ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ ದಂಪತಿಗಳಿಂದ ಮಳೆಗಾಗಿ ಪ್ರಾರ್ಥನೆ-ವಿಶೇಷ ಪೂಜೆ

ಲೋಕದರ್ಶನ ವರದಿ

ಕೊಪ್ಪಳ 24: ತಾಲೂಕಿನ ತಿಗರಿ ಗ್ರಾಮದ ಬಳಿಯ ತುಂಗಭದ್ರಾ ನದಿಯ ಹತ್ತಿರದ ಮರುಳಸಿದ್ದೇಶ್ವರ ಸ್ವಾಮಿಯ ಗದ್ದುಗೆಯಲ್ಲಿ ಮಳೆಗಾಗಿ ಪ್ರಾರ್ಥನೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮವನ್ನು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ ಸಿ.ವಿ ಚಂದ್ರಶೇಖರ ದಂಪತಿಗಳ ನೇತೃತ್ವದಲ್ಲಿ ನೆರವೇರಿಸಲಾಯಿತು.

ಈ ಕುರಿತು ಮಾತನಾಡಿದ ಸಿ.ವಿ ಚಂದ್ರಶೇಖರ ಅವರು ಮರುಳಸಿದ್ದೇಶ್ವರರ ಪವಾಡಗಳ ಕುರಿತು ಜನಮಾನಸದಲ್ಲಿರುವ ನಂಬಿಕೆಗಳು ಮತ್ತು ಭಕ್ತಿಯೇ ಈ ಕಾರ್ಯಕ್ರಮಕ್ಕೆ ಪ್ರೇರಣೆ ಯಾವುದೇ ಮಾರ್ಗದಿಂದಾಗಲಿ ಜನರಿಗೆ ಒಳಿತಾಗಬೇಕು. ರೈತರ ಮುಖದಲ್ಲಿ ಮಂದಹಾಸ ಮೂಡಬೇಕು, ಜಗತ್ತಿಗೆ ಅನ್ನ ಕೊಡುವ ರೈತ ಇವತ್ತು ಸರಿಯಾಗಿ ಮಳೆ ಇಲ್ಲದೆ ಸಾಲಗಾರನಾಗಿ ಎದುರಿಸುತ್ತಿರುವ ಸಮಸ್ಯೆಗಳು ಅಷ್ಟಿಷ್ಟಲ್ಲ ಆದ್ದರಿಂದ ಈ ಹಿಂದಿನಿಂದಲೂ ಈ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದಾಗಲೆಲ್ಲ ಉತ್ತಮವಾದ ಮಳೆ ಬೆಳೆ ಆಗಿದೆ ಎನ್ನುವ ಉದ್ದೇಶದಿಂದ ಈ ಪೂಜೆಯನ್ನು ಕೈಗೊಂಡಿದ್ದೇವೆ. ಆ ದೇವರ ಆಶೀವರ್ಾದದಿಂದ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಾಥರ್ಿಸುತ್ತೇನೆ ಎಂದರು.

ಬಿಜೆಪಿ ಹಿರಿಯ ಮುಖಂಡರಾದ ಅಪ್ಪಣ್ಣ ಪದಕಿ, ಈಶಪ್ಪ ಮಾದಿನೂರು, ಬಸಣ್ಣ ಗೋಡೆ, ನೀಲಕಂಠಯ್ಯ ಹಿರೇವ್ಮಠ, ನಾಗನಗೌಡ್ರು ಡಂಬ್ರಳ್ಳಿ, ಹಾಲೇಶ್ ಕಂದಾರಿ, ಮಲ್ಲಪ್ಪ ಬೆಲೇರಿ, ದೇವರಾಜ ಹಾಲಸಮುದ್ರ, ವಿರೇಶ ಸಜ್ಜನ್, ಶರಣಪ್ಪ ಮತ್ತೂರ, ಸುರೇಶ ದಾಸರೆಡ್ಡಿ, ಉಮೇಶಗೌಡ, ವಸಂತರೆಡ್ಡಿ, ಜಗದೀಶ ತೆಗ್ಗಿನಮನಿ ಸೇರಿದಂತೆ ಬಿಜೆಪಿ ಮಹಿಳಾ ಮೋಚರ್ಾದ ಪಧಾದಿಕಾರಿಗಳಾದ ಮಧುರಾ ಕರಣಂ, ಹೇಮಲತಾ ನಾಯಕ್, ವೀಣಾ ಬನ್ನಿಗೋಳ, ವಾಣಿಶ್ರೀ ಮಠದ್, ಜಯಶ್ರೀ ಗೊಂಡಬಾಳ ಸೇರಿದಂತೆ  ಬಿಜೆಪಿ ಯುವಮೋಚರ್ಾ ಪಧಾದಿಕಾರಿಗಳು, ರೈತ ಮೋಚರ್ಾ ಪಧಾದಿಕಾರಿಗಳು ಹಾಗೂ ಊರಿನ ಹಿರಿಯರು ಮಹಿಳೆಯರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.