‘ಹೆಣ್ಣು ಭ್ರೂಣ ಹತ್ಯೆ ತಡೆ ಅತ್ಯಗತ್ಯ’
ಧಾರವಾಡ 30: ಲಿಂಗಾನುಪಾತದ ಸಮಾನತೆ ಕಾಯ್ದುಕೊಳ್ಳಲು ಹೆಣ್ಣು ಭ್ರೂಣ ಹತ್ಯೆ ತಡೆಯುವುದು ಅತ್ಯಗತ್ಯ ಎಂದು ಜಿಲ್ಲಾ ಕಾನೂನು ಸತಿಹೆಗಾರರಾದ ಸುನಂದಾ ಯರಿಕಂಚಿ ಹೇಳಿದರು. ದಿನಾಂಕ : 29-01- 2025 ರಂದು ದೇವರಹುಬ್ಬಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ "ಹೆಣ್ಣು ಭ್ರೂಣ ಹತ್ಯೆತಡೆ" ಪ್ರಸವ ಪೂರ್ವ ಲಿಂಗ ಪತ್ತೆ ತಡೆ ಕಾಯ್ದೆ ಕುರಿತು ಶಾಲಾ ಮಕ್ಕಳನ್ನುದೇಶಿಸಿ ಮಾತನಾಡಿದರು. ತಲೆಮಾರುಗಳಿಂದ ಬಂದಿರುವ ನಂಬಿಕೆ, ಸಂಪ್ರದಾಯಗಳ ಪರಿಣಾಮ ಗಂಡು ಮಗು ಪಡೆಯಲು ಹೆಚ್ಚಿನ ಒಲವು ವ್ಯಕ್ತಪಡಿಸುತ್ತಾರೆ.
ಹೆಣ್ಣು ಮಕ್ಕಳ ಬಗ್ಗೆ ಅಸಡ್ಡೆ ಇರುವುದರಿಂದ ಭ್ರೂಣ ಹತ್ಯೆ ಮಾಡಲಾಗುತ್ತದೆ. ಇದರಿಂದ ಲಿಂಗಾನುಪಾತದಲ್ಲಿ ಅಸಮಾನತೆ ಉಂಟಾಗಿ ಹಲವು ಸಮಸ್ಯೆಗಳಿಗೆ ಕಾರಣ ವಾಗುತ್ತದೆ. ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ. ಮಹಿಳೆಯರು ಹಿಂದಿನ ನಂಬಿಕೆಗಳಿಂದ ಹೊರಬರಬೇಕು. ಭ್ರೂಣ ಹತ್ಯೆ ತಡೆ ಬಗ್ಗೆ ಇರುವ ಕಾನೂನಿನ ಅರಿವು ಎಲ್ಲರಲ್ಲಿ ಮೂಡಿಸಬೇಕು ಎಂದು ಹೇಳಿದರು. ಗಂಡು ಮತ್ತು ಹೆಣ್ಣು ಸಮ ಎಂಬ ಸತ್ಯವನ್ನು ಎಲ್ಲರಿಗೆ ತಿಳಿಸಬೇಕು.
ಮಹಿಳೆಯರನ್ನು ಗೌರವಿಸುವುದನ್ನು ಕಲಿಸಬೇಕು. ಇಂತಹ ಕ್ರಮಗಳ ಮೂಲಕ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯ ಬಹುದು. ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವ ಮೂಲಕ ರಾಜ್ಯದಲ್ಲಿ ಮಾದರಿ ಲಿಂಗಾನುಪಾತ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅಧ್ಯಾಪಕ, ಸಾಹಿತಿ ನಾರಾಯಣ ಭಜಂತ್ರಿ 2011ರ ಜನಗಣತಿಯ ಪ್ರಕಾರ 1 ಸಾವಿರ ಗಂಡು ಮಕ್ಕಳಿಗೆ 955 ಹೆಣ್ಣು ಮಕ್ಕಳಿದ್ದರು. ಆದರೆ ಈಗ ಅದು 938ಕ್ಕೆ ಕುಸಿದಿದೆ ಎಂದರು.
ಪ್ರಭಾರಿ ಮುಖ್ಯ ಶಿಕ್ಷಕ ಸೋಮನಾಥ ಎಚ್ ಎಂ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಶಿಕ್ಷಕಿಯರಾದ ಪ್ರೇಮಾ ಕಮ್ಮಾರ, ಅಕ್ಕಮ್ಮ ಸವಾಸಿ ನಿರ್ಮಾಲಾ ನಾಯ್ಕರ ಆಶಾ ಕಾರ್ಯಕರ್ತೆ ಶೀಲಾ ಹೊಂಗಲ ಉಪಸ್ಥಿತರಿದ್ದರು. ಶಶಿಧರ ಡಮ್ಮಳ್ಳಿ ನಿರೂಪಿಸಿದರು. ಸುನಿತಾ ಎಚ್ ಸ್ವಾಗತಿಸಿದರು. ಸಪ್ನನಾ ಕುರಿಯವರ ವಂದಿಸಿದರು.