ಈದ್ ಮಿಲಾದ್ ಹಬ್ಬದ ಪೂರ್ವಭಾವಿ ಸಭೆ

ಮಹಾಲಿಂಗಪುರ 20: ಆರಕ್ಷಕ ಠಾಣೆಯಲ್ಲಿ ದಿ. 21  ರಂದು ನಡೆಯುವ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಗರದ ಪ್ರಮುಖರನ್ನು ಕರೆದು ಶಾಂತಿ ಸಭೆಯನ್ನು ಠಾಣಾಧಿಕಾರಿಯಾದ ರವಿ ಧರ್ಮಟ್ಟಿ ಅವರ ಸಮ್ಮುಖದಲ್ಲಿ ನಡೆಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಜಿ.ಪಂ. ಸದಸ್ಯರಾದ ಮಹಾಂತೇಶ ಹಿಟ್ಟಿನಮಠ ಅವರು ಮಹಾಲಿಂಗಪುರ ಭಾವೈಕ್ಯತೆಗೆ ಹೆಸರಾಗಿದೆ. ಹಿಂದುಗಳ ಹಬ್ಬಗಳಲ್ಲಿ ಮುಸಲ್ಮಾನರು, ಮುಸಲ್ಮಾನರ ಹಬ್ಬದಲ್ಲಿ ಹಿಂದುಗಳು ಬಹಳ ಅನ್ಯೋನ್ಯವಾಗಿ ಪಾಲ್ಗೊಂಡು ಹಬ್ಬಗಳನ್ನು ಆಚರಿಸುತ್ತ ಬಂದದ್ದು ಇದೆ. ಇದರಿಂದ ಈ ನಮ್ಮ ನಗರದಲ್ಲಿ ಯಾವುದೇ ಭೇದ-ಭಾವ ಇಲ್ಲ. ಆದ್ದರಿಂದ ಅಶಾಂತಿಗೆ ಆಸ್ಪದವಿರುವದಿಲ್ಲವೆಂದು ಮಾಮರ್ಿಕವಾಗಿ ಮಾತನಾಡಿದರು.

ಅದೇ ರೀತಿ ಕೊನೆಯಲ್ಲಿ ಠಾಣಾಧಿಕಾರಿಗಳು ಸಭೆಯಲ್ಲಿ ಸೇರಿದ ಜನರನ್ನು ಉದ್ದೇಶಿಸಿ ನಾನು ಎಲ್ಲ ಕಡೆ ಕೆಲಸ ಮಾಡಿದ್ದೇನೆ. ಆದರೆ ಮಹಾಲಿಂಗಪುರದಂತಹ ಅನ್ಯೋನ್ಯವಾಗಿರುವಂತ ಎರಡೂ ಕೋಮಿನ ಜನರನ್ನು ಎಲ್ಲಿಯೂ ಕಂಡಿಲ್ಲ ಹಾಗೂ ನನಗೆ ಈ ಊರಿನಲ್ಲಿ ನೌಕರಿ ಮಾಡಲಿಕ್ಕೆ ಬಹಳ ಸಂತೋಷವಾಗಿದೆ ಎಂದರು. ಈ ಹಬ್ಬವನ್ನು ಕೂಡಾ ತಾವೆಲ್ಲರೂ ಸೇರಿ ಶಾಂತಿಯುತವಾಗಿ ಆಚರಿಸಬೇಕೆಂದು ಮನವಿ ಮಾಡಿಕೊಂಡರು.

ಈ ಸಭೆಯಲ್ಲಿ ಶೇಖರ ಅಂಗಡಿ, ಉಳ್ಳಾಗಡ್ಡಿ ಸರ್, ಅಬ್ದುಲಗಫುರ ಆಲಗೂರ, ರವಿ ಜವಳಗಿ, ನಾಗೇಶ ನಾಯಕ, ನಬಿ ಯಕ್ಸಂಬಿ, ಮೀರಾ ತಟಗಾರ, ಫಾರುಕ ಪಕಾಲಿ, ಹಾಸಿಂಪೀರ ಮಕಾನದಾರ  ಭೀಮಶಿ ಗೌಂಡಿ, ಸುನೀಲ ಭೋಸಲೆ, ಇನ್ನೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.