ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ 2025-26 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ

Pre-budget meeting for the year 2025-26 at the Vidhana Soudha Conference Hall

ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ 2025-26 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ

ಗದಗ 14 : 25-26 ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ನದಾಫ್‌- ಪಿಂಜಾರ ಸಮುದಾಯಕ್ಕೆ ಅನುದಾನ ನೀಡಿರುವುದಿಲ್ಲ.ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು,ನಮಗೆ ಅಲ್ಪಸಂಖ್ಯಾತರ ನಿಗಮದಿಂದ ಶೇ 30ಅ ರಷ್ಟು ಅನುದಾನ ಒದಗಿಸಬೇಕೆಂದು ಕರ್ನಾಟಕ ರಾಜ್ಯ ನದಾಫ್‌- ಪಿಂಜಾರ ಸಮುದಾಯದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ ಎಂ ಗಾಡಗೊಳಿ ತಿಳಿಸಿದರು.                   ಕನಾಟಕ ರಾಜ್ಯದಲ್ಲಿ ನದಾಫ್‌/ಪಿಂಜಾರ ಸಮುದಾಯವು ಸುಮಾರು 25-30 ಲಕ್ಷ ಜನಸಂಖ್ಯೆ ಇದ್ದು, ನಮ್ಮ ಜನಾಂಗದವರ ಕುಲ ಕಸುಬು ಹತ್ತಿಯಿಂದ ಹಾಸಿಗೆ, ದಿಂಬು, ಹಗ್ಗ, ಕಣ್ಣಿ ಇತ್ಯಾದಿ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡುವುದು ಜೀವನೋಪಾಯದ ದಾರಿಯಾಗಿರುತ್ತದೆ. ನಮ್ಮ ಸಮಾಜದವರು ಅಲೆಮಾರಿಗಳಾಗಿದ್ದು, ಅತ್ಯಂತ ಹಿಂದುಳಿದ ಸಮಾಜವೆಂದು ಸರ್ಕಾರ ಗುರುತಿಸಿ, 1993 ರಲ್ಲಿ ವೃತ್ತಿ ಆಧಾರದ ಮೇಲೆ ಪ್ರವರ್ಗ-1 ರಲ್ಲಿ ಮೀಸಲಾತಿಯನ್ನು ನೀಡಿರುತ್ತಾರೆ. ಪ್ರವರ್ಗ- 1 ರಲ್ಲಿ ಇತರೆ 117 ಜಾತಿಯವರೊಂದಿಗೆ ಸ್ಪರ್ದೆ ಮಾಡಿ ಶೇ.4 ರ ಒಟ್ಟು ಮೀಸಲಾತಿಯಲ್ಲಿ ಹುದ್ದೆಗೆ ಆಯ್ಕೆಯಾಗುವುದು ಕಷ್ಟ ಸಾಧ್ಯವಾಗಿರುತ್ತದೆ. ಆದ್ದರಿಂದ ನದಾಫ್‌/ಪಿಂಜಾರ ಜನಾಂಗದವರು ಇದುವರೆಗೆ ಲೋಕಸೇವಾ ಆಯೋಗದ ನೇರ ನೇಮಕಾತಿಯಲ್ಲಿ ಕೆ ಎ ಎಸ್ ಹುದ್ದೆಗೆ ಆಯ್ಕೆ ಆಗಿರುವುದಿಲ್ಲ. ಕೇಂದ್ರದ ಐ ಎ ಎಸ್‌/ ಐ ಪಿ. ಎಸ್ ಗೂ ಸಹ ಆಯ್ಕೆ ಆಗಿರುವುದಿಲ್ಲ. ಮುಂದಿನ 15 ದಿನಗಳಲ್ಲಿ ಸರಕಾರ ಮತ್ತೊಂದು ಆಯವ್ಯಯ ಮಂಡಿಸಲಿದ್ದು, ಅಂದು ನಮ್ಮ ಸಮಯದಾಯಗಳಿಗೆ ಅನುದಾನಲ್ಲಿ ಅವಕಾಶ ಕಲ್ಪಿಸಬೇಕು. ರಾಜಕೀಯದಲ್ಲಿ ನಮ್ಮ ಸಮುದಾಯ ತುಂಬಾ ಹಿಂದಿದೆ ನಾವು ಅಲೆಮಾರಿಗಳಾಗಿದ್ದು, ಕೈಗಾರಿಕೆಯೇ ನಮ್ಮ ಮುಖ್ಯ ಕಸುಬು ಆದರೆ ಅದು ಸಂಪೂರ್ಣವಾಗಿ ಕುಸಿದಿದೆ.ಎಲ್ಲ ಸಮುದಾಯದವರೊಂದಿಗೆ ಸಹಬಾಳು ನಡೆಸಿಕೊಂಡು ಬಂದಿರುವುದಾಗಿ ಎಂ ಎಂ ಗಾಡಗೊಳಿ ಹೇಳಿದರುಇದೇ ವೇಳೆ ಕರ್ನಾಟಕ ರಾಜ್ಯ ನದಾಫ್‌-ಪಿಂಜಾರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆ ಎಫ್ ಹಳ್ಯಾಳ ಮಾತನಾಡಿ ಜಿಲ್ಲಾ ಮತ್ತು ತಾಲೂಕ ಮಟ್ಟದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ನಮ್ಮ ಸಮುದಾಯಕ್ಕೆ ದೊರೆಯಬೇಕಾದ ಅನುದಾನವನ್ನ ಸರಕಾರದಿಂದ ಪಡೆದುಕೊಳ್ಳುವ ಉದ್ದೇಶ ಹೊಂದಿದೆ.ನಮ್ಮ ಉದ್ಯೋಗದಿಂದ ಪ್ರತಿದಿನದ ಜೀವನ ನಡೆಸುವುದು ಕಷ್ಟದ ಕೆಲಸವಾಗಿದ್ದು, 2023 ರಲ್ಲಿ ಸರ್ಕಾರ “ಹಿಂದುಳಿದ ವರ್ಗಗಳ ಪ್ರವರ್ಗ-1 ರ ನದಾಫ್‌/ಪಿಂಜಾರ ಹಾಗೂ ಇತರೆ 13 ಜಾತಿಗಳ ಅಭಿವೃದ್ಧಿ ನಿಗಮ (ಏಚಿಡಿಟಿಚಿಣಚಿಞಚಿ ಖಣಚಿಣಜ ಃಚಿಛಿಞತಿಚಿಡಿಜ ಅಟಛಿ ಖಟಚಿಟಟ ಅಠಟಣಟಿಣ ಆಜತಜಟಠಟಜಟಿಣ ಅಠಠಿಠಚಿಣಠ) ವನ್ನು ಸ್ಥಾಪಿಸಲು ಆದೇಶವಾಗಿರುತ್ತದೆ. ಕಳೆದ 2 ವರ್ಷಗಳಿಂದ ಸಂಬಂಧಪಟ್ಟ ಸಚಿವರಿಗೆ ಅನೇಕ ಸಲ ಮನವಿಗಳನ್ನು ಸಲ್ಲಿಸಲಾಗಿತ್ತು, 2024 ರಲ್ಲಿ ಹಾಗೂ ದಿನಾಂಕ: 18-02-2025 ರಂದು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ 2025-26 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯನ್ನು ಮಾನ್ಯ ಮುಖ್ಯಮಂತ್ರಿಗಳವರ ಅಧ್ಯಕ್ಷತೆಯಲ್ಲಿ “ರಾಜ್ಯ ಹಿಂದುಳಿದ ವರ್ಗಗಳ ಸಂಘಟನೆಗಳು ಮುಖಂಡರುಗಳೊಂದಿಗೆ ನಡೆದ ಸಭೆಯಲ್ಲಿ” ಸಹ ವಿಷಯವನ್ನು ಪ್ರಸ್ತಾಪಿಸಲಾಗಿತ್ತು,   ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಹ ಸಲ್ಲಿಸಲಾಗಿದೆ. ಕರ್ನಾಟಕ ರಾಜ್ಯ ನದಾಫ್‌/ಪಿಂಜಾರ ಸಂಘದ ವತಿಯಿಂದ ಸತತವಾಗಿ ಮನವಿಗಳನ್ನು ಸಲ್ಲಿಸಿ  ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಪಟ್ಟ ಸಚಿವರುಗಳಿಗೆ ಖುದ್ದಾಗಿ ಭೇಟಿ ಮಾಡಿ ಮನವಿಗಳನ್ನು ಸಲ್ಲಿಸಿದ್ದರೂ ಸಹ ನಮ್ಮ ಕೋರಿಕೆಗಳಿಗೆ ಹಾಗೂ ಮನವಿಗಳನ್ನು ಪರಿಗಣಿಸದೆ, ಇದುವರೆಗೆ ಯಾವುದೇ ಅನುದಾನವನ್ನು ಕೊಟ್ಟಿರುವುದಿಲ್ಲ. ಇದು ಅತ್ಯಂತ ಶೋಚನೀಯ ಸಂಗತಿ, ರಾಜ್ಯದ ಎಲ್ಲಾ ಜನತೆಗೆ “ಸಮ ಪಾಲು ಸಮ ಬಾಳು” ಎಂದು ವಾಕ್ಯ ಘೋಷಣೆ ಮಾಡಿದ ಈ ಸರ್ಕಾರ ಅಲ್ಪ ಸಂಖ್ಯಾತರಲ್ಲಿ ಅತ್ಯಂತ ಹಿಂದುಳಿದ ನಮ್ಮ ನದಾಫ್‌/ಪಿಂಜಾರ ಸಮುದಾಯದವರಿಗೆ ನ್ಯಾಯ ದೊರಕಿಸುವಲ್ಲಿ ವೈಫಲ್ಯತೆ ತೋರುತ್ತಿದ್ದು,ಸರಕಾರ  ನದಾಫ್‌-ಪಿಂಜಾರ ಸಮುದಾಯದ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ಜಿಲ್ಲಾಧ್ಯಕ್ಷ ಕೆ ಎಫ್ ಹಳ್ಯಾಳ ತಿಳಿಸಿದರು.                 ಪತ್ರಿಕಾ ಗೋಷ್ಠಿ ವೇಳೆ ಗದಗ ತಾಲೂಕ ಅಧ್ಯಕ್ಷ ಅಪ್ಪಾಸಾಬ ನದಾಫ್, ಎಂ ಬಿ ನದಾಫ್, ಎಚ್ ಆರ್ ನದಾಫ್, ಶರೀಫಸಾಬ ನೂರಬಾಷಾ, ದಾವಲಸಾಬ ನದಾಫ್ ಸೇರಿದಂತೆ ಇತರರಿದ್ದರು.