ಪ್ರಾಥಮಿಕ ಶಾಲೆಗೆ ಅಧ್ಯಕ್ಷರ ದಿಢೀರ್ ಭೇಟಿ

ಲೋಕದರ್ಶನ ವರದಿ

ಇಂಡಿ 22: ಸಾಲೋಟಗಿ ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ವಿಜಯಪುರ ಜಿಲ್ಲಾ ಪಂಚಾಯತ ಅಧ್ಯಕ್ಷ ಶಿವಯೋಗೆಪ್ಪ ಅಜರ್ುನ ನೇದಲಗಿ ದಿಢೀರ್ ಭೇಟಿ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿ ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಮಕ್ಕಳ ಆರೋಗ್ಯದ ಕಡೆಗೂ ಶಿಕ್ಷಕರು ಗಮನ ನೀಡಬೇಕೆಂದು ಹೇಳಿದರು. ಶಾಲೆಯಲ್ಲಿ ವಿದ್ಯಾಥರ್ಿನಿಯರ ಜೊತೆಗೂಡಿ ತಾವೆ ಸ್ವತ: ಊಟ ಮಾಡುವುದರ ಮೂಲಕ ಅಡುಗೆಯ ಗುಣ ಮಟ್ಟವನ್ನು ಪರಿಶೀಲಿಸಿದರು. ಶಾಲಾ ಮಕ್ಕಳ ಜೊತೆಗೆ ಸಂವಾದವನ್ನು ನಡೆಸಿ ವಿದ್ಯಾಥರ್ಿಗಳಿಗೆ ನೀಡುತ್ತಿರುವ ಮೂಲ ಸೌಲಭ್ಯಗಳನ್ನು ಹಾಗೂ ಸಮಸ್ಯೆಗಳ ಕುರಿತು ಚಚರ್ಿಸಿದರು. 

ಶಾಲೆಯಲ್ಲಿರುವ ಶಿಕ್ಷಕರ ಹಾಜರಾತಿ ಹಾಗೂ ಶಾಲಾ ಮಕ್ಕಳ ಹಾಜರಾತಿಯನ್ನು ಪರಿಶೀಲಿಸಿದರು. ಮುಂಬರುವಂತಹ ದಿನಗಳಲ್ಲಿ ವಿದ್ಯಾಥರ್ಿಗಳು ಪರಿಕ್ಷೆಯನ್ನು ಬರೆಯಲಿದ್ದು ಫಲಿತಾಂಶದಲ್ಲಿ ಪ್ರಗತಿ ಕಾಣಬೇಕೆಂದು ಮುಖ್ಯೋಪಾಧ್ಯಾಯರಿಗೆ ಸೂಚಿಸಿದರು. ಶಾಲೆಯ ಅಡುಗೆಯ ಸಿಬ್ಬಂದಿ ಊಟವನ್ನು ರುಚಿಯಾಗಿ ಮಾಡಿದ್ದು ಹೀಗೆ ದಿನಾಲೂ ಅಚ್ಚು ಕಟ್ಟಾಗಿ ಅಡುಗೆ ಮಾಡಿ ವಿದ್ಯಾಥರ್ಿಗಳಿಗೆ ಬಡಿಸಿ ಎಂದು ಸುಚಿಸಿದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ  ಜಿ.ಕೆ.ಹೊನಖಂಡೆ, ಶಿಕ್ಷಕರಾದ  ಎಚ್.ಎಸ್.ತಡಲಗಿ,  ಬಿ.ಎಮ್.ಅರಳಗುಂಡಗಿ, ಬಿ.ಎಸ್.ದೊಡ್ಡಿ,  ಎಸ್.ಬಿ.ಅರಳಯ್ಯ,  ಎಸ್.ಬಿ.ದಳವಾಯಿ,  ಬಿ.ಎಮ್.ವಠಾರ  ಎಸ್.ಎಸ್.ನಾವಿ ಹಾಗೂ ಇತರರು ಉಪಸ್ಥಿತರಿದ್ದರು.