ಕಡಬಿ 05: ಸಾಹಿತಿ ಹಿರಿಯ ಕವಿ ಡಾ. ವಾಯ್.ಎಂ.ಯಾಕೋಳ್ಳಿ ರಾಜ್ಯ ಸಮ್ಮಿಳನಕ್ಕೆ ಅಧ್ಯಕ್ಷರಾಗುವಂತಹ ಹೆಮ್ಮೇಯ ಕನರ್ಾಟಕ ರಾಜ್ಯದಲ್ಲಯೇ ಕುರುಬರ, ಹಾಗೂ ಕುಂಬಾರರ ಬಾಷೆಗಳ ವಿಮರ್ಷಕರು 25 ವರ್ಷಗಳಿಂದ ಹಂಪಿ ವಿಶ್ವ ವಿದ್ಯಾನಿಲಯದಲ್ಲಿ ಹಸ್ತಕೃತಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಯರಝವರ್ಿ ಗ್ರಾಮದ ಡಾ.ಎಸ್.ಎಸ್.ಅಂಗಡಿಯವರನ್ನು ಸವದತ್ತಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೀಳನದ ಅಧ್ಯಕ್ಷರನ್ನಾಗಿ ಸಾವರ್ಾಂಗಿಣ ಆಯ್ಕೆ ಮಾಡಿರುವುದು ಸಂತಸಕರ ವಿಷಯವಾಗಿದೆ ಎಂದರು.
ಅವರು ಸವದತ್ತಿ ತಾಲೂಕಿನ ಯರಝವರ್ಿ ಗ್ರಾಮದಲ್ಲಿ 6ನೇ ಕನ್ನಡ ಸಾಹಿತ್ಯ ಸಮ್ಮೀಳನ ಪೂರ್ವಭಾವಿ ಸಭೆಯು ರವಿವಾರ ದಿ.3 ರಂದು ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಭೆ ಉದ್ದೆಶಿಸಿ ಮಾತನಾಡಿದರು.
ಡಾ.ಎ.ಎಂ.ಶಂಕರಲಿಂಗಪ್ಪ ಮಾತನಾಡಿ, ಎಲ್ಲಾ ಸಾಹಿತ್ಯ ಸಮ್ಮಿಳನಗಳು ತಾಲೂಕು ಮಟ್ಟದಲ್ಲಿ ಜರುಗಿದ್ದು. ಈ ಭಾರಿ ಹಳ್ಳಿ ಮಟ್ಟದಲ್ಲಿ ಜರುಗುವುದು ನಮಗೆಲ್ಲ ಹೆಮ್ಮೆ ವಿಷಯವಾಗಿದೆ ಎಂದರು. ಸವದತ್ತಿಯ ಸಾಹಿತಿ ಬಿ.ಆಯ್.ಚಿನಗುಡಿ ಮತನಾಡಿ, ಸಾಹಿತ್ಯ ಸಮ್ಮಿಳನದಲ್ಲಿ ಮಕ್ಕಳ ಚುಟುಕು ಸಾಹಿತ್ಯ, ಹಳ್ಳಿಯ ಸೊಗಡು ಮಕ್ಕಳಲ್ಲಿ ಬೆಳಿಸಬೆಕೆಂದರು.
ಈ ಸಂದರ್ಭದಲ್ಲಿ ಎನ್.ಎಸ್.ಇಂಚಲ ಪ್ರಾಸ್ಥಾವಿಕವಾಗಿ ಮಾತನಾಡಿದರು. ಹಿರಿಯರಾದ ಈರಣ್ಣ ಚಳಕೋಪ್ಪ. ತಾಪಂ ಸದಸ್ಯ ಬಸವರಾಜ ಮುತ್ತೇನ್ನವರ. ಸಿದ್ದಪ್ಪ ಮಾಳಗಿ. ದುಂಡಪ್ಪ ಕೋಡಳ್ಳಿ. ಚಂದ್ರಕಾಂತ ತುಪ್ಪದ. ಸಿ.ಬಿ.ದೋಡಗೌಡರ. ಬಿ.ವಿ.ನರಗುಂದ. ಎಸ್.ಎಸ್.ಗುಡಗುಂಟಿ. ಜಿ.ಎಸ್.ಪೂಜೇರ. ಮಲ್ಲಿಕಾಜರ್ುನ ಕುರಿ. ಎಂ.ಬಿ.ಪೂಜೇರ. ಎಸ್.ಬಿ.ಬೆಟ್ಟದ. ಉಪಸ್ಥೀತರಿದ್ದರು. ಸುರೇಶ ಕತ್ತಿ ಸ್ವಾಗತಿಸಿ, ಎನ.ಬಿ.ತೋರನಗಟ್ಟಿ ನಿರೂಪಿಸಿ, ವಂದಿಸಿದರು.