ಲೋಕದರ್ಶನವರದಿ
ರಾಣೇಬೆನ್ನೂರು17: ಗಂಗಾಮತ ಸಮಾಜದವರು ಜಾತಿ ಧರ್ಮ ಬೇಧ ಭಾವ ತೊರೆದು ಎಲ್ಲಾ ಜನಾಂಗದ ಬಂಧುಗಳೊಂದಿಗೆ ಬೆರೆತು ಗಂಗಾಪರಮೇಶ್ವರಿ ದೇವಸ್ಥಾನವನ್ನು ನಿಮರ್ಿಸಿ ಭಕ್ತರು ತಮ್ಮ ಮಕ್ಕಳಿಗೆ ಧಾಮರ್ಿಕ ಮನೋಭಾವ ಬೆಳೆಸುವುದರ ಜೊತೆಗೆ ಉತ್ತಮ ನಾಗರಿಕರನ್ನಾಗಿ ಬೆಳೆಸಲು ಶ್ರಮವಹಿಸಿ ಎಂದು ನರಸೀಪುರ ಅಂಬಿಗರ ಚೌಡಯ್ಯ ಪೀಠದ ಪೀಠಾಧಿಪತಿ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ಹೇಳಿದರು.
ತಾಲೂಕಿನ ಕವಲೆತ್ತು ಗ್ರಾಮದಲ್ಲಿ ಶುಕ್ರವಾರ ತುಂಗಭದ್ರಾ ನದಿ ದಡದಲ್ಲಿ ನೂತನ ಗಂಗಾಪರಮೇಶ್ವರಿ ದೇವಸ್ಥಾನ ನಿಮರ್ಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮಹಾಭಾರತದ ಕಾಲದಿಂದಲೂ ವೇದವ್ಯಾಸರ ನಾಮಬಲದಿಂದ ಭಾರತೀಯ ಮೂಲ ನಿವಾಸಿಗಳು ಗಂಗಾಮತ ಸಮಾಜದವರು ಆಗಿದ್ದರು. ಗಂಗೆ ಪವಿತ್ರ, ಮಾನವ ಕುಲಕೋಟಿಗೆ ಅತ್ಯಾವಶ್ಯಕ, ಸಮಸ್ತ ಸಮಾಜ ಬಂಧುಗಳಿಗೆ ಈ ಗಂಗೆಯ ನೀರಿನ ಅವಶ್ಯಕತೆ ಇದೆ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಷ್ಟಮೂತರ್ಿ ಓಲೇಕಾರ, ನಾಗರಾಜ ಬಾಕರ್ಿ, ಹನುಮಂತಪ್ಪ ಕೋಡೇರ, ನಾಗರಾಜ ಹೊನ್ನಪ್ಪನವರ, ಬುಳ್ಳಪ್ಪ ಹೊನ್ನಪ್ಪನವರ, ಹನುಮಂತಗೌಡ ಪಾಟೀಲ, ಹನುಮಂತ ಕೋಡೇರ, ದುರುಗಮ್ಮ ಜಾಡರ, ಗೋಣಿಬಸಪ್ಪ ಜಾಡರ, ಬಸಪ್ಪ ಜಾಡರ, ಕೃಷ್ಣಪ್ಪ ಪೂಜಾರ್, ಎಲ್.ಕೆ.ನಾಗರಾಜ, ರಾಘವೇಂದ್ರ, ವೆಂಕಟೇಶಪ್ಪ ಜಾಡರ, ಮಂಜಪ್ಪ ಬೇವಿನಮರದ, ಪ್ರಕಾಶ ಬಾಕರ್ಿ, ಮಾರುತಿ ಬಾಕರ್ಿ, ಸತೀಶ ದೊಡ್ಮನಿ, ನಾರಾಯಣ ಜಾಡರ, ರಾಜು ಪೂಜಾರ, ಪ್ರಶಾಂತ ಜಾಡರ, ಮಾರುತಿ ಬಾಕರ್ಿ ಮತ್ತಿತರರು ಇದ್ದರು