ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ

ಲೋಕದರ್ಶನ ವರದಿ

ಹುಕ್ಕೇರಿ 20:  ಇಂದು ನಡೆದ ಚುನಾವಣೆಯಲ್ಲಿ ಅದ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ಪಾಟೀಲ ಅದ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಮಂಗಲಾ ಹಂದಿಗುಂದ  ಇವರ ಎರಡೆ ನಾಮಪತ್ರಗಳು ಸಲ್ಲಿಕೆಯಾದ್ದರಿಂದ  ಚುನಾವಣೆ ಅಧಿಕಾರಿ ದ್ರಾಕ್ಷಾಯಣಿ ಮೆಳವಂಕಿ ಯವರು ಈ ಇಬ್ಬರ ಹೆಸರುಗಳನ್ನು ಅಂತಿಮಗೊಳಿಸಿ ಅವಿರೊಧ ಆಯ್ಕೆಯನ್ನು ಘೋಷಿಸಿದರು. 

ನೂತನವಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ ಪಾಟೀಲ ಹುಕ್ಕೇರಿ ನಗರದ ಹಿರಿಯರು, ಬ್ಯಾಂಕಿನ ಸದಸ್ಯರ ಮತ್ತು ಆಡಳಿತ ಮಂಡಳಿಯವರ ಸಹಕಾರದಿಂದ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡು ಬ್ಯಾಂಕಿನ ಶ್ರಯೋಭಿವೃದ್ದಿ  ಹಾಗೂ ಸದಸ್ಯರ ಆಥರ್ಿಕ ಸಮಸ್ಯೆಗಳಿಗೆ ಸ್ಪಂದಿಸಿ ನೂತನ ಶಾಖೆಗಳನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುವದು ಎಂದರು.

ಉಪಾದ್ಯಕ್ಷೆ ಮಂಗಲಾ ಹಂದಿಗುಂದ ಮಾತನಾಡಿ ಮುಂಬರುವ ದಿನಗಳಲ್ಲಿ ಸದಸ್ಯರ ಮಾರ್ಗದರ್ಶನ ಪಡೆದು  ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸಲಾಗುವದು ಎಂದರು. ಬ್ಯಾಂಕಿನ ಸದಸ್ಯರಾದ ಗುರುರಾಜ ಕುಲಕಣರ್ಿ, ವಿಜಯ ರವದಿ ಮಾತನಾಡಿ ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ ಹೇಚ್ಚಿನ ಶಾಖೆಗಳನ್ನು ತೆರೆದು ಗ್ರಾಹಕರಿಗೆ ಸೇವೆ ನೀಡಬೇಕು ಎಂದು ಸಲಹೆ ನೀಡಿದರು. 

ನಂತರ ನಗರದ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು, ನಾಗರಿಕರು, ಬ್ಯಾಂಕಿನ ಸದಸ್ಯರು ,ಹಿತೈಷಿಗಳು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭಾಶಯ ಕೋರಿದರು. 

ಈ ಸಂದರ್ಭದಲ್ಲಿ ಪಟ್ಟಣದ ಹಿರಿಯರಾದ ಬಾಬು ಗಂಧ, ಕೃಷ್ಣಾ ದೇಸಾಯಿ, ಬಾಹುಬಲಿ ಸೊಲ್ಲಾಪುರೆ, ರೋಹಿತ ಚೌಗಲಾ, ರಾಜು ಮುನ್ನೋಳಿ, ಸಂಜು ಅಡಿಕೆ, ಸಂಜಿವ ನಾಯಿಕ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.