಎಲ್ಲ ರೈತರು ಸಹ ಈ ಯೋಜನಾ ವ್ಯಾಪ್ತಿಗೆ ಒಳಪಡಲಿದ್ದಾರೆ. ಸಂಘ-ಸಂಸ್ಥೆಗಳ ಜಮೀನು, ಶಾಸಕರ, ಸಂಸದರ, ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರು ಗ್ರೂಪ್ ಡಿ ಸರಕಾರಿ ನೌಕರರು, 10ಸಾವಿರಕ್ಕಿಂತಲೂ ಹೆಚ್ಚಿನ ಪೆನಶೆನ್ ಪಡೆಯುತ್ತಿರುವವರು, ಆದಾಯ ತೆರಿಗೆ ಪಾವತಿದಾರರು, ವೈದ್ಯರು, ಇಂಜಿನೀಯರರು, ವಕೀಲರುಗಳು ಜಮೀನುಗಳನ್ನು ಹೊಂದಿದ್ದರೆ ಈ ಯೋಜನೆಗೆ ಅನರ್ಹರಿರುತ್ತಾರೆ ಎಂದರು.
ತಾಪಂ ಈಓ ಆರ್.ವೈ.ಗುರಿಕಾರ, ಶಿರಹಟ್ಟಿ ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣನವರ, ಲಕ್ಷ್ಮೇಶ್ವರ ತಹಶೀಲ್ದಾರ ಭ್ರಮರಾಂಭಾ ಗುಬ್ಬಿಶೆಟ್ಟಿ ಉಪಸ್ಥಿತರಿದ್ದರು.