ಸ್ಮರಣೀಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಆರಂಭ: ಚೋಳನ್

ಾರವಾಡ: ಧಾರವಾಡದಲ್ಲಿ ನಡೆಯುತ್ತಿರುವ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನವು ನಿಗದಿಗಿಂತ ಪೂರ್ವ ಅಂದರೆ ಬರುವ ಜನೇವರಿ 4, 5 ಮತ್ತು 6 ರಂದು ನಡೆಯಲಿದೆ. ಸಾಹಿತ್ಯ, ಸಂಸ್ಕೃತಿಗಳ ತವರೂರು ಧಾರವಾಡದಲ್ಲಿ ಅನೇಕ ವರ್ಷಗಳ ನಂತರ ಈ ಸಮ್ಮೇಳನ ನಡೆಯುತ್ತಿದ್ದು, ಇದನ್ನು ಸ್ಮರಣೀಯಗೊಳಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಆರಂಭಿಸಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಅವರು ಇಂದು ಕನರ್ಾಟಕ ಕಾಲೇಜು ಮೈದಾನದಲ್ಲಿ ಸಾಹಿತ್ಯ ಸಮ್ಮೇಳನದ ಸ್ಥಳ ಪರಿಶೀಲನೆ ನಂತರ ಸುದ್ಧಿಗಾರರನ್ನು ಉದ್ದೇಶಿಸಿ ಮಾತನಾಡಿದರು.

ಸಮ್ಮೇಳನವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸಲು ಜಿಲ್ಲಾಡಳಿತದಿಂದ ಎಲ್ಲ ಅಗತ್ಯ ಸಿದ್ಧತೆ   ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ 14 ಕಕ್ಕೂ ಹೆಚ್ಚು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಜನಪ್ರತಿನಿಧಿಗಳು, ಕನ್ನಡ ಸಾಹಿತ್ಯ ಪರಿಷತ್ ಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಸಮಿತಿ ಸದಸ್ಯರಾಗಿದ್ದು, ಇನ್ನೆರಡು ದಿನಗಳಲ್ಲಿ ಸಮಿತಿಗಳನ್ನು ಅಂತಿಮಗೊಳಿಸಿ, ಬರುವ ಸೋಮವಾರದಿಂದ ಸಮಿತಿಗಳ ಸಭೆ ಜರುಗಿಸಲಾಗುವುದು ಎಂದು ಹೇಳಿದರು.

ಸಮ್ಮೇಳನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 2 ಲಕ್ಷ ಜನ ಬರುವ ನಿರೀಕ್ಷೆಯಿದೆ. ಬರುವ ಅತಿಥಿಗಳಿಗೆ ಸಾರ್ವಜನಿಕರಿಗೆ ಊಟ, ವಸತಿ, ಸಾರಿಗೆ ಸೇರಿದಂತೆ ಅಗತ್ಯ ಸೇವೆಗಳನ್ನು ಯಾವುದೇ ಲೋಪವಾಗದಂತೆ ಪೂರೈಸಲು ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದರು.

ಸಮ್ಮೇಳನ ವ್ಯವಸ್ಥಿತವಾಗಿ ಸಂಘಟಿಸಲು ಆಥರ್ಿಕ ನೆರವು ಅಗತ್ಯವಿದ್ದು, ಅಂದಾಜು ಸುಮಾರು 12 ರಿಂದ 13 ಕೋಟಿ ಹಣ ಬೇಕಾಗುತ್ತದೆ. ಈ ಕುರಿತು ಪ್ರಸ್ತಾವನೆ ಸಿದ್ಧಗೊಳಿಸಲಾಗಿದ್ದು, ಶೀಘ್ರದಲ್ಲಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದಶರ್ಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನಂತರ ಅವರು ವಾಹನ ಪಾಕರ್ಿಂಗ್, ಪುಸ್ತಕ ಪ್ರದರ್ಶನ ಮಳಿಗೆ, ಪುಸ್ತಕ ಮಾರಾಟ ಮಳಿಗೆ, ಊಟದ ವ್ಯವಸ್ಥೆ ಮಾಡಲು ಉದ್ದೇಶಿಸಿರುವ ಕೆಸಿಡಿ ಪಿಜಿಕ್ಸ್ ಗ್ರೌಂಡ್, ಯುನಿರ್ವಸಿಟಿ, ಪಬ್ಲಿಕ್ ಸ್ಕೂಲ್, ಡಯಟ್ ಆವರಣ ಮತ್ತು ಕೃಷಿವಿಶ್ವವಿದ್ಯಾಲಯದ ಸಭಾಭವನ ವಿವಿಧ ಕಟ್ಟಡ, ಸ್ಥಳಗಳ ಪರಿಶೀಲನೆ ಮಾಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ. ಬಿ.ಸಿ. ಸತೀಶ್, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ನಗರ ಉಪಪೊಲೀಸ್ ಆಯುಕ್ತರಾದ ಬಿ.ಎಸ್. ನೇಮಗೌಡ, ರವೀಂದ್ರ ಗಡಾದ, ಜಿಲ್ಲಾ ಉಪಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ವಿ.ಬಿ. ಯಮಕನಮರಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿದರ್ೆಶಕ ಕೆ.ಎಚ್. ಚನ್ನೂರ, ಸಹಾಯಕ ನಿದರ್ೆಶಕ ಎಸ್.ಕೆ. ರಂಗಣ್ಣವರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮಹಾನಗರ ಪಾಲಿಕೆ ಸಹಾಯಕ ಆಯುಕ್ತರು ಉಪಸ್ಥಿತರಿದ್ದರು.

ಸಭೆ : ಜಿಲ್ಲಾಧಿಕಾರಿಗಳ ಸ್ಥಳ ಭೇಟಿ ಪೂರ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಜರುಗಿಸಿ ಸ್ಥಳಗಳ ಆಯ್ಕೆ, ಅಲ್ಲಿ ಬೇಕಿರುವ ಸೌಲಭ್ಯಗಳು, ಅಗತ್ಯವಿರುವ ಅಂದಾಜು ಮೊತ್ತ ಸೇರಿದಂತೆ ಅಗತ್ಯ ಮಾಹಿತಿ ಪಡೆದರು.