ಪೇವರಬ್ಲಾಕ ಅಳವಡಿಕೆಗೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಭೂಮಿಪೂಜೆ
President Yallana Gowda Patil performs the ground breaking ceremony for the installation of paver b
ಮಹಾಲಿಂಗಪುರ 07: ಸರ್ಕಾರದ ವಿವಿಧ ಯೋಜನೆಗಳಿಂದ ಬಂದ ರಸ್ತೆ ಕಾಮಗಾರಿಗಳು ಗುಣಮಟ್ಟದ್ದಾಗಿರಲಿ ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನಿಮ್ಮ ಕಾಮಗಾರಿ ಪೂರ್ತಿ ಮುಗಿಸಬೇಕು ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು.
ವಾರ್ಡ ನಂ 18ರ ಡಾ. ಬೀಳಗಿಯವರ ಮನೆ ಹತ್ತಿರ ಸನ್ 2022-23 ನೇ ಸಾಲೀನ ಹಣಕಾಸು ಆಯೋಗದ ಸಾಮಾನ್ಯ ಮೂಲ ಉಳಿಕೆ ಪ್ಯಾಕೇಜ ನಂ -10 ಯೋಜನೆಯಲ್ಲಿ ಅಂದಾಜು 3 ಲಕ್ಷ 89 ಸಾವೀರ ರೂಗಳ ವೆಚ್ಚದಲ್ಲಿ ನೂತನವಾಗಿ ಪ್ರಾರಂಭಗೊಳ್ಳುತ್ತಿರುವ ಇಂಟರಲಾಕ ಪೇವರಬ್ಲಾಕ ಅಳವಡಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಸರ್ಕಾರದ ಹಣ ವೆರ್ಥವಾಗದ ಹಾಗೆ ಸರಿಯಾದ ರೀತಿಯಲ್ಲಿ ಕಾಮಗಾರಿಗಳು ನಡೆಯಬೇಕು, ಮತ್ತು ಗುತ್ತಿಗೆದಾರರು ಸಹ ಕಾಮಗಾರಿಗಳ ಗುಣಮಟ್ಟ ಹೆಚ್ಚಿಸಿ ಸಾರ್ವಜನಿಕರಿಗೆ ತಿರುಗಾಡಲು ಯಾವುದೇ ತೊಂದರೆಯಾಗದಂತೆ ಪೇವರಬ್ಲಾಕ ಅಳವಡಿಸಬೇಕು, ಅದೇ ರೀತಿ ಸಾರ್ವಜನಿಕರು ಸಹ ಸರ್ಕಾರದ ಹಣ ಪೊಲಾಗದಂತೆ ಅವುಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಸರ್ಕಾರದ ವಿವಿಧ ಯೋಜನೆಗಳಿಗೆ ಸಫಲವಾಗಲು ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಶೇಖರ ಅಂಗಡಿ,ಮುಸ್ತಾಕ ಚಿಕ್ಕೋಡಿ, ಅಬ್ದುಲ ಬಾಗವಾನ, ವಿಜುಗೌಡ ಪಾಟೀಲ,ಸುನೀಲಗೌಡ ಪಾಟೀಲ, ರಾಮಣ್ಣ ಹಟ್ಟಿ, ಅರ್ಜುನ ಮೋಪಗಾರ, ಬಸವರಾಜ ಕುರಿ, ಡಾ. ಬೀಳಗಿ, ಮಹಾಂತೇಶ ದಡೂತಿ, ಗುತ್ತಿಗೆದಾರ ಪ್ರಶಾಂತ ಮುಖ್ಯನ್ನವರ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 