ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ವಿಜಯಲಕ್ಷ್ಮಿಗೆ ಅಧಿಕೃತ ಆಹ್ವಾನ
ಶಿಗ್ಗಾವಿ 20 : ತಾಲೂಕಿನಲ್ಲಿ ಫೆಬ್ರುವರಿ 8 ರಂದು ನಡೆಯುವ 5 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಸರ್ವಾನುಮತದಿಂದ ಆಯ್ಕೆಯಾದ ಗೌರವ್ಹಾನಿತ ಡಾ. ವಿಜಯಲಕ್ಷ್ಮಿ ಪುಟ್ಟಿ (ತಿರ್ಲಾಪುರ) ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಶಿಗ್ಗಾವಿ ವತಿಯಿಂದ ಅಧಿಕೃತವಾಗಿ ಆಹ್ವಾನ ನೀಡಲಾಯಿತು. ಈ ಸಂದರ್ಭದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ನಾಗಪ್ಪ ಬೆಂತೂರ, ಕನ್ನಡ ಸಾಹಿತ್ಯ ಪರಿಷತ್ತ ಕಾರ್ಯದರ್ಶಿ ರಮೇಶ ಹರಿಜನ, ಶಹರ ಹೋಬಳಿ ಅಧ್ಯಕ್ಷೆ ಲಲಿತಾ ಹಿರೇಮಠ, ಐ.ಎಲ್.ಬೋಸ್ಲೆ, ಸಂತೋಷ ಪಾಟೀಲ, ಡಾ.ಸಿ.ಡಿ.ಯತ್ನಳ್ಳಿ, ಎಂ.ಬಿ.ಹಳೇಮನಿ, ಅಶೋಕ ಕಾಳೆ, ಪ್ರೋ ಶಶಿಕಾಂತ ರಾಠೋಡ, ಶಂಕರ ಬಡಿಗೇರ, ಸಂಜನಾ ರಾಯ್ಕರ, ಕಲ್ಪನಾ ಚವ್ಹಾಣ, ಸುವರ್ಣ ಬಸವರಾಜ, ಶಂಭು ಕೇರಿ, ಶಶಾಂಕ ಕೌಜಲಗಿ, ಲಕ್ಮೀ ಕೇರಿ, ಸೇರಿದಂತೆ ಕನ್ನಡ ಪರ ಸಂಗಟನೆಗಳ ಸದಸ್ಯರು, ಸಾಹಿತಿಗಳು, ಸಮಾಜಸೇವಕರು ಉಪಸ್ಥಿತರಿದ್ದರು.