ಲೋಕದರ್ಶನ ವರದಿ
ಕೊಪ್ಪಳ 04: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಹಾಗೂ ಹೈ.ಕ. ನಾಗರಿಕರ ವೇದಿಕೆ ವತಿಯಿಂದ ಜಿಲ್ಲಾ ಉತ್ಸವದ ಸಂದರ್ಭದಲ್ಲಿ 3ನೇ ಬಾರಿಗೆ ಅಗಷ್ಟ 24ರಿಂದ 28ರ ವರಗೆ ಜರುಗುವ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಸಾಹಿತ್ಯ ಭವನದಲ್ಲಿ ಜರುಗಲಿರುವ ಉರ್ದು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನದ ಸವರ್ಾಧ್ಯಕ್ಷರಾದ ಇಲ್ಲಿನ ಸಮಾಜ ಸೇವಕ ಹುಜೂರ್ ಅಹ್ಮದ್ ನಾಯಕ್ರವರನ್ನು ರವಿವಾರ ನಗರದ ಅವರ ನಿವಾಸದಲ್ಲಿ ವೇದಿಕೆವತಿಯಿಂದ ಸನ್ಮಾನಿಸಿ ಅಧಿಕೃತ ಆಹ್ವಾನ ನೀಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮ್ಮೇಳನದ ಅಧ್ಯಕ್ಷರು ಜಗತ್ತನ್ನು ಗೆಲ್ಲುವ ಶಕ್ತಿ ಲೇಖನಿಗೆ ಇದೆ, ಖಡ್ಗಕಿಂತ ಹರಿತಯಾದ್ದುದು ಲೇಖನಿಯಾಗಿದ್ದು, ಸಮಾಜ ಕಟ್ಟುವ ಕೆಲಸಕ್ಕೆ ಆದತ್ಯತೆ ನೀಡಬೇಕೆಂದರು. ಮೌಲಾನ ಹಾಫೀಜ್ ಮಹ್ಮದ್ ಮುಸ್ತಫಾ ಕಮಾಲ್ ಪಾಷಾ ಖಾದ್ರಿ-ವ- ತಸ್ಕನೀ ಮಾತನಾಡಿ ನಮ್ಮ ಭಾರತ ದೇಶದಲ್ಲಿ ಹುಟ್ಟಿ ಬೆಳೆದ ಉದರ್ು ಭಾಷೆ ಅತ್ಯಂತ ಸೊಗಸಾದ ಬಾಷೆಯಾಗಿದೆ ಎಂದ ಅವರು ಸಾಹಿತಿ ಮತ್ತು ಪತ್ರಕರ್ತರಿಗೆ ಅಪಾರವಾದ ಗೌರವವಿದೆ ಸಕರ್ಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕೆಂದರು.
ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಹಾಗೂ ಹೈ.ಕ. ವೇದಿಕೆ ವತಿಯಿಂದ ಹೈ.ಕ. ಪ್ರದೇಶದ ಈ ಭಾಗದಲ್ಲಿ ಉದರ್ು ಕನ್ನಡಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಕಳೆದ 2 ವರ್ಷಗಳಿಂದ ಯಶಸ್ವಿಯಾಗಿ ಉದರ್ು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ನೆಡೆಸಲಾಗಿದ್ದು, ಈ ಸಲ 3ನೇ ಬಾರಿಗೆ ಸಮ್ಮೇಳನದ ಸವರ್ಾಧ್ಯಕ್ಷರಾಗಿ ಆಯ್ಕೆಯಾಗಿರುವ ಹುಜೂರ್ ಅಹ್ಮದ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಸಮ್ಮೇಳನ, ವಿಚಾರ ಗೋಷ್ಠಿ ಹಾಗೂ ಬಹುಭಾಷಾ ಕವಿಗೋಷ್ಠಿ ನೆಡೆಸಲಾಗುವುದು ಎಂದು ಕಾರ್ಯಕ್ರಮ ಸಂಘಟಕ ವೇದಿಕೆ ಅಧ್ಯಕ್ಷ ಮಹೇಶಬಾಬು ಸುವರ್ೆ ರವರು ಸಮ್ಮೇಳನ ಅಧ್ಯಕ್ಷರಿಗೆ ಸನ್ಮಾನಿಸಿ ಅಧಿಕೃತ ಆಹ್ವಾನ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮ ಗುರುಗಳಾದ ಮೌಲಾನ ಹಾಫೀಜ್ ಮಹ್ಮದ್ ಮುಸ್ತಫಾ ಕಮಾಲ್ ಪಾಷಾ ಖಾದ್ರಿ-ವ- ಮತ್ತು ತಸ್ಕನೀ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಇನ್ನುವರ ಧರ್ಮ ಗುರು ಗಂಗಾವತಿಯ ಮೌಲಾನ ಅತೀಕ ಉರ್ ರೆಹಮನ್ ಪಾಲ್ಗೊಂಡಿದ್ದರು. ವೇದಿಕೆ ಜಿಲ್ಲಾಧ್ಯಕ್ಷ ಜಿ.ಎಸ್.ಗೊನಾಳ ಆಶಯ ಬಾಷಣ ಮಾಡಿದರೆ, ತಿರುಗ್ನನಡ ಪತಿಷ್ಠಾನದ ಅಧ್ಯಕ್ಷರಾದ ಎಂ. ಸಾದಿಕ್ ಅಲಿ ರವರು ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷ ಹಾಗೂ ಅವರ ಪತ್ನಿಗೆ ವೇದಿಕೆ ಪರವಾಗಿ ಸನಮಾನಿಸಿದರು ಹಾಗೂ ಅವರ ಮಗಳು ಸಮಿಯಾ ಮೆಹರಿನ್ ರವರು ನೀಟ್ ಪರೀಕ್ಷೆಯಲ್ಲಿ ಅಗ್ರ ಗಣನೀಯ ಸಾದನೆ ಮಾಡಿ ಎಂಬಿಬಿಎಸ್ ವ್ಯಾಸಂಗಕ್ಕೆ ಆಯ್ಕೆಯಾಗಿರುದಕ್ಕೆ ಅವರಿಗೆ ಪ್ರತಿಬಾ ಪುರಸ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಹರೀಶ್ ಹೆಚ್.ಎಸ್, ಎನ್.ಎಂ.ದೊಡ್ಡಮನಿ, ಪಕಿರಪ್ಪ ಗೊಟೂರು, ಶಿವಕುಮಾರ್ ಹಿರೇಮಠ, ಶ್ರೀನಿವಾಸ ಚಿತ್ರಗಾರ, ಗವಿಸಿದ್ದಪ್ಪ ಬಾರಕೇರ, ಜಗದೇಶ, ಮಹ್ಮದ್ ಖಲೀಲ್, ಯೂಸುಫ ಖಾನ್, ಮಹೆಬೂಬು ಖಾನ್ ಸೇರಿದಂತೆ ಹುಜೂರ್ ಅಹ್ಮದ್ ನಾಯಕ್ರವರ ಕುಟುಂಬದವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಮಂಜುನಾಥ ಚಿತ್ರಗಾರ ನಿರೂಪಿಸಿದರೆ, ವೈ.ಬಿ.ಜೂಡಿ ವಂದಿಸಿದರು.