ಬೆಳಗಾವಿ: ಅವಘಡಗಳಿಗೆ ಮುನ್ನೆಚ್ಚರಿಕೆ ಕ್ರಮ ಅನುಸರಿಸುವದು ಅತ್ಯಗತ್ಯ

ಲೋಕದರ್ಶನ ವರದಿ

ಬೆಳಗಾವಿ 14:  ಅವಘಡಗಳಿಗೆ ಎಡೆಮಾಡಿಕೊಡದೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸುವದು ಅತ್ಯಗತ್ಯವಾಗಿದೆ ಎಂದು ಯು ಎಸ್ ಎಮ್ ಕೆ ಎಲ್ ಇ ಯ ನಿದರ್ೇಶಕ ಡಾ. ಹೆಚ್ ಬಿ ರಾಜಾಶೇಖರ ಮಾತನಾಡುತ್ತಿದ್ದರು. ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ನಡೆದ 4ನೇ ಪ್ರಥಮ ಚಿಕಿತ್ಸಾ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸುತ್ತ ಮಾತನಾಡುತ್ತಿದ್ದರು. ಇಂದು ಪ್ರಥಮ ಚಿಕಿತ್ಸೆಯ ಜ್ಞಾನದ ಅಭಾವದಿಂದ ಎಷ್ಟೋ ಜನರು ಅಸುನೀಗುತ್ತಿರುವದು ನೋಡಿದರೆ ತುಂಬ ಖೇದಕರವೆನ್ನಿಸುತ್ತದೆ. ಆದ್ದರಿಂದ ವೈದ್ಯ ವೃತ್ತಿಯಲ್ಲಿರುವ  ನಾವುಗಳು ಇದನ್ನು ಅಥರ್ೈಸಿಕೊಂಡು ಮತ್ತೊಬ್ಬರಿಗೆ ತಿಳಿಸಬೇಕು  ಕಲಿತ ಜ್ಞಾನ ಇನ್ನೊಬ್ಬರಿಗೆ ಪಸರಿಸುವಂತೆ ಮಾಡಬೇಕು ಇದರಿಂದ ನಾವು ತಿಳಿದುಕೊಂಡಿರುವದಕ್ಕೂ ಸಾರ್ಥಕವಾಗುತ್ತದೆ ಎಂದು ಕರೆ ನೀಡಿದರು.

ಕಾರ್ಯಕ್ರಮದ ಇನ್ನೊಬ್ಬ ಅತಿಥಿಯಾಗಿ ಆಗಮಿಸಿದ್ದ ಭಾರತೀಯ ಕೇಂಧ್ರ ಚಿಕ್ಕಮಕ್ಕಳ ವಿಭಾಗದ ಸಂಘಟನೆಯ ಸದಸ್ಯ ಡಾ ಪಥೆಪುರ  ಮಾತನಾಡುತ್ತ ಇದು ಒಂದು ಜೀವ ರಕ್ಷಿಸುವ ಕಲೆಯಾಗಿದ್ದು ವೈದ್ಯರಷ್ಟೇ ಅಲ್ಲದೇ ಪ್ರತಿಯೊಬ್ಬ ಸಾಮಾನ್ಯನು ಅರಿಯಬೇಕಾದ ಅತ್ಯಮೂಲ್ಯ ಅಂಶವಾಗಿದೆ ಇಂತಹ ಕೌಶಲ್ಯ ತರಬೇತಿಗಳಿಂದ ಅರಿತ ಜ್ಞಾನ ಸಮಯಕ್ಕನುಗುಣವಾಗಿ ಉಪಯೋಗಕ್ಕೆ ಬಂದು ಜೀವ ಉಳಿಸುವಂತಾಗಲಿ ಎಂದು ಹಾರೈಸಿದರು. 

ಕಾರ್ಯಕ್ರಮದ ಸಂಯೋಜನಾ ಚೇರಮನ್ರಾದ  ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿದರ್ೇಶಕ ಡಾ. ಎಸ್.ಸಿ.ಧಾರವಾಡ ಮಾತನಾಡುತ್ತಾ ಇಂದು ಪ್ರಥಮಚಿಕಿತ್ಸಾ ಕೌಶ್ಯಲ್ಯಗಳು ಜೀವನದ ಅವಿಭಾಜ್ಯ ಅಂಶವಾಗಿದ್ದು, ಅಪಘಾತ, ಹೃದಯಾಘಾತ ಮತ್ತಿತರೆ ತುತರ್ು ಸಂದರ್ಭಗಳಲ್ಲಿ ಅತ್ಯುಪಕಾರಿಯಾಗಿವೆ. ಇವುಗಳ ಮುಖೇನ ವೈದ್ಯರಷ್ಟೇ ಅಲ್ಲದೇ ಪ್ರತಿಯೊಬ್ಬ ನಾಗರಿಕನೂ ಜೀವ ಉಳಿಸಲು ಶಕ್ತರಾಗಬೇಕಿದೆ. ಯಾವಾಗ? ಯಾರಿಗೆ?  ಯಾವತೆರನಾದ ತುತರ್ು ಸಂದರ್ಭಗಳು ಎದುರಾಗುತ್ತವೆ ಎಂದು ಹೇಳಲು ಬರುವದಿಲ್ಲವಾದ್ದರಿಂದ ಪ್ರತಿಯೊಂದು ಸಮಯವನ್ನು ಎದುರಿಸಲು ಸಿದ್ದರಾಗಿರಬೇಕೆಂದು ಕರೆ ನಿಡಿದರು. 

ಕಾರ್ಯಕ್ರಮದಲ್ಲಿ  ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆ ಎಚ್ ಎಸ ಲೇಕವಿವ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಹೆಸರಾಂತ ಡಾ. ವಿಜಯಲಕ್ಷ್ಮಿ ಕುಲಗೋಡ, ಡಾ. ಶೈಲೇಶ ಪಾಟೀಲ,  ಡಾ. ಶರದ ಶ್ರೇಷ್ಠಿ   ಮತ್ತು ಡಾ. ಜ್ಯೋತಿ ಜಿ ಮುಂತಾದವರು ಪ್ರಥಂ ಚಿಕಿತ್ಸೆಯ ಅನೇಕ ವಿಷಯಗಳ ಮೇಲೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ  ಎಲ್ ಇ ಶತಮಾನೊತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ಎಸ್ ಎಸ್ ಕಡ್ಡಿ, ಹಾಗೂ ತಜ್ಞ ವೈದ್ಯರಾದ ಡಾ. ಅನಿತಾ ಮೋದಗೆ, ಡಾ. ಸಂತೋಷಕುಮಾರ ಕರಮಸಿ, ಡಾ. ಸೌಮ್ಯ ವೇಣರ್ೇಕರ  ಹಿರಿಯ ವೈದ್ಯರಾದ ಡಾ. ಬಿ ಎಸ ಮಹಾಂತಶೆಟ್ಟಿ, ಮಕ್ಕಳತಜ್ಞರಾದ ಡಾ.ಸುರೇಶ ಕಾಖಂಡಕಿ ಹಾಗೂ ಡಾ. ಬಸವರಾಜ ಕುಡಸೋಮಣ್ಣವರ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಸೌಮ್ಯಾ ವೇಣರ್ೇಕರ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ  ಸುಮಾರು 60ಕ್ಕೂ ಅಧಿಕ ಪ್ರಶೀಕ್ಷಣಾಥರ್ಿಗಳು ಭಾಗವಹಿಸಿದ್ದರು.