ಅಮೂಲ್ಯವಾದ ನೀರಿನ ಸದ್ಬಳಕೆ ಅತ್ಯವಶ್ಯಕ

 ಲೋಕದರ್ಶನ ವರದಿ

ವಿಜಯಪರ 10:ನೀರು ಅಮೂಲ್ಯವಾದದ್ದು. ಲಭ್ಯವಿರುವ ನೀರನ್ನು ಮಿತವಾಗಿ ಬಳಸಿ ಸದ್ಬಳಕೆ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್.ಹುರಳಿ ಅವರು ಅಭಿಪ್ರಾಯಪಟ್ಟರು 

ಅಂತರ್ಜಲ ನಿದರ್ೇಶನಾಲಯ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ತಿಕೋಟಾದ ಶ್ರೀ ಎ.ಬಿ.ಜತ್ತಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ಆಯೋಜಿಸಲಾದ ಅಂತರ್ಜಲದ ಮಹತ್ವ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಆರ್.ಕೆ.ಹನಗಂಡಿ ಅವರು ಮಾತನಾಡಿ, ನೀರಿನ ಮೂಲ ಕಂಡು ಹಿಡಿದ ವಿಜ್ಞಾನಿ ಮತ್ತು ಪ್ರೌಢಶಾಲೆಯ ಹಂತದಲ್ಲಿ ಮಕ್ಕಳು ನೀರಿನ ಮಹತ್ವ ಕುರಿತು ತಿಳಿದುಕೊಳ್ಳುವ ಅವಶ್ಯಕತೆ ಗಳ ಕುರಿತು ವಿವರಿಸಿದರು. ನೀರನ್ನು ಸದುಪಯೋಗ ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು. 

ಶ್ರೀಮತಿ ವಿಮಲಾ ಹಂದಿಗೋಳ ಅವರು ಮಾತನಾಡಿ, ನೀರು ಉಳಿಸುವುದು ಮತ್ತು ಇಂಗಿಸುವುದು ನಮ್ಮ ಸಂಸ್ಕೃತಿಯ ಭಾಗವಾಗಬೇಕು. ಇಲ್ಲವಾದರೆ ನೀರನ್ನು ನ್ಯಾಯ ಬೆಲೆ ಅಂಗಡಿಯಲ್ಲಿ ಕೊಂಡುಕೊಳ್ಳುವ ಪರಿಸ್ಥಿತಿ ಬರಲಿದೆ ಎಂದು ಹೇಳಿದರು.

ಅಂತರ್ಜಲ ನಿದರ್ೇಶನಾಲಯದ ಹಿರಿಯ ಭೂ ವಿಜ್ಞಾನಿ ಮಹೇಶ ಬಿರಾಜನವರ ಪಾವರ್ಪಾಯಿಂಟ್ ಪ್ರೆಜೆಂಟೇಶನ್ ಮೂಲಕ ನೀರು ಇಂಗುವಿಕೆಯ ವಿವಿಧ ಹಂತಗಳನ್ನು ಚಿತ್ರಗಳ ಮೂಲಕ ಮತ್ತು ವಿಡಿಯೋ ಮೂಲಕ ತೋರಿಸಿ, ಜಿಲ್ಲೆಯ ಅಂತರ್ಜಲದ  ಸ್ಥಿತಿಗಳನ್ನು ವಿವರಿಸಿದರು. 

ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪಧರ್ೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದ ಮಕ್ಕಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಯಿತು. 

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯ ಡಿ.ಪಿ.ಬೆಳ್ಳಗಿ, ಉಪ ಪ್ರಾಚಾರ್ಯ ವಿ.ಎಸ್. ಕಾಖಂಡಕಿ, ಡಿ.ಬಿ.ಪಾಟೀಲ, ಬಿ.ಸಿ.ನಾವಿ, ಪಿ.ಎಸ್.ಪಾಟೀಲ, ವ್ಹಿ.ಎಸ್. ಗಿರಡ್ಡಿ, ಎ.ಆರ್.ವಾಲೀಕಾರ, ಎನ್.ಪಿ. ಖಂಡೆಕಾರ ಇತರರು ಉಪಸ್ಥಿತರಿದ್ದರು. ಗ್ರಾಮೀಣ ಅಭಿವೃದ್ದಿ ಸಂಸ್ಥೆ ನಿದರ್ೇಶಕ ಡಾ.ಬಾಬು ಸಜ್ಜನ ಸ್ವಾಗತಿಸಿ, ನಿರೂಪಿಸಿದರು.