ಕಂಪ್ಲಿ09: ತಾಲೂಕಿನ ತಹಶೀಲ್ದಾರ್ ಕಛೇರಿಯಲ್ಲಿ, ಟಿಪ್ಪು ಜಯಂತಿ ಅಂಗವಾಗಿ ತಾಲೂಕು ಆಡಳಿತ ಹಾಗೂ ಮುಸ್ಲಿಂ ಸಮುದಾಯದ ಸಹಯೋಗದಲ್ಲಿ ಪೂರ್ವಭಾವಿ ಸಭೆ ಶುಕ್ರವಾರ ಜರುಗಿತು.
ತಹಶೀಲ್ದಾರ್ ಎಂ.ರೇಣುಕಾ ಮಾತನಾಡಿ, ಸಕರ್ಾರ ಹಾಗೂ ಜಿಲ್ಲಾಡಳಿತ ಆದೇಶದಂತೆ ಕಂಪ್ಲಿ ತಾಲೂಕಿನಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಶಾಂತಿ, ಸಹನೆಯೊಂದಿಗೆ ಟಿಪ್ಪು ಜಯಂತಿ ಆಚರಿಸಬೇಕು. ಟಿಪ್ಪು ಸುಲ್ತಾನ್ ಜಯಂತಿಯನ್ನು ಅತ್ಯಂತ ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಲಾಗುವುದು. ತಾಲೂಕು ಕಛೇರಿ ಆವರಣದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದೆ. ಟಿಪ್ಪು ಜಯಂತಿಗೆ ಎಲ್ಲ ಸಮುದಾಯದವರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಪಿಎಸ್ಐ ಕೆ.ಬಿ.ವಾಸುಕುಮಾರ್ ಮಾತನಾಡಿ, ಸಕರ್ಾರಿ ಆದೇಶ ಅನ್ವಯ ಟಿಪ್ಪು ಜಯಂತಿಯನ್ನು ಕಂಪ್ಲಿಯಲ್ಲಿ ಸರಳವಾಗಿ ಆಚರಿಸಬೇಕು. ಟಿಪ್ಪು ಭಾವಚಿತ್ರ ಮೆರವಣಿಗೆಗೆ ಹಾಗೂ ಬೈಕ್ ರ್ಯಾಲಿಗೆ ಅವಕಾಶ ನೀಡುವುದಿಲ್ಲ. ತಾಲೂಕು ಆಡಳಿತದಿಂದ ಹಮ್ಮಿಕೊಂಡಿರುವ ಟಿಪ್ಪು ಜಯಂತಿಯನ್ನು ಮುಸ್ಲಿಂ ಬಾಂಧವರು ಸೇರಿ ಎಲ್ಲಾ ವರ್ಗದವರು ಪಾಲ್ಗೊಳ್ಳಬೇಕು. ಶಾಂತಿ, ಸೌಹಾರ್ದತೆಯಿಂದ ಟಿಪ್ಪು ಜಯಂತಿಯನ್ನು ಸರಳವಾಗಿ ಆಚರಿಸಬೇಕು ಎಂದರು.
ಸಭೆಯಲ್ಲಿ ಶಿರಸ್ತೇದಾರ ಎಸ್.ಶ್ರೀಧರ್, ಮುಖಂಡರಾದ ಎಂ.ವಲಿ ಅಹ್ಮದ್, ಹಬೀಬ್ ರೆಹಮಾನ್, ಬಿ.ಜಾಫರ್, ಟಿ.ಜಾಫರ್ ಸಾಧಿಕ್, ಎಂ.ಮೆಹಮೂದ್, ಲಡ್ಡು ಹೊನ್ನೂರ್ವಲಿ, ಮುದ್ಗಲ್ ಶಬ್ಬೀರ್, ಮನ್ಸೂರ್, ಖಾದರ್ಭಾಷ, ಕೆ.ಮೆಹಬೂಬ್, ಅಂಚೆ ಅಜರುದ್ದೀನ್, ರೋಷನ್, ರಿಯಾಜ್, ಶರ್ಮಸ್, ವಾಸೀಮ್, ಭಾಷಾ ಸೇರಿ ಮುಸ್ಲಿಂ ಸಮುದಾಯದವರು ಸೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.