ಲೋಕದರ್ಶನ ವರದಿ
ಕೊಪ್ಪಳ 25: ಪ್ರತಿವರ್ಷದಂತೆ ಈ ವರ್ಷವೂ ಸಹ ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆವತಿಯಿಂದ 13ನೇ ಬಾರಿಗೆ ಸಂಭ್ರಮದ ಕೊಪ್ಪಳ ಜಿಲ್ಲಾ ಉತ್ಸವದ ಆಚರಣೆಗೆ ಸಿದ್ಧತೆ ಕೈಗೊಂಡಿದ್ದು ಬರುವ ಆಗಷ್ಟ 24 ರಿಂದ 28ರ ವರೆಗೆ ಸಂಭ್ರಮದಿಂದ ಜಿಲ್ಲಾ ಉತ್ಸವ ಆಚರಣೆಗೆ ನಿಧರ್ಾರ ಕೈಗೊಳ್ಳಲಾಯಿತು.
ಮಂಗಳವಾರ ಸಂಜೆ ವೇದಿಕೆಯ ಕಚೇರಿಯ ಸಭಾಂಗಣದಲ್ಲಿ ವೇದಿಕೆಯ ಅಧ್ಯಕ್ಷ ಮಹೇಶಬಾಬು ಸುವರ್ೆರವರ ಅಧ್ಯಕ್ಷತೆಯಲ್ಲಿ ಜರುಗಿದ ಪದಾಧಿಕಾರಿಗಳ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಸುದಿರ್ಘವಾಗಿ ಚಚರ್ಿಸಿ ನಿರ್ಣಯ ಕೈಗೊಳ್ಳಲಾಯಿತು. ಆಗಷ್ಟ 24 ರಂದು ಜಿಲ್ಲಾ ಉತ್ಸವರ ಉದ್ಘಾಟನೆ ಹಾಗೂ 25 ರಿಂದ 28ರ ವವರೆಗೆ ವಿವಿಧ ಸಮ್ಮೇಳನ, ವಿಚಾರಗೋಷ್ಠಿ, ಸಂವಾದ, ಕವಿಗೋಷ್ಠಿ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ವೇದಿಕೆಯ ಅಧ್ಯಕ್ಷ ಮಹೇಶಬಾಬು ಸುವರ್ೆ ವಿವರಿಸಿದರು.
ಸಭೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ, ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ್, ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ, ಹಿರಿಯ ಪತ್ರಕರ್ತ ಎಂ.ಸಾದಿಕ ಅಲಿ, ವೈ.ಬಿ.ಜೂಡಿ, ಶಿವಕುಮಾರ್ ಹಿರೇಮಠ, ಬದರಿ ಪುರೋಹಿತ್, ಉಮೇಶ ಪೂಜಾರ್, ಮಹೇಬೂಬ್ ಖಾನ್, ಖಲಿಲ್ ಉಡೇವು ಸೇರಿದಂತೆ ಅನೇಕರು ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡಿ ಜಿಲ್ಲಾ ಉತ್ಸವ ಯಶಸ್ವಿಗೊಳಿಸಲು ಜಿಲ್ಲೆಯ ವಿವಿಧ ಸಂಘಟನೆಗಳಿಗೆ ಮನವಿ ಮಾಡಿಕೊಂಡರು.