ರಸ್ತೆ ನಿಯಮಗಳ ಪಾಲಿಸಿ ಅಪಘಾತ ತಡೆಯಿರಿ: ಬಳ್ಳಾರಿ

ಲೋಕದರ್ಶನ ವರದಿ

ಧಾರವಾಡ08: ದೇಶದಲ್ಲಿ ಆಗುವ 90% ಅಪಘಾತಳಿಗೆ ರಸ್ತೆ ನಿಯಮಗಳನ್ನು ಪಾಲಿಸದೇ, ನಿಯಮಗಳನ್ನು ಉಲ್ಲಂಘಸಿ ವಾಹನ ಚಲಾವಣೆ ಮಾಡುವುದೇ ರಸ್ತೆ ಅಪಘಾತಗಳ ಮೂಲ ಕಾರಣ ಎಂದು ಸಂಚಾರಿ ಪೋಲಿಸ್ ಠಾಣೆಯ ಸಬ್ ಇನ್ಸಪೆಕ್ಟರ್ ವೀರೇಶ ಬಳ್ಳಾರಿ ಹೇಳಿದರು.

  30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ - 2019 ರ ಅಂಗವಾಗಿ ನೇಚರ್ ಫಸ್ಟ ಇಕೋ ವಿಲೇಜ ಹಾಗೂ ಸಂಚಾರಿ ಪೋಲಿಸ್ ಠಾಣೆ, ಧಾರವಾಡ ಜಂಟಿಯಾಗಿ ಆರ.ಕೆ. ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾಥರ್ಿಗಳಿಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಜರುಗಿತು.

 ಅಷ್ಟೇ ಅಲ್ಲದೇ, ದ್ವಿಚಕ್ರ ವಾಹನ ಸವಾರರ ಪ್ರಾಣ ಹಾನಿಯಲ್ಲಿ ಮುಖ್ಯ ಕಾರಣ, ಹೆಲ್ಮೆಟ್ ಧರಸದೆ ಇರುವದು. ಅದರೊಂದಿಗೆ ಅತಿಯಾದ ವೇಗ, ಅಪ್ರಾಪ್ತ ವಯಸ್ಸಿನ ವಾಹನ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಮುಂತಾದ ಇಂತಹ ಕಾರಣಗಳೇ, ಅಪಘಾತಗಳಿಗೆ ಮುಖ್ಯ ಕಾರಣ. ಹೀಗಾಗಿ, ಈ ಅಪಘಾತಗಳನ್ನು ತಡೆಯಬೇಕೆಂದರೆ ರಸ್ತೆ ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದು ಬಹುಮುಖ್ಯ ಎಂದು ನೆರೆದಂತಹ ವಿದ್ಯಾಥರ್ಿ ಸಮೂಹಕ್ಕೆ ತಿಳಿಸಿದರು. 

 ನೇಚರ್ ಫಸ್ಟ ಇಕೋವಿಲೇಜಿನ ಪ್ರಧಾನ ಸೇವಕ ಪ್ರಕಾಶ ಗೌಡರ ಮಾತನಾಡಿ ರಸ್ತೆ ಅಪಘಾತಗಳಲ್ಲಿ, ಅದರಲ್ಲಿಯೂ ದ್ವಿಚಕ್ರ ವಾಹನಗಳಲ್ಲಿ ಆಗುತ್ತಿರುವ ಅಪಘಾತಗಳಲ್ಲಿ ಯುವಜನರೇ ಹೆಚ್ಚು ಬಲಿಯಾಗುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಇಂದಿನ ಆಧುನಿಕ ತಂತ್ರಜ್ಞಾನದ ಅತಿ ವೇಗದ ಬೈಕಗಳು. ಹೀಗಾಗಿ, ಯುವಜನಾಂಗಕ್ಕೆ ಇಂತಹ ವಾಹನಗಳು ಉತ್ತೇಜಿಸುತ್ತಿದ್ದು, ಪಾಲಕರು ಇಂತಹ ಅತಿ ವೇಗದ ವಾಹನಗಳನ್ನು ತಮ್ಮ ಮಕ್ಕಳಿಗೆ ಕೊಡಿಸುವ ಮೊದಲು ಜಾಗ್ರತಿಹಿಸಬೇಕೆಂದು ತಿಳಿಸಿದರು. 

    ಇಕೋವಿಲೇಜಿನ ಸಹ ಸಂಸ್ಥಾಪಕರಾದ ಚಂದ್ರಶೇಖರ ಭ್ಯೆರಪ್ಪನವರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಆರ್.ಕೆ. ಪ್ಯಾರಾಮೆಡಿಕಲ್ ಕಾಲೇಜಿನ ಶಿವಶಂಕರ ಶಿವಪುರ ಸ್ವಾಗತ ಹಾಗೂ ಸಾವಿತ್ರಿ ಬೀಡಿಕರ ವಂದನಾರ್ಪಣೆ ಮಾಡಿದರು.