ರಾಯಬಾಗ 19: ಮಾ.21ರಿಂದ ಎ.4ರವರೆಗೆ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಸುಗಮವಾಗಿ ಮತ್ತು ಯಾವುದೇ ಲೋಪದೋಷವಿಲ್ಲದೆ ನಡೆಸಲು ತಾಲೂಕಿನಲ್ಲಿ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎ.ಬಜಂತ್ರಿ ತಿಳಿಸಿದರು.
ಮಂಗಳವಾರ ಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಕಾಯರ್ಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟು 5982 ವಿದ್ಯಾಥರ್ಿಗಳು ಪರೀಕ್ಷೆ ಎದುರಿಸಲಿದ್ದಾರೆ. ತಾಲೂಕಿನಲ್ಲಿ ಒಟ್ಟು 18 ಕೇಂದ್ರಗಳಿದ್ದು, ರಾಯಬಾಗ, ಹಾರೂಗೇರಿ ಮತ್ತು ಕುಡಚಿ ಗಳಲ್ಲಿ ಕ್ಲಸ್ಟರ್ ಸಹಿತ 6, ಕ್ಲಸ್ಟರ್ ರಹಿತ 12 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. 18 ಪರೀಕ್ಷಾ ಕೇಂದ್ರಗಳಲ್ಲಿ 400 ಜನ ಶಿಕ್ಷಕರು ಕೊಠಡಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. 18 ಸ್ಥಾನಿಕ ವಿಚಕ್ಷಕ ದಳಗಳು, 7 ಜನ ಮಾಗರ್ಾಧಿಕಾರಿ ಹಾಗೂ 2 ಸಂಚಾರಿ ವಿಚಕ್ಷಕ ದಳಗಳನ್ನು ರಚಿಸಲಾಗಿದೆ. ಎಲ್ಲ ಪರೀಕ್ಷೆ ಕೇಂದ್ರಗಳಲ್ಲಿ ಶಾಂತಿಯುತವಾಗಿ ಪರೀಕ್ಷೆಗಳು ನಡೆಸಲು ಸೂಕ್ತ ಬಂದೋಬಸ್ತ ಒದಗಿಸಲು ರಾಯಬಾಗ ಸಿಪಿಐ ಹಾಗೂ ರಾಯಬಾಗ, ಕುಡಚಿ, ಹಾರೂಗೇರಿ ಪಿಎಸ್ಐ ಅವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ನೋಡಲ ಅಧಿಕಾರಿ ಡಿ.ಎಸ್.ಡಿಗ್ರಜ ಉಪಸ್ಥಿತರಿದ್ದರು.