ಲೋಕದರ್ಶನ ವರದಿ
ಮಹಾಲಿಂಗಪುರ 18:ಸ್ಥಳೀಯ ಪಿಕೆಪಿಎಸ್ನ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶುಕ್ರವಾರ ಅವಿರೋಧ ಆಯ್ಕೆ ಮಾಡಲಾಯಿತು. ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಸದಸ್ಯರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಬಸನಗೌಡ ಪಾಟೀಲ ನೇತೃತ್ವದಲ್ಲಿ ನೂತನ ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಗಿತ್ತು. ಆ.18ರಂದು ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಬಸನಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಸಾಂಯವ್ವ ಸಂಶಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅವರೋಧವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಹಾಗೂ ಸದಸ್ಯರಾದ ಈರಪ್ಪ ಚಂದ್ರನಾಯ್ಕ ದಿನ್ನಿಮನಿ, ಬಸವರಾಜ ಮಹಾಲಿಂಗಪ್ಪ ಪಾಟೀಲ, ಭಿಮಪ್ಪ ಚನ್ನಪ್ಪ ಉಳ್ಳಾಗಡ್ಡಿ, ಮಲ್ಲಿಕಾಜರ್ುನ ಮಹಾಲಿಂಗಪ್ಪ ಕುಳ್ಳೊಳ್ಳಿ, ವಿಷ್ಣುಗೌಡ ವಿಠ್ಠಲ ಪಾಟೀಲ, ಅಲ್ಲಪ್ಪ ಸಿದ್ದಪ್ಪ ಪೂಜಾರಿ, ಬಸವರಾಜ ಮಲ್ಲಪ್ಪ ಅರಳಿಕಟ್ಟಿ, ಶಿವಲಿಂಗಪ್ಪ ಪರಸಪ್ಪ ಘಂಟಿ, ಹಣಮಂತ ಸಿದ್ದಪ್ಪ ಬುರುಡ, ಶೈಲಾ ಚನ್ನಪ್ಪ ಪವಾರ, ಸಾಂಯವ್ವ ಮಾರುತಿ ಸಂಶಿ, ಸಂಗಪ್ಪ ಗಿರಿಮಲ್ಲಪ್ಪ ಡೋಣಿ ಅವರನ್ನು ಸನ್ಮಾನಿಸಲಾಯಿತು.
ಹಿರಿಯರಾದ ಎಂ.ಐ.ಕೋಳಿಗುಡ್ಡ, ಅಶೋಕಗೌಡ ಪಾಟೀಲ, ಮಹಾಲಿಂಗಪ್ಪ ಕುಳ್ಳೊಳ್ಳಿ, ಜಿ.ಎಸ್.ಗೊಂಬಿ, ಮುಖ್ಯ ಕಾರ್ಯ ನಿವರ್ಾಹಕ ಈರಣ್ಣ ಬೆಟಗೇರಿ ಹಾಗೂ ರಿಟನರ್ಿಂಗ್ ಅಧಿಕಾರಿ ಮಹೇಶ ಕುರಂದವಾಡ ಇದ್ದರು.