ಅಥಣಿ 28: ಲೋಕಸಭಾ ಚುನಾವಣೆ ಹಾಗೂ ಸಮರ್ಪಕ ಬರ ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಡಾ.ರಾಜೆಂದ್ರ ಕೆ.ವಿ.ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಎಚ್ಚರಿಸಿದರು.
ಅಥಣಿ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಚಿಕ್ಕೋಡಿ ಲೋಕಸಭಾ ಚುನಾವಣೆ ಹಿನ್ನೆಲಲೆಯಲ್ಲಿ ಅಥಣಿ ತಾಲೂಕಿನ 54 ಗ್ರಾಮ ಪಂಚಾಯತಿಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಪ್ರತಿ ಮತಗಟ್ಟೆಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಅಥಣಿ ತಾಲೂಕಿನಲ್ಲಿ ಬರಗಾಲದ ಸಮಸ್ಯೆ ಎದುರಾಗಿದ್ದು, ಈಗಾಗಲೇ 16 ಜನವಸತಿಗಳಲ್ಲಿ ಕುಡಿಯುವ ನೀರಿನ ಟ್ಯಾಂಕರಗಳನ್ನು ವ್ಯವಸ್ಥೆ ಮಾಡಲಾಗಿದೆ, ಮತ್ತೆ ಎಲ್ಲೆಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು ಎನ್ನುವುದನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ನೀರು ಪೂರೈಕೆ ಮಾಡುವ ಟ್ಯಾಂಕರಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು ಎಂದ ಅವರು ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಅನಿವಾರ್ಯ ಬಂದರೆ ಖಾಸಗಿ ವ್ಯಕ್ತಿಗಳ ಬೋರವೆಲ್ಗಳಿಂದ ನೀರು ಪಡೆದು ಸಮಸ್ಯೆ ನಿವಾರಣೆಗೆ ಮಾಡಲಾಗುವುದು ಎಂದು ಹೇಳಿದರು.
ನೆರೆ ಮಾಹಾರಾಷ್ಟ್ರದ ಕೋಯ್ನಾ ಡ್ಯಾಮಿನಿಂದ ನೀರು ಬಿಡುವುದಕ್ಕೆ ಆಗ್ರಹಿಸಿ ಡಿಸಿ ಮೂಲಕ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಸರಕಾರ ಮಾಹಾರಷ್ಟ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಎಂದರು.
ಬರಗಾಲವಿರುವ ಕಾರಣದಿಂದ ಉದ್ಯೋಗ ಖಾತ್ರಿ ಯೋಜನೆಯು ಯಾವುದೆ ಕಾರಣಕ್ಕೂ ಹಿಂದೆ ಉಳಿಯಬಾರದು , ನಿವೇಶನ ರಹೀತರಿಗೆ ಜಾಗ, ಅಂಗವಿಕಲರಿಗೆ ಮತದಾನ ಮಾಡಿಸಲು ವಾಹನ ವ್ಯವಸ್ಥೆ ಮಾಡಿಸಬೇಕು ಎಂದರು .
ಈಗಾಗಲೆ ಅಥಣಿ ಹಾಗೂ ಕಾಗವಾಡ ಚೆಕ್ಪೋಸ್ಟಗಳಲ್ಲಿ 4.5ಲಕ್ಷ ರೂಗಳನ್ನ ವಶಪಡಿಸಿಕೊಳ್ಳಲಾಗಿದೆ , 50000 ಕ್ಕೂ ಮಿಕ್ಕ ಹಣವನ್ನು ದಾಖಲೆಗಳಿದ್ದರೂ ಸಹ ತಗೆದುಕೊಂಡು ಹೋಗುತ್ತಿದ್ದರೆ ಅದನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದರು.
ಈಗಾಗಲೇ ಕೆಲ ಕಡೆ ಮತ್ತು ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ಇನ್ನೂ ಹೆಚ್ಚಿಗೆ ಅವಶ್ಯ ಇದ್ದಲ್ಲಿ ಪೋಲೀಸ್ ಇಲಾಖೆ ಸಂಗಡ ಚಚರ್ೆ ಮಾಡಿ ಸಂಚಾರಿ ವೀಕ್ಷಣಾ ದಳ ನೇಮಿಸಲಾಗುವುದು ಎಂದರು.
ತಾಪಂ ಸಿಈಓ ರವಿ ಬಂಗಾರೆಪ್ಪನವರ, ಬಿಇಓ ಸಿ.ಎಂ.ನೇಮಗೌಡ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಇಲಾಖೆಯ ಅಭಿಯಂತರ ಎ.ಟಿ.ಅಸ್ಕಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.