ಮಳೆಗಾಗಿ ಮುಸ್ಲಿಂ ಬಾಂಧವರಿಂದ ಪ್ರಾರ್ಥನೆ


ಲೋಕದರ್ಶನ ವರದಿ

ಮುಂಡಗೋಡ: ಮಳೆಗಾಗಿ ಮುಸ್ಲಿಂ ಬಾಂದವರು  ಅಲ್ಹಾನಿಗೆ ಪ್ರಾರ್ಥನೆ ಸಲ್ಲಿಸಿದರು.ಬುಧವಾರ   ಮಧ್ಯಾಹ್ನದ(ಜೋಹರ) ನಮಾಜ ಮಾಡಿಕೊಂಡು ನೂರಾನಿ ಮಸ್ಜೀದ  ಹೊರ ಆವರಣದಲ್ಲಿ  ಸುಡು ಬಿಸಿಲಿನಲ್ಲಿ ನಿಂತು ಅಲ್ಹಾನಿಗೆ ಪ್ರಾರ್ಥನೆ ಸಲ್ಲಿಸುತ್ತಾ ದಯಾಮಯಿ ಕರುಣಾಮಯಿ ಯಾದ ನೀನು  ಸುಡುಬಿಸಿಲಿನಿಂದ ತತ್ತರಿಸುತ್ತಿರುವ ನಮಗೆ ಮಳೆ ದಯಪಾಲಿಸಿ ತಂಪನ್ನು ಹರಡುವಂತೆ ಮಾಡು. ಎಲ್ಲಡೆ ನೀರಿನ ಹಾಹಾಕಾರ ಎದ್ದಿದೆ ಜಗತ್ತಿಗೆ ಮಳೆ ಕರುಣಿಸು ಎಲ್ಲರಿಗೂ ನೀರು ದಯಪಾಲಿಸು. ಮಳೆ ಇಲ್ಲದೆ ಭೂಮಿಯು ಬಣಗುಟ್ಟುತ್ತಿದೆ. ಹಸಿರಿನಿಂದ ಕಂಗೋಳಿಸಬೇಕಾದ ಗಿಡಮರಗಳು ಒಣಗುತ್ತಿವೆ. ಜಲಬಾಧೆಯಿಂದ ಜನ-ಜಾನವಾರು ಕೆಂಗಟ್ಟಿವೆ, ನಮ್ಮಿಂದಾಗಲಿ ಯಾರಿಂದಾದರು ತಿಳಿದು ತಿಳಿಯದೇ ತಪ್ಪಾಗಿದ್ದರೆ ಕ್ಷಮಿಸಿ ಈ ಭೂಮಿಯ ಮೇಲೆ ನೀರು ಹರಿಸು.  ನದಿಗಳು, ಕೆರೆ ಕಟ್ಟೆಗಳು ಹಳ್ಳಕೊಳ್ಳಗಳು ನೀರಿನಿಂದ ತುಂಬುವಂತೆ ಮಾಡು ಕ್ಷಮಾದಾತನಾದ ನೀನು ಜಗತ್ತಿಗೆ ನೀನೆ ದೊಡ್ಡವನು ನೀನು  ಕರುಣಿಸಿದರೆ ಮಳೆ ಈಗಿನಿಂದಲೇ ಬರುತ್ತೆ. ದಯಮಾಡಿ ನಮ್ಮ ತಪ್ಪುಗಳನ್ನು ಮನ್ನಿಸಿ ಮಳೆಕರುಣಿಸು ಭೂಮಿಯನ್ನು ನಳನಳಸುವಂತೆ ಮಾಡು. ನೀರಿನ ಹಾ ಹಾ ಕಾರ ತಪ್ಪಿಸು ಮಳೆ ಬಾರದೆ ಇದ್ದರೆ ಜನ ಜಾನವಾರು ಇರಲು ಸಾಧ್ಯವೆ. ಭೂಮಿ ಹದಮಾಡಲು ಈಗ ಮಳೆಯ ಅವಶ್ಯಕತೆ ಇದೆ. ಮಳೆಯ ನಿರೀಕ್ಷೆಯಲ್ಲಿ ರೈತರು ಕುಳಿತ್ತಿದ್ದಾರೆ. ನೀರು ಇಲ್ಲಂದಮೇಲೆ ಭೂಮಿಯ ಮೇಲೆ ಜೀವರಾಶಿಗಳು ಉಳಿಯಲು ಸಾಧ್ಯವೆ. ಏ ದೇವರೆ ನೀನು ಮಳೆಕರುಣಿಸುತ್ತಿಯಾ ಎಂದು ನಂಬಿದ್ದೇವೆ ಅಲ್ಹಾನ ನೀನು ಮಳೆ ಕರಣಿಸು  ಎಂದು ಪ್ರಾರ್ಥಿಸಿದರು.