13ನೇ ಕನ್ನಡ ಸಾಹಿತ್ಯ ಸಮ್ಮೇಳನ ಕ್ಕೆ ಪೂರ್ವ ಸಿದ್ಧತೆ
ಹನುಮಸಾಗರ 13: ಸಮೀಪದ ಹೂಲಗೇರಿ ಗ್ರಾಮದ ಎಂ. ಆರ್. ಪಾಟೀಲ್ ಅವರ ಜಾಗೆಯಲ್ಲಿ ದಿ. 15, ಶನಿವಾರದಂದು ನಡೆಯಲಿರುವ ಕುಷ್ಟಗಿ ತಾಲ್ಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಕ್ಕೆ ಪೂರ್ವ ಸಿದ್ಧತೆ ನಡೆದಿದ್ದು, ಸಮ್ಮೇಳನಾಧ್ಯಕ್ಷರ ಹಾಗೂ ಭುವನೇಶ್ವರಿ ದೇವಿ ಮೆರವಣಿಗೆ ಸಂಬಂಧಿಸಿದಂತೆ 13ನೇ ಸಮ್ಮೇಳನ ದಲ್ಲಿ ವಿಶಿಷ್ಟವಾಗಿ 13 ಅಲಂಕೃತ ಎತ್ತಿನ ಬಂಡಿಗಳನ್ನು ಶರಣಪ್ಪ ಹೊರಪೇಟೆ ನೇತೃತ್ವ ದಲ್ಲಿ ಗ್ರಾಮೀಣ ಸೊಗಡಿ ನಂತೆ ಶೃಂಗಾರ ಮಾಡಿದ್ದು, ಬಂಡಿಗಳಿಗೆ, ಎತ್ತುಗಳ ಕೊಂಬುಗಳಿಗೆ ಹಳದಿ ಮತ್ತು ಕೆಂಪು ಬಣ್ಣಗಳನ್ನು ಬಳಿಯಲಾಗಿದೆ.
ಬಂಡಿಗಳಿಗೆ ಕನ್ನಡ ಬಾವುಟ ಸೇರಿದಂತೆ ವಿವಿಧ ಪರಿಕರಗಳಿಂದ ಅಲಂಕಾರ ಮಾಡ ಲಾಗುತ್ತದೆ. ಇದು ಅಭೂತಪೂರ್ವ ಮೆರವಣಿಗೆಗೆ ಸಾಕ್ಷಿಯಾಗಲಿದೆ. ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಸಮವಸ್ತ್ರದಲ್ಲಿ ಕುಂಭಗಳನ್ನು ಹೊತ್ತು ಸಾಗುವರಲ್ಲದೇ, ವಿವಿಧ ಕಲಾ ತಂಡಗಳು, ವಾದ್ಯ ವೈಭವಗಳು ಮೆರುಗು ನೀಡಲಿವೆ. ಮೆರವಣಿಗೆ ಗುಂಡಮಲ್ಲೇಶ್ವರ ದೇವಸ್ಥಾನ ದಿಂದ ಹೊರಟು ಪ್ರಮುಖ ಬೀದಿಗಳ ಮೂಲಕ ವೇದಿಕೆಗೆ ಆಗಮಿಸಲಿದೆ. ವೇದಿಕೆಯ ನಿರ್ಮಾಣ ಸಿದ್ಧತೆ ಭರದಿಂದ ಸಾಗಿದ್ದು ವೇದಿಕೆಯ ಸ್ಥಳವನ್ನು ಪಿ ಎಸ್ ಐ ಧನಂಜಯ ಹಿರೇಮಠ ಪರೀಶೀಲನೆ ಮಾಡಿ ಅಗತ್ಯ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಎಂ. ಆರ್. ಪಾಟೀಲ್, ಶಶಿಕಾಂತ್ ಗೌಡ ಪಾಟೀಲ್,ಪ್ರಕಾಶ್ ರಾಠೋಡ್, ಸುರೇಶ ಕುಂಟನಗೌಡರ್, ಮುತ್ತಣ್ಣ ಕರಡಿ, ಶೇಖರ್ ಹೊರಪೇಟೆ, ಚನ್ನಪ್ಪ ಕುಂಟನಗೌಡರ್, ಕಸಾಪ ಸಂಘ ಸಂಸ್ಥೆ ಪ್ರತಿನಿಧಿ ನಬಿಸಾಬ್ ಕುಷ್ಟಗಿ, ತಾಲ್ಲೂಕು ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ, ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಜಹಗೀರದಾರ, ರವೀಂದ್ರ ಬಾಕಳೆ, ಅಬ್ದುಲ್ ಕರೀಮ್ ವಂಟೆಳಿ, ಅಬ್ದುಲ್ ರಜಾಕ್ ಟೇಲರ್, ಹೋಬಳಿ ಅಧ್ಯಕ್ಷ ಮಂಜುನಾಥ್ ಗುಳೇದಗುಡ್ಡ, ಚಂದಪ್ಪ ಗುಡಿಮನಿ, ವೀರೇಶ್ ಜಾಲಾಪುರ್, ಎಂ. ಡಿ. ನಂದವಾಡಗಿ, ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು.ಗ್ರಾಮದಲ್ಲಿ ಕನ್ನಡದ ಬಾವುಟ, ಬಂಟಿಂಗ್ಸ್, ಬ್ಯಾನರ್ಸ್ ಗಳನ್ನು ಅಳವಡಿಸುವ ಕಾರ್ಯವನ್ನು ಪಿ ಡಿ ಓ ಆನಂದ್ ಯಲಿಗಾರ್ ನೇತೃತ್ವದಲ್ಲಿ ಸಿಬ್ಬಂದಿಗಳಿಂದ ಭರದ ಸಿದ್ದತೆ ಮಾಡುತ್ತಿದ್ದಾರೆ. ಗ್ರಾಮದ ಪ್ರಮುಖರು, ಗ್ರಾ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಸಂಘ ಸಂಸ್ಥೆಯವರು, ಯುವಕರು, ಗ್ರಾಮದ ಸಮಸ್ತ ಜನರು ಸಮ್ಮೇಳನದಲ್ಲಿ ಯಶಸ್ಸಿಗೆ ಕಂಕಣ ಬದ್ಧರಾಗಿ ನಿಂತಿದ್ದಾರೆ.