ಲೋಕದರ್ಶನ ವರದಿ
ಇಂಡಿ 19:ಪಟ್ಟಣದ ಮಿನಿವಿಧಾನಸೌಧದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ತಹಸಿಲ್ದಾರ ಚಿದಾನಂದ ಗುರುಸ್ವಾಮಿ ಅವರ ಅದ್ಯಕ್ಷೆತೆಯಲ್ಲಿ ಶನಿವಾರದಂದು ತಾಲೂಕಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆ ಜರುಗಿತು.
ಸಭೆಯಲ್ಲಿ ಪ್ರತಿವರ್ಷದಂತೆ ಈ ವರ್ಷವು ಕೂಡಾ ವಿಜಯಪುರ ರಸ್ತೆಯ ತಾಲೂಕಾ ಕ್ರಿಡಾಂಗಣದಲ್ಲಿ ಸಡಗರ ಸಂಬ್ರಮದಿಂದ ಗಣರಾಜ್ಯೋತ್ಸವು ಆಚರಿಸಲು ನಿರ್ಧರಿಸಲಾಯಿತು. 26 ರಂದು ಬೆಳಿಗ್ಗೆ 9:00 ಘಂಟೆಗೆ ಧ್ವಜಾರೋಹಣ ನೇರವೆರಿಸಲಾಗುವುದು. ಸ್ವಾತಂತ್ರ ಹೊರಾಟಗಾರರಿಗೆ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಕ್ರಿಡೆಯಲ್ಲಿ ಸಾಧನೆ ಗೈದ ಕ್ರಿಡಾ ಪಟುಗಳಿಗೆ, ಮಡಿದ ವಿರ ಸೈನಿಕರ ಕುಟುಂಬದ ಸದಸ್ಯರಿಗೆ ಗೌರವ ಸಲ್ಲಿಸುವ ಮೂಲಕ ಸನ್ಮಾನಿಸಿ ಗೌರವಿಸಲು ಸಭೆ ನಿರ್ಣಯಸಲಾಯಿತು. ಆಯಾ ಇಲಾಖೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ 7:30 ಗಂಟೆಯೋಳಗಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಗಣರಾಜ್ಯೋತ್ಸವ ಆಚರಿಸಿ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಶಾಲಾ ಮಕ್ಕಳು ಹಾಜರಿರಬೇಕು ಎಂದು ಹೇಳಿದರು. ಅಲ್ಲದೆ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಪಟ್ಟಣದ ಎಲ್ಲಾ ಶಾಲಾ ಕಾಲೇಜು ವಿದ್ಯಾಥರ್ಿಗಳಿಗೆ ಹೊಗಿ ಬರಲು ಬಸ್ಸಿನ ಸೌಕರ್ಯ ಕಲ್ಪಿಸಲು ಕೆಎಸ್ಅರ್ಟಿಸಿ ಘಟಕ ವ್ಯವಸ್ಥಾಪಕರಿಗೆ ಸೂಚಿಸಿದರು. ಆಯ್ದ ಕೆಲವು ಶಾಲೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಅಯೋಜಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಹಸಿಲ್ದಾರ ಗುರುಸ್ವಾಮಿ ಹೇಳಿದರು.
ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಶಾಸಕ ಯಶವಂತರಾಯಗೌಡ ಪಾಟೀಲ ವಹಿಸಿ ಭಾವಚಿತ್ರಗಳಿಗೆ ಪೂಜೆ ನೇರವೆರಿಸುವರು. ಕಂದಾಯ ಉಪವಿಭಾಗಾಧಿಕಾರಿಗಳಿಂದ ಧ್ವಜಾರೋಹಣ ನೇರವೇರಿಸಲಿದ್ದಾರೆ.
ಈ ಸಭೆಯಲ್ಲಿ ಪುರಸಭೆಯ ಅಧಿಕಾರಿ ಸೋನಾರ, ದೈಹಿಕ ಕ್ಷೇತ್ರ ಶಿಕ್ಷಾಣಾಧಿಕಾರಿ ಬಿ,ಎ.ಕವಲಗಿ, ತಾಪಂ ಇಲಾಖೆ ಅಪ್ಪಾಶಾ ಲಾಳಸೇರಿ, ಶಿಶು ಅಭಿವೃದ್ದಿ ಇಲಾಖೆಯ ಇನಾಮದಾರ, ತೋಟಗಾರಿಕೆ ಇಲಾಖೆಯ ವಿಲಾಸ ರಾಠೋಡ, ಪಶು ಸಂಗಫನಾ ಇಲಾಖೆಯ ಅಧಿಕಾರಿ, ಕ್ರಿಡಾಧಿಕಾರಿ ಆರತಿ ಚವ್ಹಾಣ, ಸಂತೋಷ ಹೊಟಗಾರ, ಕಂದಾಯ ನಿರೀಕ್ಷಕ ಬಿ.ಎ.ರಾವೂರ, ಹೇಸ್ಕಾಂ ಅಧಿಕಾರಿಗಳು, ಗ್ರಾಮಲೇಕ್ಕಾಧಿಕಾರಿ ಪಿ.ಎಲ್.ಹೂಗಾರ ಉಪಸ್ಥಿತರಿದ್ದರು.