ಉಪವಾಸ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅಧ್ಯಕ್ಷ ಕಟ್ಟಿ ಮನವಿ

President Katti appeals to participate in the hunger strike in large numbers

ಉಪವಾಸ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅಧ್ಯಕ್ಷ ಕಟ್ಟಿ ಮನವಿ

ತಾಳಿಕೋಟಿ, 04: ಅನುದಾನಿತ ನೌಕರರಿಗೆ ನಿವೃತ್ತಿ ನಂತರ ಸರ್ಕಾರಿ ನೌಕರರಿಗೆ ಇರುವಂತಹ ಪಿಂಚಣಿ ಸೌಲಭ್ಯವನ್ನು ನೀಡುವಂತೆ ಒತ್ತಾಯಿಸಿ ಈ ಮಾಸದ 7 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ ನಲ್ಲಿ ನಡೆಯಲಿರುವ ಉಪವಾಸ  ಸತ್ಯಾಗ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಾಲೂಕ ಪಿಂಚಣಿ ವಂಚಿತ ನೌಕರರ ಅಧ್ಯಕ್ಷ ಅಶೋಕ ಕಟ್ಟಿ ಮನವಿ ಮಾಡಿದ್ದಾರೆ.  

     ಪತ್ರಿಕಾ ಹೇಳಿಕೆ ನೀಡಿರುವ ಅವರು ಸಂದ್ಯಾಕಾಲದ ಅಂಚಿನಲ್ಲಿ ಇರುವಂತಹ ಅನುದಾನಿತ ನೌಕರರಿಗೆ ನಿವೃತ್ತಿನಂತರ ಸರ್ಕಾರಿ ನೌಕರರಿಗೆ ಇರುವಂತಹ ಯಾವುದೇ ಸೌಲಭ್ಯಗಳಿಲ್ಲದೆ ನಿವೃತ್ತಿ ಯ ಕೊನೆಯ ತಿಂಗಳ ಸಂಬಳದನಂತರ ಯಾವುದೇ ಆರ್ಥಿಕ ಲಾಭವಿಲ್ಲದೇ ಬರಿಗೈಯಿಂದ ತೆರಳುವಂತಹ ಶಿಕ್ಷಕ ಜೀವನ ಬೀದಿಗೆ ಬಂದಿರುವಂತಹ ನಿದರ್ಶನಗಳು, ವಯೋಸಹಜ ಕಾಯಿಲೆಗೆ ಆಸ್ಪತ್ರೆಗೆ ಖರ್ಚುಭರಿಸದ ದುಸ್ಥಿತಿಯ ಘಟನೆಗಳನ್ನು ನಿತ್ಯವು ಮಾದ್ಯಮಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಬಿತ್ತರಗೊಂಡಿದ್ದರು ಮೌನ ಪ್ರಸ್ತುತ ಸರ್ಕಾರವು ತಾವು ಚುನಾವಣಾ ಪ್ರಾಣಾಳಿಕೆಯಲ್ಲಿ 6ನೇ ಮಹತ್ತರ ಘೋಷಣೆ ಮಾಡಿ ಹಳೆ ನಿಶ್ಚಿತ ಪಿಂಚಣಿಯನ್ನು ಜಾರಿಗೆವ ತರುತ್ತಿರಿ ಎಂದು ಅಶ್ವಾಸನೆ ನೀಡಿದ್ದ ಮಾನ್ಯ ಮುಖ್ಯ ಮಂತ್ರಿಗಳುನಮ್ಮ ಅನುದಾನಿತ ಶಾಲೆಗಳ ನೌಕರರಿಗೆ ನಾವು ನೇಮಕಾತಿ ಹೊಂದಿದ ದಿನಾಂಕದಿಂದ ನಿಶ್ಚಿತ ಹಳೆಯ ಪಿಂಚಣಿ ಜಾರಿಗೆ ಮಾಡಿದರೆ ಸಾಕು ನಾವು ಹಿಂದಿನ ಯಾವುದೇ ಹಿಂಬಾಕಿ ಕೇಳುವುದಿಲ್ಲ ಎಂದು ಎಲ್ಲ ನೌಕರರು ಈ ಮೂಲಕ ತಮ್ಮಲ್ಲಿ ಪ್ರಮಾಣಿಕರಿಸುತ್ತೇವೆ.  

    ಈ ಉದ್ದೇಶಕ್ಕಾಗಿಯೇ ದಿನಾಂಕ 7-2-2025 ರಂದು ಬೆಂಗಳೂರಿನ ಪ್ರಿಡಂ ಪಾರ್ಕನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರದ ಗಮನ ಸೆಳೆದು ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಅನುದಾನಿತ ಶಿಕ್ಷಕರು ಸತ್ಯಾಗ್ರಹದಲ್ಲಿ ಬಾಗವಹಿಸಬೇಕೆಂದು ತಾಳಿಕೋಟಿ ತಾಲೂಕಿನ ಪಿಂಚಣಿ ವಂಚಿತ ನೌಕರರ ಅಧ್ಯಕ್ಷ ಅಶೋಕ ಕಟ್ಟಿ ಮನವಿ ಮಾಡಿಕೊಂಡಿದ್ದಾರೆ.