ಚುನಾವಣೆ ನಿಯೋಜಿತ ಅಧಿಕಾರಿಗಳಿಗೆ ಪೂರ್ವಭಾವಿ ಸಿದ್ಧತಾ ಸಭೆ

ಗದಗ 27: ಈ ಬಾರಿಯ ಲೋಕಸಭಾ ಚುನಾವಣೆ ನಿಷ್ಪಕ್ಷಪಾತವಾಗಿ ಶಾಂತಿ, ಸುವ್ಯವಸ್ಥಿತವಾಗಿ ನ್ಯಾಯಯುತ ನಡೆಯಬೇಕು ಎಂಬುದು ಭಾರತ ಚುನಾವಣಾ ಆಯೋಗ ಉದ್ದೇಶ.  ಅದಕ್ಕಾಗಿ ಚುನಾವಣೆಗೆ ನಿಯೋಜಿತ ಪ್ರತಿಯೊಬ್ಬ ಅಧಿಕಾರಿ ಹಾಗು ಸಿಬ್ಬಂದಿ ಜವಾಬ್ದಾರಿಯಿಂದ ಕರ್ತವ್ಯ ನಿಷ್ಟಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನುಡಿದರು.

ಸಾರ್ವತ್ರಿಕ ಲೋಕಸಭಾ ಚುನಾವಣೆ-2019ರ ಕುರಿತಂತೆ ಎಲ್ಲ ನಿಯೋಜಿತ ಚುನಾವಣಾಧಿಕಾರಿ  ಹಾಗೂ ಸಿಬ್ಬಂದಿಗಳಿಗಾಗಿ  ಏರ್ಪಡಿಸಿದ ಪೂರ್ವ ಸಿದ್ಧತಾ ತರಬೇತಿ ಸಭೆಯಲ್ಲಿ ಅವರು ಮಾತನಾಡಿದರು.  ಇಡೀ ಚುನಾವಣಾ ವ್ಯವಸ್ಥೆ ಒಂದು ತಂಡವಾಗಿ ಸಮನ್ವಯತೆ ಸಂವಹನ ಹಾಗೂ ಕ್ಷಿಪ್ರ ಕಾರ್ಯಾಚರಣೆಗೆ ಸದಾ ಸನ್ನದ್ಧತೆಯಿಂದ ಇರಲು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ಪಷ್ಟ ನಿದರ್ೇಶನ ನೀಡಿದರು.  ರಾಜಕೀಯ ವ್ಯಕ್ತಿ, ಪಕ್ಷಗಳ ಕುರಿತು ಜಿಲ್ಲೆ ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ  ಸಾರ್ವಜನಿಕವಾಗಿ ಕಾಣಬರುವ ಖಾಸಗೀ ಅಥವಾ ಸಕರ್ಾರಿ ಜಾಗೆ, ಗೋಡೆ ಬರಹಗಳನ್ನು ಆಯೋಗವು ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ 24 ಗಂಟೆಯೊಳಗಾಗಿ ತೆರವುಗೊಳಿಸಬೇಕು.    ಈ ಕುರಿತು ಸಂಪೂರ್ಣ ಜವಾಬ್ದಾರಿ ಆಯಾ ನಗರ ಪ್ರದೇಶದ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಗ್ರಾ.ಪಂ. ಗಳ ಯೋಜನಾಧಿಕಾರಿ ಇದ್ದು ಚುನಾವಣೆಯ ಸೆಕ್ಟರ್ ಅಧಿಕಾರಿಗಳು ಅವರೊಂದಿಗೆ ಸಮನ್ವಯತೆ ಸಾಧಿಸಿ ಯಾವುದೇ ರೀತಿ ಬರಹ, ಬ್ಯಾನರ್, ಒಂಟಿಂಗ್ ಪ್ರಚಾರ ಬಿತ್ತಿ ಇರದಂತೆ ನೋಡಿಕೊಳ್ಳಲು ಹಾಗೂ ಚುನಾವಣಾ ಸಂದರ್ಭದಲ್ಲಿ ಪರವಾನಿಗೆ ಇಲ್ಲದೇ ಕರ್ತವ್ಯದ ಸ್ಥಳವನ್ನು ಬಿಟ್ಟು ಹೋಗದಿರಲು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು 

        ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಚುನಾವಣೆಗಳು ಪ್ರಕಟವಾದ ಕ್ಷಣದಿಂದ ಈಗಾಗಲೇ ನೇಮಕವಾಗಿರುವ ಎಲ್ಲ ಸಂಬಂಧಿತ ತಂಡಗಳು ಕಾರ್ಯಾರಂಭ ಮಾಡುವ ಸಿದ್ಧತೆಯಲ್ಲಿ ಇರಬೇಕು.  ಮಾಡಬೇಕಾದ ಕರ್ತವ್ಯಗಳ ಕುರಿತು ಚುನಾವನಾ ಆಯೋಗದ ಮಾರ್ಗದಶರ್ಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಪ್ರಾಮಾಣಿಕವಾಗಿ, ನಿಷ್ಟೆಯಿಂದ ಒಬ್ಬರಿಗೊಬ್ಬರು ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ತಿಳಿಸಿದರು.

        ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ ಚುನಾವಣೆ ವೆಚ್ಚದ ನಿಗಾ ಸಂದರ್ಭದಲ್ಲಿ ವಿಡಿಯೋ ಸವರ್ೆಲನ್ಸ್, ವಿಡಿಯೋ ವಿವಿಂಗ್, ಸ್ಥಳದಲ್ಲೇ ವಿಡಿಯೋ ಚಿತ್ರೀಕರಣ ಹಾಗೂ ಜಾಗೃತದಳದ ಕಾರ್ಯ ಪಾಲನೆಯಲ್ಲಿ ವಹಿಸಬೇಕಾದ ಜಾಗೃತಿ, ವಾಸ್ತವಾಗಿ ಇರುವ ಅಂಶಗಳು, ನಿರ್ವಹಿಸಬೆಕಾದ ಕರ್ತವ್ಯಗಳ ಕುರಿತು ವಿವರಿಸಿದರು.

          ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿದರ್ೇಶಕ ಸದಾಶಿವ ಮಿಜರ್ಿ ಹಾಗೂ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗಿರಿತಮ್ಮನ್ನವರ ಅವರು ಎಲ್ಲ ನಿಯೋಜಿತ ಚುನಾವಣಾ ಅಧಿಕಾರಿ, ಸಿಬ್ಬಂದಿ, ಸೆಕ್ಟರ್ ಅಧಿಕಾರಿಗಳಿಗೆ ವಿವಿಧ ವಿಡಿಯೋ ಜಾಗೃತಿ ತಂಡಗಳಿಗೆ ಅವರು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಭಾರತ ಚುನಾವಣಾ ಆಯೋಗ ನಿದರ್ಿಷ್ಟ ಪಡಿಸಿದ ಕರ್ತವ್ಯಗಳ ಕುರಿತು ಮಾಹಿತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ವಿಧ್ಯುನ್ಮಾನ ಮತಯಂತ್ರಗಳ ಕುರಿತ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಲಾಯಿತು.