ಕಲಾಧರೆ ಪ್ರಶಸ್ತಿ ಪ್ರದಾನ
ಧಾರವಾಡ 20: ಡಾ. ಶ್ರೀಧರ ಹೊಸಮನಿ ಅಂತರರಾಷ್ಟ್ರೀಯ ಯೋಗ ಪಟು, ಇವರು ಥೈಲ್ಯಾಂಡ್ ದೇಶದ ಪಟ್ಟಾಯದಲ್ಲಿ ನಡೆದ 6 ನೇ ವರ್ಷದ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ದ್ವೀತಿಯ ಸ್ಥಾನ ಪಡೆದು ಧಾರವಾಡ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ ಅಂಗವಾಗಿ ಇವರಿಗೆ ಕಸ್ತೂರಿ ಫೌಂಡೇಶನ್ ಧಾರವಾಡ ಇವರ ವತಿಯಿಂದ ದಿ. 18ರಂದು ನಡೆದ ಕಲಾಧರೆ ಉತ್ಸವ -2025 ರ ಅಂಗವಾಗಿ ಕಲಾಧರೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.